ಪಿಎಫ್‌ಐ ಬ್ಯಾನ್ ಏನೋ ಮಾಡಲಾಯ್ತು. ಹಾಗಂತ ಇಷ್ಟಕ್ಕೆ ಕೇಂದ್ರ ಗೃಹ ಇಲಾಖೆ ಕೈತೊಳೆದುಕೊಳ್ಳುವ ಹಾಗಿಲ್ಲ. ಇಷ್ಟು ದಿನ ಒಂದು, ಇನ್ಮೆಲೆ ಮತ್ತೊಂದು ಸವಾಲು ಹೆಗಲೇರಿದೆ.
ದುಷ್ಟ ಸಂಹಾರ, ಶಿಷ್ಟ ರಕ್ಷಕ.. ಇದು ಈ ನಾಡು ಪಾಲಿಸಿಕೊಂಡು ಬಂದ ನೆಲದ ಕಾನೂನು. ವಿಜಯ ದಶಮಿಗೂ ಮುನ್ನವೇ ಪಿಎಫ್‌ಐನ ಪಾಪಕ್ಕೆ ಪ್ರತಿಫಲ ಸಿಕ್ಕಿದೆ. 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪಿಎಫ್‌ಐ, ಈಗ ಇತಿಹಾಸದ ಕರಾಳ ಗರ್ಭ ಸೇರಿದೆ. ಸಾಕ್ಷಿಗಳು ಮಿಸ್ ಆಗದಂತೆ ಪ್ಲಾನ್ ಮಾಡಿ ರೇಡ್ ಮಾಡಿದ ಎನ್ಐಎ, ತಿಂಗಳ ಹಿಂದೆಯೇ ಬ್ಯಾನ್ಗಾಗಿ ಮುಹೂರ್ತ ಫಿಕ್ಸ್ ಮಾಡಿತ್ತು.
ಪಿಎಫ್‌ಐ ಬ್ಯಾನ್ ಬಳಿಕ ಮುಂದಿದೆ ಕಾನೂನು ಕದನ!
ದಸರೆಯ ಹೊತ್ತಿಗೆ ಎನ್ಐಎ ಒಂದು ರಣಬೇಟೆ ಆಡಿ ಮುಗಿಸಿದೆ. ಈಗ ಕಾನೂನು ಕಟ್ಟಳೆ ಬಹುದೊಡ್ಡ ಸವಾಲು ಎನ್ಐಎ ಮುಂದಿದೆ. ದೇಶಾದ್ಯಂತ ರೇಡ್ ಮೂಲಕ ರೈಡ್ ಮಾಡಿದ ಎನ್ಐಎ, ತಾನು ಸಂಗ್ರಹಿಸಿದ ಪಿಎಫ್‌ಐನ ಪಾಪದ ಕೊಡವನ್ನ ಪ್ರಜೆಂಟ್ ಮಾಡಬೇಕಿದೆ.
- PFI ಸಂಘಟನೆಯ ಬಲಾಬಲ
ದೇಶದ 22 ರಾಜ್ಯಗಳಲ್ಲಿ ಪಿಎಫ್‌ಐ ಮತ್ತು ಅದರ ಸಹ ಸಂಘಟನೆಗಳು ಸಕ್ರಿಯವಾಗಿವೆ. 2017ರಲ್ಲಿ NIA ದಾಖಲೆಯ ಪ್ರಕಾರವೇ ದೇಶದಲ್ಲಿ 50 ಸಾವಿರ ಸದಸ್ಯರನ್ನ ಪಿಎಫ್‌ಐ ಸಂಘಟನೆ ಹೊಂದಿದೆ. ನೆರೆಯ ಕೇರಳದಲ್ಲಿ ಪಿಎಫ್‌ಐ ಸಂಘಟನೆಯ ಮೇಲೆ ಸುಮಾರು ಒಂದೂವರೆ ಲಕ್ಷ ಜನ ಒಲವು ಹೊಂದಿದ್ದಾರೆ ಅಂತ ಎನ್ಐಎ ತನ್ನ ದಾಖಲೆಯಲ್ಲಿ ಉಲ್ಲೇಖಿಸಿದೆ.
ಪ್ರತಿವರ್ಷ ಕೂಡ ಬಲವೃದ್ಧಿಸಿಕೊಳ್ತಿರುವ ಪಿಎಫ್‌ಐ ಶೇ.3-5ರಷ್ಟು ಸದಸ್ಯರ ಸಂಖ್ಯೆಯಲ್ಲಿ ಏರಿಕೆ ಆಗ್ತಿದೆ ಅಂತ ಮಾಹಿತಿ ಬಿಚ್ಚಿಟ್ಟಿದೆ. ಈ ಮಧ್ಯೆ, ಪಿಎಫ್‌ಐ ಬ್ಯಾನ್ ಮಾಡಿ ಕೇಂದ್ರ ಗೃಹ ಇಲಾಖೆ ಕೈತೊಳೆದುಕೊಳ್ಳುವಂತಿಲ್ಲ. ಪುಂಡರ ಪುಂಡಾಟಕ್ಕೆ ಈಗಾಗಲೇ ಪ್ರಚಂಡ ಉತ್ತರ ಕೊಟ್ಟ ಕೇಂದ್ರ ಸರ್ಕಾರದ ಮುಂದೆ ಕಾನೂನಿನ ಸವಾಲುಗಳಿವೆ.
- ಮುಂದಿದೆ ಕಾನೂನು ಸಮರ!
ಪಿಎಫ್‌ಐ ಮತ್ತು ಅಂಗಸಂಸ್ಥೆಗಳ ಮೇಲೆ ಯುಎಪಿಎ ಕೇಸ್ ಬಿದ್ದಿದೆ. ಯುಎಪಿಎ ಸೆಕ್ಷನ್ 3ರ ಅಡಿಯಲ್ಲಿ ಬ್ಯಾನ್ ಮಾಡಿ ಕೇಂದ್ರ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಹೊರಬಿದ್ದ 30 ದಿನದಲ್ಲಿ ನ್ಯಾಯಮಂಡಳಿಗೆ ಆ ಬಗ್ಗೆ ವರದಿ ಸಲ್ಲಿಸಬೇಕು. ಈ ಸಂಘಟನೆಯನ್ನ ಏಕೆ ನಿಷೇಧಿಸಬಾರದೆಂದು ಲಿಖಿತ ಉತ್ತರ ಕೊಡಬೇಕಾಗುತ್ತದೆ. ಕಾನೂನುಬಾಹಿರ ಎಂದು ಘೋಷಿಸಲು ಕಾರಣ ನೀಡಬೇಕು.
ಎನ್ಐಎ, ಇ.ಡಿ, ರಾಜ್ಯ ಪೊಲೀಸ್ ಪಡೆಗಳು ವಿವರಣೆ ಕೊಡಬೇಕು. ದೇಶ ವಿರೋಧಿ ಚಟುವಟಿಕೆಯನ್ನ ನ್ಯಾಯಮಂಡಳಿಯಲ್ಲಿ ಸಾಬೀತು ಮಾಡಬೇಕು. ಅಲ್ಲದೆ, ವಿದೇಶಿ ವಿದ್ರೋಹಿ ಸಂಘಟನೆಗಳ ಸಂಪರ್ಕದ ಬಗ್ಗೆ ಗೃಹ ಇಲಾಖೆ ಪುರಾವೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲಾ ಲಿಖಿತ ವರದಿ ಸಲ್ಲಿಕೆ ಬಳಿಕ ಪಿಎಫ್‌ಐಗೆ ನ್ಯಾಯಮಂಡಳಿ ಶೋಕಾಸ್ ನೋಟಿಸ್ ಜಾರಿಮಾಡಲಿದೆ. ಅಲ್ಲದೆ, ಪಿಎಫ್‌ಐನ ಕಾನೂನು ತಂಡಕ್ಕೆ ತನ್ನ ವಾದ ಮಂಡಿಸಲು ನ್ಯಾಯ ಮಂಡಳಿ ಅವಕಾಶ ಕಲ್ಪಿಸಲಿದೆ. ವಾದ ಪ್ರತಿವಾದ ಬಳಿಕ ಪಿಎಫ್‌ಐ ಬ್ಯಾನ್ ಬಗ್ಗೆ ತೀರ್ಮಾನ ಆಗಲಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ 6 ತಿಂಗಳು ಬೇಕಾಗಲಿದೆ.
ಪಿಎಫ್‌ಐ ಪಾಪದ ಕೊಡದ ಬಗ್ಗೆ ಕೊಡಬೇಕು ಮಾಹಿತಿ!
ಒಟ್ಟಾರೆ, ಪಿಎಫ್‌ಐ ಸಂಘಟನೆಯ ಹಲವು ಕಾರ್ಯಗಳಿಗೆ ಈ ಸಮಯದಲ್ಲಿ ಬ್ರೇಕ್ ಬೀಳಲಿದೆ. ಮತ್ತಷ್ಟು ರೇಡ್ಗಳನ್ನ ಎನ್ಐಎ ಆಯೋಜಿಸಬಹುದು. ಆದರೆ, ಪಿಎಫ್‌ಐ ಒಂದು ದೇಶ ದ್ರೋಹಿ ಸಂಘಟನೆ ಅನ್ನೋದನ್ನ ನ್ಯಾಯಮಂಡಳಿಯಲ್ಲಿ ಸರ್ಕಾರ ಸಾಕ್ಷಿ ಸಮೇತ ರುಜುಪಡಿಸಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post