ಮಂಡ್ಯ: ದೇಶದಲ್ಲಿ 5 ವರ್ಷಗಳ ಕಾಲ PFI ಸಂಘಟನೆ ಬ್ಯಾನ್ ಮಾಡಿರೋದಕ್ಕೆ ಮಾಜಿ ಸಚಿವ ಜಮೀರ್ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಪಿಎಫ್ಐ ಸಂಘಟನೆ ಪರ ಬ್ಯಾಟ್ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅವರು, PFI ಅವರ ಮೇಲೆ ಏನು ಕೇಸ್ ಇದೆ..? ಅವರ ಸಂಘಟನೆಯಲ್ಲಿ ಏನಾದ್ರು ಟೆರರಿಸ್ಟ್ ಕೆಲಸ ಮಾಡಿದ್ದಾರಾ..? ಮೊದಲು ಸಾಬೀತುಪಡಿಸಿ, ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ ಎಂದಿದ್ದಾರೆ. ಅಲ್ಲದೇ ಬ್ಯಾನ್ ಮಾಡುದ್ರೆ ಎಲ್ಲಾ ಸಂಘಟನೆ ಬ್ಯಾನ್ ಮಾಡಿ. ಮೊದಲು RSS ಬ್ಯಾನ್ ಮಾಡಿ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅವರಿಗೆ ಒಳ್ಳೆ ಕಾರ್ಯಕ್ರಮಗಳನ್ನು ಸಹಿಕೊಳ್ಳಲು ಆಗುತ್ತಿಲ್ಲ. ಭಾರತ್ ಜೋಡೋ ಯಾತ್ರೆ ಊಹೆಗೂ ಮೀರಿ ಯಶ್ವಿಯಾಗುತ್ತಿದೆ. ನಿರೀಕ್ಷೆಗೂ ಮೀರಿ ಜನರು ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇಶದಲ್ಲಿ ಇದು ದಾಖಲೆ ಆಗಲಿದೆ. ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರೋಣಾ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಈಗ ಬಿಜೆಪಿಗೆ ಭಯ ಬಂದಿದೆ. ವಿದೇಶಗಳಿಂದ ನನಗೆ ಕರೆ ಮಾಡಿ ಯಾತ್ರೆ ಬಗ್ಗೆ ಕೇಳುತ್ತಿದ್ದಾರೆ. ಭಯದಲ್ಲಿ ಬಿಜೆಪಿ ನಾಯಕರು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಒಳ್ಳೆಯ ಕೆಲಸ ಮಾಡುವ ಧೃಡ ಸಂಕಲ್ಪ ನಮ್ಮಲ್ಲಿದ್ದರೆ, ಏನೇ ಎದುರಾದರೂ ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. 1/3#BharatJodoYatra pic.twitter.com/UOR3xfakyj
— B Z Zameer Ahmed Khan (@BZZameerAhmedK) October 2, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post