ವಿಜಯನಗರ: ಹೊಸಪೇಟೆ ಮತ್ತು ಕೊಪ್ಪಳದಲ್ಲಿ ಇಂದು ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನ ಕಮಲಾಪುರದ ದಲಿತ ಮುಖಂಡ ಕೊಲ್ಲಾರಯ್ಯ ಮನೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಉಪಹಾರ ಸೇವಿಸಿದ್ದಾರೆ.
ಕಮಲಾಪುರದ ದಲಿತ ಮಹಿಳೆ ಯಲ್ಲಮ್ಮ ಕೊಲ್ಲೂರಪ್ಪ ಮನೆಯಲ್ಲಿ ಸಿಎಂ ಹಾಗೂ ಯಡಿಯೂರಪ್ಪನವರಿಗಾಗಿ ಉಪ್ಪಿಟ್ಟು, ಒಗ್ಗರಣಿ ಮಿರ್ಜಿ, ಕೇಸರಿ ಬಾತನ್ನ ಸವಿದಿದ್ದಾರೆ. ಈ ಕುರಿತಂತೆ ಮಾತನಾಡಿರೋ ದಲಿತ ಮಹಿಳೆ ಯಲ್ಲಮ್ಮ, ಮುಖ್ಯಮಂತ್ರಿಗಳು ನಮ್ಮ ಮನೆಗೆ ಬಂದಿದ್ದು ಖುಷಿಯ ವಿಚಾರ. ಅವರ ಬಳಿ ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ನಾವು ಬಡವರು, ಕೇಳಲು ಸಾಕಷ್ಟು ಇದೆ. ಅವರೇ ತಿಳಿದು ಮಾಡ್ತಾರೆ ಎಂಬ ಭಾವಿಸಿದ್ದೇವೆ ಎಂದ ಹೇಳಿದರು.
ಬಿಜೆಪಿ ಕರ್ನಾಟಕ #JanaSankaplaYatre ಯ ಅಂಗವಾಗಿ ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ದಲಿತ ಕುಟುಂಬ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದೆನು. ಈ ಸಂದರ್ಭದಲ್ಲಿ ಶ್ರೀ @BSYBJP ಹಾಗೂ ಇತರರು ಉಪಸ್ಥಿತರಿದ್ದರು. @BJP4Karnataka pic.twitter.com/nlMIbtM8rt
— Basavaraj S Bommai (@BSBommai) October 12, 2022
ಸಿಎಂ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಿಎಂಗೆ ಸ್ವಾಗತಿಸಿದ ಸ್ಥಳೀಯರು, ಮೊದಲು ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಸಿಎಂ ಬೊಮ್ಮಾಯಿ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಗೋವಿಂದ ಕಾರಜೋಳ ಕೂಡ ಸಾಥ್ ನೀಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post