2023ರಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಟೂರ್ನಿಯು ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಲಿದೆ. ಪಾಕ್ನಲ್ಲಿ ಪಂದ್ಯಗಳು ನಡೆಯೋದ್ರಿಂದ ಟೀಂ ಇಂಡಿಯಾ, ಅಲ್ಲಿಗೆ ಪ್ರವಾಸ ಬೆಳೆಸುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ.
ಬಿಸಿಸಿಐ ಟೀಂ ಇಂಡಿಯಾವನ್ನ ಪಾಕಿಸ್ತಾನಕ್ಕೆ ಕಳುಹಿಸುತ್ತದೆಯಾ ಎಂಬ ಚರ್ಚೆಗಳು ಜೋರಾಗಿವೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಸಿಸಿಐ ಭಾರತ ತಂಡವನ್ನ ಪಾಕಿಸ್ತಾನಕ್ಕೆ ಕಳುಹಿಸಲು ಮುಕ್ತವಾಗಿದೆ. ಆದರೆ ಟೀಂ ಇಂಡಿಯಾ ಪಾಕಿಸ್ತಾನದ ನೆಲದಲ್ಲಿ ಹೋಗಿ ಏಷ್ಯಾಕಪ್ ಆಡಬೇಕೋ? ಬೇಡವೋ ಎಂಬುದನ್ನ ಅಂತಿಮವಾಗಿ ನಿರ್ಧರಿಸಬೇಕಾಗಿರೋದು ಭಾರತ ಸರ್ಕಾರ. ಇನ್ನು ಬಿಸಿಸಿಐ ತನ್ನ ವಾರ್ಷಿಕ ಸಭೆ ಸಂಬಂಧ ಈಗಾಗಲೇ ರಾಜ್ಯದ ಸ್ಟೇಟ್ ಅಸೋಸಿಯೇಷನ್ಸ್ಗೆ ನೋಟಿಸ್ ನೀಡಿದೆ. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಭಾರತವನ್ನ ಕಳುಹಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅಂದ್ಹಾಗೆ ಬಿಸಿಸಿಐ ವಾರ್ಷಿಕ ಸಭೆಯು ಅಕ್ಟೋಬರ್ 18 ರಂದು ನಡೆಯಲಿದೆ. ಪಾಕಿಸ್ತಾನದಲ್ಲಿ 50 ಓವರ್ಗಳ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಪಾಕಿಸ್ತಾನ ಮತ್ತು ಭಾರತ ತಂಡಗಳ ಮಧ್ಯೆ 2012ರಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದಿಲ್ಲ. ರಾಹುಲ್ ದ್ರಾವಿಡ್ ನೇತೃತ್ವದಲ್ಲಿ 2006ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಿತ್ತು. ಈ ವೇಳೆ ಮೂರು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನ ಆಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post