ದೇಶಾದ್ಯಂತ ನೂರಾರು ದಾಳಿಗಳನ್ನು ನಡೆಸಿ ಹಲವರನ್ನು ಬಂಧನ ಮಾಡಿದ ಬಳಿಕ ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯಗಳಿಗೆ ಹಣದ ನೆರವು ನೀಡಿದ ಆರೋಪ ಮೇರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ನಿಷೇಧ ಮಾಡಿದೆ. ಇದರ ಮಧ್ಯೆ ಕೇರಳದ ಸಾರಿಗೆ ಇಲಾಖೆ ನಿಷೇಧಿತ ಪಿಎಫ್‌ಐ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ.
5.06 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಿ ಕೇರಳ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ (ಕೆಎಸ್ಆರ್ಟಿಸಿ) ಅಲ್ಲಿನ ಹೈಕೋರ್ಟ್ ಮೆಟ್ಟಿಲೇರಿದೆ. ಪಿಎಫ್‌ಐ ಸಂಘಟನೆಯ ಸದಸ್ಯರ ನಿವಾಸದ ಮೇಲೆ ಎನ್ಐಎ ದಾಳಿ ನಡೆಸಿತ್ತು. ಈ ದಾಳಿಯನ್ನ ಖಂಡಿಸಿದ್ದ ಪಿಎಫ್‌ಐ ಸೆಪ್ಟೆಂಬರ್ 23 ರಂದು ಕೇರಳ ಬಂದ್ಗೆ ಕರೆ ನೀಡಿತ್ತು. ನಿಷೇಧಿತ ಪಿಎಫ್‌ಐ ಸಂಘಟನೆ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು.
ಈ ಹಿಂಸಾಚಾರದಲ್ಲಿ ಕೇರಳದ ಕೆಎಸ್ಆರ್ಟಿಸಿಗೆ ಸೇರಿದ 70 ಬಸ್ಗಳಿಗೆ ಹಾನಿಯಾಗಿತ್ತು. ಮಾತ್ರವಲ್ಲ ಸಾರಿಗೆ ಸಿಬ್ಬಂದಿಗೆ, ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯರಿಗೆ ಗಂಭೀರ ರೀತಿಯ ಗಾಯಗಳಾಗಿದ್ದವು. ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪ್ರಯಾಣಿಕರು ಕೂಡ ಗಾಯಗೊಂಡಿದ್ದ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಕೇರಳ ಹೈಕೋರ್ಟ್ ಮೊರೆ ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post