ಪಟ್ನಾ: ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮಕ್ಕಳ ಪ್ರಶ್ನೆಗೆ ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದು, ಅಧಿಕಾರಿ ಮಾತನಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯರ ಪ್ರಶ್ನೆಗೆ ಉದ್ಧಟತನದಿಂದ ಅಧಿಕಾರಿ ಉತ್ತರಿಸಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರ ಸರ್ಕಾರದ ಮಕ್ಕಳ ಹಾಗೂ ಮಹಿಳಾ ಸಂಕ್ಷೇಮ ಇಲಾಖೆ, ಯುನಿಸೆಫ್ ಸಹಯೋಗದೊಂದಿಗೆ ಬಾಲಕಿಯರ ಸಬಲೀಕರಣಕ್ಕಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಬಳಿ ವಿದ್ಯಾರ್ಥಿನಿಯರು, ಸರ್ಕಾರ ಹೆಣ್ಣು ಮಕ್ಕಳಿಗೆ ಸಾಕಷ್ಟು ಸೌಲಭ್ಯ ನೀಡ್ತಿದೆ. ಅದೇ ರೀತಿ 20-30 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಸಾಧ್ಯವಿಲ್ಲವೇ ಎಂದು ಮನವಿ ಮಾಡಿದ್ದರು.
Want Condoms Too?
Bihar IAS officer Harjot Kaur Bhamra's Shocker On Girl's Sanitary Pad Query pic.twitter.com/X1O0cDHLY6— AR (@AshokReddyNLG) September 29, 2022
ಇದಕ್ಕೆ ಪ್ರತಿಕ್ರಿಯೆ ನೀಡಿದ ಹರ್ಜೋತ್ ಕೌರ್, ಇಂದು, ಸ್ಯಾನಿಟರಿ ಪ್ಯಾಡ್ ಕೇಳ್ತೀರಿ, ನಾಳೆ ಜಿನ್ಸ್ ಪ್ಯಾಂಟ್ ಕೂಡ ಕೇಳ್ತೀರಿ. ಆ ಬಳಿಕ ಧರಿಸಲು ಸುಂದರ ಶೂ ಕೂಡ ಹೇಳ್ತೀರಿ. ಅಷ್ಟೇ ಏಕೆ, ಸರ್ಕಾರ ಕುಟುಂಬ ನಿಯಂತ್ರಣ ಪದ್ಧತಿಗಳು ಹಾಗೂ ಕಾಂಡೋಮ್ ಕೂಡ ಕೊಡುತ್ತದೆಯೇ ಎಂದು ಕೇಳ್ತೀರಾ..? ಎಲ್ಲವನ್ನೂ ಸರ್ಕಾರವೇ ಉಚಿತವಾಗಿ ನೀಡಬೇಕು ಅಂತ ಯಾಕೆ ಬಯಸ್ತಿರಾ? ನಿಮ್ಮ ಕುಟುಂಬಕ್ಕೆ ಸ್ಯಾನಿಟರಿ ಪ್ಯಾಡ್ ಕೊಳ್ಳುವಷ್ಟು ಶಕ್ತಿ ಇಲ್ಲವೆ ಅಂತ ಅಸಭ್ಯವಾಗಿ ಪ್ರಶ್ನಿಸಿದ್ದಾರೆ. ಸದ್ಯ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post