ಆಲ್ರೌಂಡರ್ ರವೀಂದ್ರ ಜಡೇಜಾ, ಇಂಜುರಿ ಕಾರಣದಿಂದಾಗಿ ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆದ್ರೆ, ಜಡೇಜಾರ ಮಾಡಿರೋ ಟ್ವೀಟ್ವೊಂದು ಭಾರಿ ಸುದ್ದಿಯಾಗಿದೆ.
ಜಡೇಜಾ ತಮ್ಮ ಟ್ವಿಟರ್ನಲ್ಲಿ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ನಿರೂಪಣೆ ಮಾಡ್ತಿರೋ ಪೋಟೋವನ್ನ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ನನ್ನ ಪ್ರೀತಿಯ ಸ್ನೇಹಿತನನ್ನ ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿ, ಸಂಜಯ್ ಮಂಜ್ರೇಕರ್ನ ಟ್ಯಾಗ್ ಮಾಡಿದ್ದಾರೆ.
Watching my dear friend on screen @sanjaymanjrekar pic.twitter.com/gU9CnxC9Mx
— Ravindrasinh jadeja (@imjadeja) September 29, 2022
ಜಡ್ಡುರ ಈ ಟ್ವೀಟ್ಗೆ ಪ್ರತಿಕ್ರಿಯಿಸಿರೋ ಮಂಜ್ರೇಕರ್, ನಿಮ್ಮ ಪ್ರೀತಿಯ ಸ್ನೇಹಿತ ನಿಮ್ಮನ್ನ ಆದಷ್ಟು ಬೇಗ ಫೀಲ್ಡ್ನಲ್ಲಿ ನೋಡಲು ಇಷ್ಟಪಡುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ. ಜಡೇಜಾ ಆಟವನ್ನ ಮಂಜ್ರೇಕರ್ ಹಲವು ಬಾರಿ ಟೀಕಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಜಡೇಜಾ ತಮ್ಮ ಆಟದ ಮೂಲವೇ ಮಂಜ್ರೇಕರ್ಗೆ ತಿರುಗೇಟು ನೀಡಿದ್ದರು.
Still i have played twice the number of matches you have played and i m still playing. Learn to respect ppl who have achieved.i have heard enough of your verbal diarrhoea.@sanjaymanjrekar
— Ravindrasinh jadeja (@imjadeja) July 3, 2019
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post