ಶಿವಮೊಗ್ಗ: ಪಿಎಫ್ಐ ಸಿದ್ದರಾಮಯ್ಯನವರ ಪಾಪದ ಕೂಸು. ಸಿದ್ದರಾಮಯ್ಯರ ಅಪರಾಧದಿಂದ ಇಷ್ಟೆಲ್ಲ ಅನಾಹುತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇನ್ನು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದ ಜನ ನಮ್ಮ ಜೊತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯನವರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಹುಚ್ಚರಂತೆ ಮಾತನಾಡುತ್ತಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ದರಾಮಯ್ಯನವರು ಜಾಗೃತರಾಗಬೇಕು ಎಂದು ಹೇಳಿದ್ದಾರೆ.
ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಪಿಎಫ್ಐ ಕಾಂಗ್ರೆಸ್ ಪಕ್ಷದ ಪಾಪದ ಕೂಸಾದರೆ ಆರ್.ಎಸ್.ಎಸ್ ಏನು? ಆರ್ ಎಸ್ ಎಸ್ ಬಿಜೆಪಿಯ ಪಾಪದ ಕೂಸು ಎಂದು ಕುಟುಕಿದರು. ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಎಸ್ಡಿಪಿಐ, ಪಿಎಫ್ಐ ಎರಡೂ ಬಿಜೆಪಿಯ ಬಿ ಟೀಂ. ಅವರಿಂದಲೇ ಇವರ ಕೋಮುವಾದಿ ಬೇಳೆ ಬೇಯುತ್ತಿದೆ. ನಿಜವಾಗಲೂ ಅವರಿಗೆ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಬ್ಯಾನ್ ಮಾಡಬೇಕಿತ್ತು. ಅದನ್ನ ಬಿಟ್ಟು ಚುನಾವಣೆ ಹತ್ತಿರ ಬರ್ತಿದೆ ಅಂತ ಗಿಮಿಕ್ ಮಾಡ್ತಿದ್ದಾರೆ. ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಬ್ಯಾನ್ ಮಾಡಿದ್ದಾರೆ ಅಷ್ಟೇ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post