ದೇಶದಾದ್ಯಂತ ಪಿಎಫ್ಐ ಬ್ಯಾನ್ ಆದ ಬೆನ್ನಲ್ಲೆ ಪಿಎಫ್ಐ ಆಳ ಅಗಲ ಅಳೆಯಲು ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ. ಈ ತನಿಖೆಯಲ್ಲಿ ಬಗೆದಷ್ಟು ಪಿಎಫ್ಐನ ಕರಾಳ ಮುಖ, ಕ್ರೂರಿತೆ ಬಯಲಾಗುತ್ತಿದೆ.
ಮೊಬೈಲ್ ರಿಟ್ರೀವ್ನಲ್ಲಿ ಗೋಮಾಂಸದ ರಕ್ತ ಚರಿತ್ರೆ ಬಯಲು..
ಎನ್ಐಎ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿದ್ದ ವೇಳೆ, ಹಲವು ಮುಖಂಡರ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ 8 ಮೊಬೈಲ್ಗಳನ್ನು ಎನ್ಐಎ ಅಧಿಕಾರಿಗಳು ರಿಟ್ರೀವ್ ಮಾಡಿಸಿದ್ರು. ಈ ವೇಳೆ ಗೋಮಾಂಸದ ರಕ್ತ ಚರಿತ್ರೆ ಬಯಲಾಗಿದೆ.
ಪಿಎಫ್ಐ ಕಚೇರಿಯಲ್ಲಿ ಸಿಕ್ಕ ಫೋನ್ಗಳಲ್ಲಿ ಸ್ಫೋಟಕ ಸತ್ಯ ಒಂದೊಂದೆ ಬಯಲಾಗುತ್ತಿದೆ.
8 ಮೊಬೈಲ್ಗಳನ್ನ ರಿಟ್ರೀವ್ ಮಾಡಿಸಿದ್ದು, ಮನೆಯಲ್ಲೇ ದನ ಕಡಿದು, ವಿಡಿಯೋ ಶೇರ್ ಮಾಡಿದ್ದ ವಿಡಿಯೋಗಳು ಪತ್ತೆ ಆಗಿವೆ. ಇದರಲ್ಲಿ ಧರ್ಮ ಉಳಿಸಲು ರಕ್ತಪಾತ ಅವಶ್ಯಕವೆಂಬ ಸಂದೇಶವೂ ವಿಡಿಯೋ ಜೊತೆ ಲಭ್ಯವಾಗಿದೆ. ಹೀಗೆ ಕಾರ್ಯಕರ್ತರಿಗೆ ಕಳಿಸಿದ್ದ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ರಿಟ್ರೀವ್ ಮಾಡಿಸಿದಾಗ ಪಿಎಫ್ಐನ ಗೋಮಾಂಸದ ರಕ್ತ ಚರಿತ್ರೆ ಬಯಲಾಗಿದೆ.
ಪುತ್ತೂರಿನ ರಹಸ್ಯ ಕಚೇರಿಯಲ್ಲಿ ಪಿಎಫ್ಐ ಗೌಪ್ಯ ಸಭೆ..
ಇನ್ನು ಎನ್ಐಎ ಹಾಗೂ ರಾಜ್ಯ ಪೊಲೀಸರ ವಿಚಾರಣೆ ವೇಳೆ ಪಿಎಫ್ಐ ಮುಖಂಡರು ಒಂದೊಂದಾಗಿ ಸ್ಫೋಟಕ ರಹಸ್ಯವನ್ನ ಬಾಯಿ ಬಿಡುತ್ತಿದ್ದಾರೆ. ಪುತ್ತೂರಿನಲ್ಲಿ ನಾಮಫಲಕವಿಲ್ಲದೇ ಇರುವ ಪಿಎಫ್ಐ ಕಚೇರಿಯಲ್ಲಿ ಪಿಎಫ್ಐ ಮುಖಂಡರು ಗೌಪ್ಯ ಸಭೆ ನಡೆಸುತ್ತಿದ್ರು. ಇನ್ನು ಈ ಗೌಪ್ಯ ಕಚೇರಿ ಪುತ್ತೂರಿನ ಜುಮ್ಮ ಮಸೀದಿ ಬಳಿ ಇರುವ ಕೆ ಪಿ ಕಾಂಪ್ಲೆಕ್ಸ್ನಲ್ಲಿದೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ. ಕೂಡಲೇ ಮಾಹಿತಿ ಕಲೆ ಹಾಕಿದ ಪುತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಚೇರಿಯನ್ನ ಸೀಜ್ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ.
ಬಂಧಿತ PFI ಮುಖಂಡರ ಹೆಸರಲ್ಲಿ ನೂರಾರು ಆಸ್ತಿಗಳು ಪತ್ತೆ
ಬಂಧಿತ ಪಿಎಫ್ಐ ಮುಖಂಡರು ಮತ್ತು ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಬಗ್ಗೆ ಅಧಿಕಾರಿಗಳು ತಡಕಾಡುತ್ತಿದ್ದಾರೆ. ಈ ವೇಳೆ ಆರೋಪಿಗಳ ಹೆಸರಿನಲ್ಲಿ ಹಾಗೂ ಅವರ ಕುಟುಂಬಸ್ಥರ ಹೆಸರಿನಲ್ಲಿರುವ ನೂರಾರು ಆಸ್ತಿಗಳ ಬಗ್ಗೆ ದಾಖಲೆ ಪತ್ತೆಯಾಗಿದೆ. ತಮ್ಮ ಸ್ವಂತ ಪ್ರದೇಶದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿಯೂ ಆಸ್ತಿ ಖರೀದಿ ಮಾಡಿರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇನ್ನು ಇವರಿಗೆ ಬರುತ್ತಿದ್ದ ಆದಾಯದ ಮೂಲ, ಬ್ಯಾಂಕ್ ಅಕೌಂಟ್, ಬಗ್ಗೆಯೂ ತನಿಖೆ ನಡೆಸಲಾಗ್ತಿದೆ.
ರಾಜ್ಯ ಪೊಲೀಸರ ಮೇಲೂ ಎನ್ಐಎ ಅಧಿಕಾರಿಗಳ ಕಣ್ಣು
ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ಕೇರಳದ 873 ಪೊಲೀಸ್ ಅಧಿಕಾರಿಗಳು ನಂಟು ಬೆಳೆಸಿದ್ದರು ಎಂಬ ಸ್ಫೋಟಕ ವರದಿಯನ್ನು ಎನ್ಐಎ ನೀಡಿದೆ. ಕೇರಳದ ಬಳಿಕ ಕರ್ನಾಟಕ ಪೊಲೀಸರ ಮೇಲೂ ಹದ್ದಿನ ಕಟ್ಟಿರುವ ಎನ್ಐಎ ಅಧಿಕಾರಿಗಳು, ಪಿಎಫ್ಐ ಜೊತೆ ಸಂಬಂಧ ಹೊಂದಿರುವ ಕರ್ನಾಟಕ ಪೊಲೀಸರ ಲಿಸ್ಟ್ ರೆಡಿ ಮಾಡುತ್ತಿದ್ಯಂತೆ. ಒಟ್ಟಾರೆ, ದೇಶಕ್ಕೆ ಕಂಟಕವಾಗಿದ್ದ ಪಿಎಫ್ಐ ಸಂಘಟನೆಯನ್ನು ಬೇರೆ ಸಮೇತ ಹುಡುಕಿ ಹುಡುಕಿ, ಎನ್ಐಎ ಅಧಿಕಾರಿಗಳು ಕಿತ್ತು ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post