ಬೆಂಗಳೂರು: ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ದೇಶಾದ್ಯಂತ ಎರಡು ಬಾರಿ ದಾಳಿ ನಡೆಸಿ ಎನ್ಐಎ ಮತ್ತು ಇಡಿ ಮಾಹಿತಿಯನ್ನು ಕಲೆ ಹಾಕಿ, ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಸಾಥ್ ಕೊಟ್ಟಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿಷೇಧ ಮಾಡಿ ಆದೇಶ ನೀಡಿದೆ. ಈ ಬೆನ್ನಲ್ಲೇ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಸಿಟಿ ಪೊಲೀಸರು ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೀಗಿ ಭದ್ರತೆ ಏರ್ಪಡಿಸಲಾಗಿದೆ.
ಇದನ್ನೂ ಓದಿ: ‘ಆಪರೇಷನ್ ಆಕ್ಟೋಪಸ್’ ಬೆನ್ನಲ್ಲೇ ಬ್ಯಾನ್ ಅಸ್ತ್ರ-PFI ಜೊತೆಗೆ 8 ಸಹ ಸಂಘಟನೆಗಳು ನಿಷೇಧ..
ನಗರದ ಸೂಕ್ಷ್ಮ ಪ್ರದೇಶಗಳಾದ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಬ್ಯಾಟರಾಯನಪುರ, ಪುಲಕೇಶಿನಗರ, ಶಿವಾಜಿ ನಗರ, ಜೆಜೆ ನಗರ ಮತ್ತು ತಲಘಟ್ಟಪುರಗಳಲ್ಲಿ ಪೊಲೀಸ್ ಗಸ್ತು ತಿರುಗುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: FI ಸಂಘಟನೆ ಬ್ಯಾನ್-ನಿಜಕ್ಕೂ ಆಗಿದ್ದೇನು..? ಕೇಂದ್ರ ಸರ್ಕಾರ ಕೊಟ್ಟ ಕಾರಣಗಳೇನು..?
ಇದನ್ನೂ ಓದಿ: NIA ವಿರುದ್ಧ PFI ಕಾರ್ಯಕರ್ತರ ಸಮರ: RSS, ಮೋದಿ ಸರ್ಕಾರ ವಿರುದ್ಧ ಬಂಧಿತರ ಆಕ್ರೋಶ..
ಬ್ಯಾನ್ ಹಿನ್ನೆಲೆ ನಗರದ ಎಸ್ ಕೆ ಗಾರ್ಡನ್ ಬಳಿಯಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಟೇಟ್ ಆಫೀಸ್ ಎದುರು ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಬೀಗಿ ಭದ್ರತೆ ನಿಯೋಜಿಸಲಾಗಿದೆ. ಪಿಎಫ್ಐ ಕಚೇರಿಯ ಪಕ್ಕದಲ್ಲೇ ಇರುವ ಮಸೀದಿ ಇರೋ ಕಾರಣ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಭದ್ರತೆ ಏರ್ಪಡಿಸಲಾಗಿದೆ. ಹೊಯ್ಸಳ ಸಿಬ್ಬಂದಿಯಿಂದಲೂ ಗಸ್ತು ತಿರುಗುವ ಕಾರ್ಯ ಮಾಡಲಾಗಿದೆ. ಸ್ಥಳದಲ್ಲಿ ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಈಗಾಗಲೇ ಕಚೇರಿಗೆ ಬೀಗ ಹಾಕಿರೋ ಕಾರಣ ಕಚೇರಿ ಮುಂಭಾಗ ಹಾಗೂ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post