ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17ರ ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಾದ ಎಂಟು ಚೀತಾಗಳಿಗೆ ಮಿಲ್ಖಾ, ಚೇತಕ್, ವಾಯು, ಸ್ವಸ್ತಿ ಮತ್ತು ತ್ವರಾ ಹೀಗೆ ಹಲವಾರು ಹೆಸರುಗಳನ್ನು ಜನರು ಸೂಚಿಸಿದ್ದಾರೆ.
ನಮೀಬಿಯಾದಿಂದ ತರಲಾದ ಈ ಚೀತಾಗಳಿಗೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೆಸರುಗಳನ್ನ ಸೂಚಿಸಲು ಮೋದಿ ದೇಶದ ಜನರಿಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ MyGov ಆ್ಯಪ್ ಮೂಲಕ ಚೀತಾಗಳಿಗೆ ನಾಮಕರಣ ಮಾಡಲು 750ಕ್ಕೂ ಹೆಚ್ಚು ಹೆಸರನ್ನ ಜನರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೋದಿ ಹುಟ್ಟುಹಬ್ಬದ ದಿನ ಭಾರತಕ್ಕೆ ಬರ್ತಿವೆ ಆಫ್ರಿಕಾದ 8 ಚಿರತೆಗಳು.. ಯಾಕೆ ತರ್ತಿದ್ದಾರೆ ಗೊತ್ತಾ..?
70 ವರ್ಷಗಳ ಬಳಿಕ ಭಾರತದಲ್ಲಿ ಆಫ್ರಿಕನ್ ಚಿರತೆ..!
ಈ 8 ಚಿರತೆಗಳನ್ನ ಸೆಪ್ಟೆಂಬರ್ 17 ರಂದು ಮಧ್ಯ ಪ್ರದೇಶದ ‘ಕುನೊ-ಪಲ್ಪುರ್ ನ್ಯಾಷನಲ್ ಪಾರ್ಕ್’ಗೆ (Kuno-Palpur National Park) ಪ್ರಧಾನಿ ಮೋದಿ ಸಮ್ಮುಖದಲ್ಲಿ ಬಿಡಲಾಗಿದೆ. ಈ ಮೂಲಕ ಬರೋಬ್ಬರಿ 70 ವರ್ಷಗಳ ಬಳಿಕ ಭಾರತದಲ್ಲಿ ಆಫ್ರಿಕನ್ ಚಿರತೆಗಳು ಕಾಣಲಿವೆ. ಸದ್ಯ ಈ ಎಲ್ಲಾ ಚಿರತೆಗಳು ಕೊನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೀನ್ನಲ್ಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post