ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನ ಭಾರತೀಯ ಸೇನೆಗೆ ನೂತನ ಸಿಡಿಎಸ್ (Chief of Defence Staff) ಆಗಿ ನೇಮಕ ಮಾಡಲಾಗಿದೆ. ಹುತಾತ್ಮ ಬಿಪಿನ್ ರಾವತ್ ಬಳಿಕ ಸಿಡಿಎಸ್ ಸ್ಥಾನವನ್ನ ಅಲಂಕರಿಸಲಿರುವ ಎರಡನೇ ದಂಡನಾಯಕ ಅನ್ನೋ ಹೆಗ್ಗಳಿಕೆಗೆ ಅನಿಲ್ ಚೌಹಾಣ್ ಪಾತ್ರರಾಗಲಿದ್ದಾರೆ.
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ನಿಧನರಾಗಿ 9 ತಿಂಗಳ ಬಳಿಕ ಅವರ ಸ್ಥಾನಕ್ಕೆ ನೂತನ ಸಾರಥಿಯನ್ನ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು 2021ರಲ್ಲಿ ಪೂರ್ವ ಕಮಾಂಡ್ನ ಮುಖ್ಯಸ್ಥ ಸ್ಥಾನದಿಂದ ನಿವೃತ್ತರಾಗಿದ್ದರು.
ಇವರೆ ಸೇನಾ ವ್ಯವಹಾರಗಳ ಸಚಿವಾಲಯಕ್ಕೆ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ 2021ರ ಡಿಸೆಂಬರ್ 8ರಂದು ಬಿಪಿಎನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ರು. ಅದಾದ ಬಳಿಕ ಈ ಹುದ್ದೆಗೆ ಕೇಂದ್ರ ಸರ್ಕಾರ ಯಾರನ್ನೂ ನೇಮಕ ಮಾಡಿರಲಿಲ್ಲ. ಈಗ ಅನಿಲ್ ಚೌಹಾಣ್‌ರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post