ಗದಗ; ಸರ್ಕಾರದ ನಿರ್ದೇಶನ ಇಲ್ಲದಿದ್ದರೂ ಪ್ರವಾದಿ ಪೈಗಂಬರರ ಕುರಿತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಿದ ಆರೋಪದ ಮೇಲೆ ಗದಗ ತಾಲ್ಲೂಕಿನ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪುರ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್.ಬಿರಾದಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
‘ಶಾಲೆಯ ಒಟ್ಟು 43 ವಿದ್ಯಾರ್ಥಿಗಳಿಗೆ ‘ಮಹಮ್ಮದ (ಸ) ಎಲ್ಲರಿಗಾಗಿ’ ಹಾಗೂ ‘ಅಂತಿಮ ಪ್ರವಾದಿ ಮಹಮ್ಮದ (ಸ)’ ಪುಸ್ತಕವನ್ನು ಮಕ್ಕಳಿಗೆ ತರಗತಿಯಲ್ಲಿ ವಿತರಿಸಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರಿಗೂ ಮಾಹಿತಿ ನೀಡದೇ ಪ್ರಬಂಧ ಸ್ಪರ್ಧೆ ನಡೆಸಿದ್ದರು. ಬಹುಮಾನ ನೀಡುವ ಆಮಿಷವನ್ನೂ ಒಡ್ಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾಡಿರುವುದರಿಂದ ಹಾಗೂ ಪ್ರಾಥಮಿಕ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಇನ್ನು, ಇದೇ ಘಟನೆ ಸಂಬಂಧ ನಾಗಾವಿಯ ಹೈಸ್ಕೂಲ್ ಶಾಲೆಯ ಮುಂದೆ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಮಕ್ಕಳ ಮನಸ್ಸಲ್ಲಿ ಕೋಮು ಭಾವನೆ ಸೃಷ್ಟಿ ಮಾಡಲಾಗ್ತಿದೆ. ಶಾಲೆಯಲ್ಲಿ ಇಸ್ಲಾಮೀಕರಣ ನಡೆದಿದೆ ಅಂತ ಶಿಕ್ಷಕನನ್ನ ಅಮಾನತು ಮಾಡಬೇಕು ಅಂತ ಒತ್ತಾಯಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post