ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 65 ವರ್ಷಗಳ ಇತಿಹಾಸದಲ್ಲೇ ಈ ದಿನ ಬಹಳ ವಿಶೇಷವಾದದ್ದು. ಅದರಲ್ಲೂ ಕೆಎಸ್ಆರ್ಟಿಸಿ ಸಿಬ್ಬಂದಿ ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ ಅಂದ್ರು ಕೂಡ ತಪ್ಪಾಗೋದಿಲ್ಲ. ಯಾಕಂದ್ರೆ 65 ವರ್ಷದ ಇತಿಹಾಸದಲ್ಲೇ ತಿಂಗಳ ಮೊದಲ ದಿನವೇ ನೌಕರರಿಗೆ ಸಂಬಳವನ್ನ ನೀಡಿರಲಿಲ್ಲ. 7ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ಸಂಬಳ ಸೇರುತಿತ್ತು. ಆದರೆ ಇದೇ ಮೊದಲ ಬಾರಿಗೆ 1ನೇ ತಾರೀಖಿನಂದು ನೌಕರರಿಗೆ ಸಂಬಳ ಕೈ ಸೇರಿದೆ. ಇದಕ್ಕೆ ಕಾರಣ KSRTCಯ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್ ಅವರು ಬಂದ ಮೇಲೆ ನಿಗಮದ 65 ವರ್ಷದಿಂದ ಇದ್ದ ನಿಯಮವೊಂದನ್ನ ಕೈ ಬಿಟ್ಟಿದ್ದಾರೆ. ವೇತನ ನೀಡುವ ವಿಚಾರದಲ್ಲಿ ಇದ್ದ ತಾರತಮ್ಯಕ್ಕೆ ಕೊನೆಯಾಡಿದ್ದಾರೆ.
ನಿಗಮ ಆರಂಭದಿಂದಲೂ 1ನೇ ತಾರೀಖು ಅಧಿಕಾರಿ ವರ್ಗಕ್ಕೆ, 4 ರಂದು ಮೆಕಾನಿಕ್ಗಳಿಗೆ, 7ಕ್ಕೆ ಚಾಲಕ ನಿರ್ವಾಹಕರಿಗೆ ಸಂಬಳ ನೀಡಿತ್ತು. ಈ ತಾರತಮ್ಯವನ್ನು ಹೋಗಲಾಡಿಸಿ ಸೆಪ್ಟೆಂಬರ್ ತಿಂಗಳ ಸಂಬಳವನ್ನು ಅಕ್ಟೋಬರ್ 1 ರಂದೇ ನೌಕರರ ಖಾತೆಗೆ ಸೇರುವಂತೆ ಮಾಡಿದ್ದಾರೆ. ಎಂಡಿ ಅವರ ನಿರ್ಧಾರದಿಂದ ಚಾಲಕ ಹಾಗೂ ನಿರ್ವಾಹಕರು ಸಂತೋಷಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post