ನಾನೇ ಬೇರೆ, ನನ್ನ ಸ್ಟೈಲೇ ಬೇರೆ. ನನ್ನ ಆಟಾನೇ ಬೇರೆ ಅನ್ನೋ ಸೂರ್ಯ ಕುಮಾರ್ ಯಾದವ್, ಕ್ರೀಸ್ಗಿಳಿದ್ರೆ ಮೈಂಡ್ನಲ್ಲಿ ಫಿಕ್ಸ್ ಮಾಡ್ಕೊಂಡೇ ಬಂದಿರ್ತಾರೆ. ಬೌಲರ್ ಯಾರೂ ಅಂತ ನೋಡಲ್ಲ. ಪಿಚ್ ಹೇಗಿರುತ್ತೆ ಅಂತಾನೂ ತಿಳ್ಕೊಳಲ್ಲ. ಇನ್ನು ಸಿಚ್ಯುವೇಶನ್ ಬಗ್ಗೆ ಡೋಂಟ್ ಕೇರ್. ಸೂರ್ಯನ ಮೈಂಡ್ನಲ್ಲಿ ಫಿಕ್ಸ್ ಆದ್ರೆ, ಯಾರ ಮಾತೂ ಕೇಳಲ್ಲ.
ಕ್ರೀಸ್ಗಿಳಿದ್ರೆ ಸೂರ್ಯ ಕುಮಾರ್ ಮಂತ್ರ ಒಂದೇ..!
ಸೂರ್ಯ ಕುಮಾರ್ ಯಾದವ್, T20 ಕ್ರಿಕೆಟ್ನ ಮೋಸ್ಟ್ ಡಿಸ್ಟ್ರಕ್ಟೀವ್ ಬ್ಯಾಟ್ಸ್ಮನ್. ಕೆಲವ್ರು ಕ್ರೀಸ್ಗೆ ಬಂದಾಗ, ಸೆಟಲ್ ಆಗಿ ಆಮೇಲೆ ಶಾಟ್ಸ್ ಆಡೋಕೆ ನೋಡ್ತಾರೆ. ಆದ್ರೆ ಸೂರ್ಯ ಆಗಲ್ಲ. ಮೊದಲ ಎಸೆತದಿಂದಲೂ, ಆತನ ಮಂತ್ರ ಒಂದೇ. ಹೊಡಿ ಬಡಿ, ಇಲ್ಲ ಪೆವಿಲಿಯನ್ಗೆ ನಡಿ ಅನ್ನೋದು.
ಸೂರ್ಯ ಹೊಡೆಯೋ ಶಾಟ್ಸ್ ಟ್ರೇಡ್ ಮಾರ್ಕ್ ಆಗುತ್ತೆ..!
ನಾವ್ ಗೇಲ್, ಸೆಹ್ವಾಗ್, ಡಿವಿಲಿಯರ್ಸ್ ಬ್ಯಾಟಿಂಗ್ ನೋಡಿದ್ದೀವಿ. ಎಂಜಯ್ ಮಾಡಿದ್ದೀವಿ. ಆದ್ರೆ ಸೂರ್ಯ ಕುಮಾರ್, ಇವ್ರೆಲ್ಲರಿಗಿಂತ ಒಂದ್ ಹೆಜ್ಜೆ ಮುಂದಿದ್ದಾರೆ. ಆತ ಹೊಡೆಯೋ ಒಂದೊಂದು ಶಾಟ್, ಟ್ರೇಡ್ ಮಾರ್ಕ್ ಆಗ್ಬಿಡುತ್ತೆ. ಆ ಮಟ್ಟಕ್ಕಿರುತ್ತೆ ಸೂರ್ಯನ ಬ್ಯಾಟ್ನಿಂದ ಬರೋ ಏಟು.
ಸೂರ್ಯ ಹೆಸರು ಕೇಳಿದ್ರೆ ಬೌಲರ್ಗಳು ಬೆಚ್ಚಿಬೀಳ್ತಾರೆ..!
ಕೆಲವ್ರು ಜಿಂಬಾಬ್ವೆ, ಬಾಂಗ್ಲಾದೇಶ ವಿರುದ್ಧ ಅಬ್ಬರಿಸಿ, ಹೀರೋಗಳಾಗ್ತಾರೆ. ಆದ್ರೆ ಸೂರ್ಯ ಹಾಗಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾದಂತಹ ಬಲಿಷ್ಟ ಬೌಲಿಂಗ್ ಲೈನ್ಅಪ್ನ, ಧೂಳಿಪಟ ಮಾಡಿದ್ದಾರೆ. ಈತನ ಬೆಂಕಿ ಬಿರುಗಾಳಿ ಆಟಕ್ಕೆ, ಬೌಲರ್ಗಳು ಬೆಚ್ಚಿಬೀಳ್ತಾರೆ.
ಈ ವರ್ಷ T20 ಕ್ರಿಕೆಟ್ನಲ್ಲಿ ಸೂರ್ಯ, 396 ಎಸೆತಗಳನ್ನ ಎದುರಿಸಿದ್ದಾರೆ. 732 ರನ್ಗಳನ್ನ ಸೂರ್ಯ, ತನ್ನ ಬ್ಯಾಟ್ನಿಂದ ಚಚ್ಚಿದ್ದಾರೆ. ಹೌದು, ಸೂರ್ಯ ಕುಮಾರ್ ತನ್ನ ರೆಡ್ ಹಾಟ್ ಫಾರ್ಮ್ನಿಂದ ಟೀಮ್ ಇಂಡಿಯಾಕ್ಕೆ ರನ್ ಕಾಣಿಕೆ ನೀಡ್ತಿದ್ದಾರೆ. ಮಿಡಲ್ ಓವರ್ನಲ್ಲಿ ರೋಹಿತ್ ಪಡೆಯ ಗೇಮ್ ಚೇಂಜರ್ಸ್ ಆಗಿರುವ ಸೂರ್ಯ, ಬೌಂಡ್ರಿ ಸಿಕ್ಸರ್ಗಳ ಸರದಾರ.
2022ರಲ್ಲಿ ಸೂರ್ಯ 63 ಬೌಂಡರಿಗಳನ್ನ ಸಿಡಿಸಿದ್ದಾರೆ. ಹಾಗೇ ಈ ವರ್ಷ ಸೂರ್ಯ ಹೊಡೆದ ಒಂದೊಂದು ಸಿಕ್ಸರ್, ದಾಖಲೆಯ ಪುಟದಲ್ಲಿ ಸೇರಿವೆ. 45 ಸೂಪರ್ ಸಿಕ್ಸರ್ಗಳನ್ನ ಸಿಡಿಸಿರುವ SKY, ರೆಕಾರ್ಡ್ ಮಾಡಿದ್ದಾರೆ.
ದಾಖಲೆಯ ಸರದಾರ, ಈ ಸೂರ್ಯ ಕುಮಾರ..!
ಈ ವರ್ಷ ಮುಂಬೈಕರ್ ಸೂರ್ಯ ಕುಮಾರ್ ಪಾಲಿಗೆ, ಲಕ್ಕಿ ಇಯರ್. 5 ಅರ್ಧಶತಕಗಳು, ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ, SKY ಬ್ಯಾಟ್ನಿಂದ ಬಂದಿದೆ. ಹಾಗೇ 180 ಸ್ಟ್ರೈಕ್ರೇಟ್ ಹೊಂದಿರುವ ಸೂರ್ಯ, T20 ಫಾರ್ಮೆಟ್ನ ಬಾಸ್ ಆಗಿದ್ದಾರೆ.
ಒಟ್ಟಿನಲ್ಲಿ SKY IS THE LIMIT ಅಂತಾರೆ.. ಆದ್ರೆ ಸೂರ್ಯ ಕುಮಾರ್ ಯಾದವ್ಗೆ, ಯಾವ್ದು ಲಿಮಿಟ್ ಇಲ್ಲ. ತಾನಿರೋದೇ ಬೌಲರ್ಗಳನ್ನ ದಂಡಿಸೋಕೆ ಅನ್ನೋ ರೀತಿ, ಸೂರ್ಯ ಬೌಲರ್ಗಳ ಪಾಲಿಗೆ ವಿಲಿನ್ ಆಗಿದ್ದಾರೆ.
New jersey, renewed energy.. but the same passion and honour to represent 𝐓𝐞𝐚𝐦 𝐈𝐧𝐝𝐢𝐚 🇮🇳
How’s the josh? 💪 pic.twitter.com/zPGBv6TbtS
— Surya Kumar Yadav (@surya_14kumar) September 19, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post