ಚಿತ್ರದುರ್ಗ: ರಾಜ್ಯದಲ್ಲಿ ಭರದಿಂದ ಸಾಗ್ತಿರೋ ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡು ಚಿತ್ರದುರ್ಗಕ್ಕೆ ಎಂಟ್ರಿಯಾಗಿದೆ. ಮೈಸೂರು, ಮಂಡ್ಯ, ತುಮಕೂರು ಬಳಿಕ ಚಿತ್ರದುರ್ಗದಲ್ಲೂ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಜಿಲ್ಲೆಯ ಹಿರಿಯೂರು ತಾಲೂಕಿಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದೆ. ಬೆಳಗ್ಗೆ ಸುಮಾರು 11 ಕಿಲೋ ಮೀಟರ್ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಲಿದ್ದಾರೆ. ಮಾರ್ಗಮಧ್ಯೆ ಕಾಡು ಇರುವ ಕಾರಣ ಕಾರಿನಲ್ಲಿ ಕೆಲ ದೂರ ಪ್ರಯಾಣಿಸಲಿದ್ದಾರೆ. ಸಂಜೆ 4 ಗಂಟೆಗೆ ಹಿರಿಯೂರಿನಿಂದ ಮತ್ತೆ ಪಾದಯಾತ್ರೆ ಮುಂದುವರೆಯಲಿದೆ.
Have something to say?
We’re all ears. #BharatJodoYatra pic.twitter.com/1U6MxckeaZ— Bharat Jodo (@bharatjodo) October 9, 2022
ಇಂದಿನ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ, ಲಂಬಾಣಿ ಮಹಿಳೆ, ತಾಯಿ-ಮಗಳೊಂದಿಗೆ ಮಾತನಾಡುತ್ತಾ ಹೆಜ್ಜೆ ಹಾಕಿದ್ರು. ಪಾದಯಾತ್ರೆ ನಡುವೆ ಲಂಬಾಣಿ ಮಹಿಳೆಯರಿಂದ ರಾಹುಲ್ ಗೆ ಸನ್ಮಾನ ಕೂಡ ಮಾಡಲಾಯ್ತು. ಇನ್ನು, ರಾಹುಲ್ ಜೊತೆ ಹೆಜ್ಜೆ ಹಾಕುವಾಗ ಖುಷಿ ಇಂದ ಯುವತಿಯೊಬ್ಬರು ಕಣ್ಣೀರಿಟ್ಟ ಘಟನೆಯೂ ನಡೆಯಿತು. ಯುವತಿ ಕೈ ಹಿಡಿದು ರಾಹುಲ್ ಅಭಯ ನೀಡಿ ನಡಿಗೆ ಮುಂದುವರಿಸಿದ್ರು.
ಪಾದಯಾತ್ರೆ ವೇಳೆಯೇ ಕಾಂಗ್ರೆಸ್ ಚುನಾವಣೆಗೂ ತಯಾರಿ..
ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಸಮೀಕ್ಷಾ ವರದಿಯನ್ನ ಆಧರಿಸಿ ಚರ್ಚೆ ನಡೆಸಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವನ್ನ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾವಾರು ಪಕ್ಷದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿರುವ ರಾಹುಲ್, ಎರಡು ದಿನಗಳ ಹಿಂದೆ ಪಾದಯಾತ್ರೆಯ ಬಿಡುವಿನ ವೇಳೆ ಸುರ್ಜೇವಾಲಾ ಜೊತೆಗೆ ಪಕ್ಷ ಮರಳಿ ಅಧಿಕಾರಕ್ಕೆ ಬರುವ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಖುದ್ದು ಮೈಸೂರು, ಮಂಡ್ಯ, ತುಮಕೂರು ಭಾಗದಲ್ಲಿ ಜನರ ಪ್ರತಿಕ್ರಿಯೆ ನೋಡಿ ಸಂತಸಗೊಂಡಿರುವ ರಾಹುಲ್, ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಚುನಾವಣಾ ಸಿದ್ಧತೆ, ರಣತಂತ್ರಕ್ಕೆ ಸಂಬಂಧ ಪಟ್ಟಂತೆ ಮಾತುಕತೆಯನ್ನೂ ನಡೆಸಿದ್ದಾರೆ.
जोड़ कर सबको बदलेंगे भारत का भविष्य,
तू कदम तो मिला, तू मेरे साथ तो चल #BharatJodoYatra pic.twitter.com/c8yNGAPOSh— Bharat Jodo (@bharatjodo) October 10, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post