ಚಿತ್ರದುರ್ಗ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ಗೆ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 12ನೇ ದಿನದ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿರೋ ಕಾಂಗ್ರೆಸ್ ನಾಯಕರ ಉತ್ಸಾಹ ಮತ್ತಷ್ಟು ಹೆಚ್ಚಿದಂತಿದೆ.
ಇಂದು ಭಾರತ್ ಜೋಡೋ ಯಾತ್ರೆ ಕೋಟೆ ನಾಡಿಗೆ ಕಾಲಿಟ್ಟಿದೆ. ನಿನ್ನೆಯ ಯಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ ಬರೋಬ್ಬರಿ 12 ದಿನ ಮುಗಿಸಿದೆ. ಈ ಯಾತ್ರೆಯ ನಡುವೆ ರಸ್ತೆಯಲ್ಲೇ ರಾಹುಲ್ ಗಾಂಧಿ ಹಾಗೂ ಡಿ.ಕೆ ಶಿವಕುಮಾರ್ ಪುಶ್ ಅಪ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿ ಅವರು ಇದರ ಮಧ್ಯೆ ಬಾಲಕನೊಬ್ಬನ ಕೈಯನ್ನು ಹಿಡಿದು ಪುಶ್ ಅಪ್ಸ್ ಮಾಡುವಂತೆ ಹೇಳಿದ್ದಾರೆ. ರಾಹುಲ್ ಗಾಂಧಿ ಮಾತಿಗೆ ಬಾಲಕ ಪುಶ್ ಅಪ್ಸ್ ಮಾಡಿ ಗಮನ ಸೆಳೆದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post