ವಿಘ್ನೇಶ್ ಮತ್ತು ನಯನತಾರಾ ಶುಭಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ನವಜಾತ ಶಿಶುಗಳ ಪಾದಗಳಿಗೆ ಪ್ರೀತಿಯಿಂದ ಚುಂಬಿಸುತ್ತಿರುವ ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಈ ಅವಳಿಗಳನ್ನ ತಮ್ಮ ಪುತ್ರರೆಂದು ಜಗತ್ತಿಗೆ ಪರಿಚಯಿಸಿದ್ದಾರೆ. ಮದುವೆಯಾಗಿ ಕೇವಲ ನಾಲ್ಕು ತಿಂಗಳಷ್ಟೇ ಆಗಿದೆ. ಹೀಗಾಗಿ ಬಾಡಿಗೆ ತಾಯ್ತನದ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಸರ್ಕಾರ ತನಿಖೆಗೂ ಆದೇಶಿಸಿದೆ. ಮದುವೆಯಾದ ನಾಲ್ಕು ತಿಂಗಳಿಗೇ ಲೇಡಿ ಸೂಪರ್‌ಸ್ಟಾರ್ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಅವಳಿ ಗಂಡು ಮಕ್ಕಳಿಗೆ ನಯನಾತಾರಾ-ವಿಘ್ನೇಶ್ ಪಾಲಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಆಶ್ಚರ್ಯಕ್ಕೆ ದೂಡಿದ್ದಾರೆ. ಅಲ್ಲದೆ, ಕಾನೂನಿಗೂ ಶಾಕ್ ನೀಡಿದ್ದಾರೆ.
ಶುಭಸುದ್ದಿ ಹಂಚಿಕೊಂಡು ವಿವಾದ ಸೃಷ್ಟಿಸಿಕೊಂಡ ಜೋಡಿ!
ನಯನತಾರಾ, ವಿಘ್ನೇಶ್ ದಂಪತಿಗೆ ಸರ್ಕಾರದಿಂದ ಶಾಕ್!
ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಈ ವರ್ಷದ ಜೂನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ನಿನ್ನೆ ತಮ್ಮ ಮಕ್ಕಳ ಆಗಮನದ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದರು. ಈ ಸಿಹಿ ಸುದ್ದಿಯೇ ದಂಪತಿಗೆ ಕಹಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ನಯನತಾರಾ-ವಿಘ್ನೇಶ್ ಶಿವನ್ ದಂಪತಿಗೆ ತಮಿಳುನಾಡು ಸರ್ಕಾರ ಶಾಕ್ ಕೊಟ್ಟಿದೆ.
‘ನಯನ್ ಮತ್ತು ನಾನು ಅಪ್ಪ-ಅಮ್ಮ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ. ನಮ್ಮ ಪ್ರಾರ್ಥನೆ, ಹಿರಿಯರ ಆಶೀರ್ವಾದವು ಈ ಮಕ್ಕಳ ರೂಪದಲ್ಲಿ ಸಿಕ್ಕಿದೆ. ನಮ್ಮ ಉಯಿರ್ ಮತ್ತು ಉಳಗಂ ಮೇಲೆ ನಿಮ್ಮ ಆಶೀರ್ವಾದ ಇರಲಿ’
ವಿಘ್ನೇಶ್ ಶಿವನ್, ತಮಿಳು ನಿರ್ದೇಶಕ
ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಜೂನ್ 9ರಂದು ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್‌ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ರು. ಆದಾಗಿ ಕೇವಲ ನಾಲ್ಕು ತಿಂಗಳಷ್ಟೇ ಕಳೆದಿದೆ. ಆಗಲೇ ಈ ಜೋಡಿ ಅವಳಿ ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ಸದ್ಯ ಮಗು ಪಡೆದ ವಿಚಾರ ಸಾಕಷ್ಟು ಚರ್ಚೆಯನ್ನ ಹುಟ್ಟು ಹಾಕಿದೆ. ಬಾಡಿಗೆ ತಾಯ್ತನದ ವಿಚಾರದಲ್ಲಿ ಸರ್ಕಾರ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯತಾರಾ ಹಾಗೂ ವಿಘ್ನೇಶ್ ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ.. ಈ ಹಿನ್ನೆಲೆ ತಮಿಳುನಾಡು ಸರ್ಕಾರ ಈ ಪ್ರಕರಣದಲ್ಲಿ ತನಿಖೆಗೆ ಕೂಡ ಆದೇಶಿಸಿದೆ.
ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಈ ಸಂಬಂಧ ತನಿಖೆ ನಡೆಸಲಿದೆ.. ಈ ಮೂಲಕ ಸ್ಟಾರ್ ಜೋಡಿ ವಿವಾದದ ಜೊತೆಗೆ ಹೊಸ ಕೇಸ್ ಮೈಮೇಲೆ ಎಳೆದುಕೊಂಡಿದ್ದಾರೆ. ಬಾಡಿಗೆ ತಾಯಿ ಮೂಲಕ ಜನಿಸಿರುವ ಅವಳಿ ಗಂಡು ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ಉಯಿರ್ ಅಂದ್ರೆ ಉಸಿರು, ಉಲಗಮ್ ಅಂದ್ರೆ ಪ್ರಪಂಚ ಅಂತ ಅರ್ಥ. ಸದ್ಯ ನಟಿಯಾಗಿ ನಯನತಾರಾ, ನಿರ್ದೇಶಕರಾಗಿ ತಮಿಳು ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಇಬ್ಬರು ಕೂಡ ಸದ್ಯ ಬ್ಯುಸಿ ಆಗಿದ್ದಾರೆ. ಇವರಿಬ್ಬರು ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ಅನುಮಾನ ಮೊದಲೇ ಇತ್ತು. ಈ ಅನುಮಾನಗಳು ಈಗ ನಿಜವಾಗಿದೆ.
ಒಟ್ಟಾರೆ, ಇದು ತಂತ್ರಜ್ಞಾನದ ವಿಫುಲತೆಯ ಸಮಸ್ಯೆಯೋ? ಫಿಗರ್ ಮೆಂಟೇನ್ ಮಾಡುವ ದುರಾಲೋಚನೆಯೋ ಗೊತ್ತಿಲ್ಲ.. ಸ್ಟಾರ್ ದಂಪತಿ ಅವಳಿ ಮಕ್ಕಳ ಜನನ ಬಗ್ಗೆ ಘೋಷಿಸುತ್ತಿದ್ದಂತೆ ಶುಭ ಹಾರೈಕೆಗಿಂತ ನೆಗೆಟಿವ್ ಕಾಮೆಂಟ್ಗಳೇ ಹೆಚ್ಚಾಗಿವೆ. ಇದೀಗ ಸರ್ಕಾರ ಕೂಡ ತನಿಖೆಯ ಶಾಕ್ ಕೊಟ್ಟಿದ್ದು, ನಯನತಾರಾ-ವಿಘ್ನೇಶ್ ಶಿವನ್ ಕೊಡುವ ಉತ್ತರ ಕುತೂಹಲ ಮೂಡಿಸಿದೆ.
Nayan & Me have become Amma & Appa❤️
We are blessed with
twin baby Boys❤️❤️
All Our prayers,our ancestors’ blessings combined wit all the good manifestations made, have come 2gethr in the form Of 2 blessed babies for us❤️😇
Need all ur blessings for our
Uyir😇❤️& Ulagam😇❤️ pic.twitter.com/G3NWvVTwo9— Vignesh Shivan (@VigneshShivN) October 9, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post