ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕುರಿತು ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ‘ರಾಮಮಂದಿರ’ವನ್ನ ಕಡವಿ ಬಾಬರಿ ಮಸೀದಿ ನಿರ್ಮಾಣ ಮಾಡಲು ಪಿಎಫ್‌ಐ ಯೋಜನೆ ರೂಪಿಸಿತ್ತು ಎಂದು ಮಹಾರಾಷ್ಟ್ರದ ಎಟಿಎಸ್ (Anti-Terror Squad) ನಾಸಿಕ್ ಕೋರ್ಟ್ಗೆ ತಿಳಿಸಿದೆ. ಈ ಆಘಾತಕಾರಿ ವಿಚಾರವೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಟಾರ್ಗೆಟ್ 2047..!
ಇತ್ತೀಚೆಗೆ ಮಹಾರಾಷ್ಟ್ರದ ಎಟಿಎಸ್, ನಿಷೇಧಿತ ಪಿಎಫ್ಐನ ಐದು ಸದಸ್ಯರನ್ನ ಬಂಧಿಸಿತ್ತು. ಇವರ ವಿಚಾರಣೆ ವೇಳೆ ಬಂಧಿತ ಆರೋಪಿಗಳು ರಾಮಮಂದಿರವನ್ನ ಕೆಡಗುವ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. 2047ರ ವೇಳೆಗೆ ಯಾವುದೇ ಬೆಲೆ ತೆತ್ತಾದರೂ ಸರಿ ಭಾರತವನ್ನ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಬೇಕು. ಇದನ್ನೇ ಮೂಲ ಗುರಿಯಾಗಿಸಿಕೊಂಡಿದ್ದ ಕೆಲವರು, ವಿದೇಶಗಳಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತರಬೇತಿ ಪಡೆಯುತ್ತಿದ್ದರು. ಹಾಗೂ ಶಂಕಿತರ ಖಾತೆಗೆ ವಿದೇಶದಿಂದ ಹಣ ಸಂದಾಯವಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಟಿಎಸ್ ಅಧಿಕಾರಿಗಳು ನಾಸಿಕ್ನಲ್ಲಿರುವ ವಿಶೇಷ ಕೋರ್ಟ್ಗೆ ಅಕ್ಟೋಬರ್ 18 ರಂದು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
ಯಾಕೆ 2047 ಟಾರ್ಗೆಟ್..?
ಭಾರತ ದೇಶವು 2047ರಲ್ಲಿ 100ನೇ ಸ್ವಾತಂತ್ರ್ಯೋತ್ಸವನ್ನ ಆಚರಿಸಿಕೊಳ್ಳಲಿದೆ. ಹೀಗಾಗಿ ನಿಷೇಧಿತ ಪಿಎಫ್‌ಐ ಟಾರ್ಗೆಟ್ 2047 ಆಗಿತ್ತು ಎಂದು ಹೇಳಲಾಗಿದೆ. ಬಂಧಿತ ಐವರು ಪಿಎಫ್‌ಐ ಸದಸ್ಯರಲ್ಲಿ ಮಲೆಗಾಂವ್ ಜಿಲ್ಲಾ ಪಿಎಫ್‌ಐ ಅಧ್ಯಕ್ಷ ಮೌಲನಾ ಸಾಯೀದ್ ಅಹ್ಮದ್ ಅನ್ಸಾರಿ, ಉಪಾಧ್ಯಕ್ಷ ಅಬ್ದುಲ್ ಖಯ್ಯುಮ್ ಶಿಖಂದ್ ಕೂಡ ಹೌದು. ಇವರನ್ನ ಮಲೆಗಾಂವ್ನಲ್ಲಿ ಬಂಧಿಸಲಾಗಿದೆ. ಇನ್ನುಳಿದ ಮೂವರನ್ನ ಮಹಾರಾಷ್ಟ್ರ ಇತರೆ ಭಾಗಗಳಲ್ಲಿ ಬಂಧಿಸಲಾಗಿದೆ.
ಬಂಧಿಸಿದ ಕಾರಣ..?
ಕೋಮು ಗಲಭೆಗೆ ಪ್ರಚೋದನೆ ನೀಡಿದ ಶಂಕೆಯ ಮೇಲೆ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ತೀವ್ರ ವಿಚಾರಣೆ ನಡೆಸಿದಾಗ ಅಯೋಧ್ಯೆ ರಾಮಮಂದಿರ ಮೇಲೆ ಸಂಚು ರೂಪಿಸಿರುವ ಬಗ್ಗೆ ಗೊತ್ತಾಗಿದೆ.
ಪಾಕಿಸ್ತಾನದಿಂದ ವಾಟ್ಸ್ಆ್ಯಪ್ ಗ್ರೂಪ್ ಕ್ರಿಯೇಟ್..!
ಬಂಧಿತ ಆರೋಪಿಗಳು ವಾಟ್ಸ್ಆ್ಯಪ್ ಗ್ರೂಪ್ಗಳನ್ನ ಮಾಡಿಕೊಂಡಿದ್ದರು. ಗ್ರೂಪ್ ಕ್ರಿಯೇಟ್ ಆಗಿದ್ದು ಪಾಕಿಸ್ತಾನದಲ್ಲಿ. ಪಾಕಿಸ್ತಾನದ ವ್ಯಕ್ತಿಗಳೇ ಈ ಗ್ರೂಪ್ನ ಅಡ್ಮಿನ್ಗಳಾಗಿದ್ದರು. ಬರೋಬ್ಬರಿ 175 ಮಂದಿ ಈ ಗ್ರೂಪ್ನಲ್ಲಿದ್ದರು. ಭಾರತ, ಪಾಕಿಸ್ತಾನ, UAE, ಅಫ್ಘಾನಿಸ್ತಾನದಿಂದಲೂ ಗ್ರೂಪ್ನಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿದ್ದವು. ಕೇವಲ ಅಯೋಧ್ಯೆ ಮಾತ್ರವಲ್ಲ ಭಾರತದ ತುಂಬಾ ಹಿಂಸಾಚಾರ ನಡೆಸೋದು ಇವರ ಉದ್ದೇಶ ಆಗಿತ್ತು ಎನ್ನಲಾಗಿದೆ.
ಒಟ್ಟು 35 ಪಿಎಫ್‌ಐ ಜಿಹಾದಿಗಳ ಬಂಧನ
ಬಂಧಿತರಿಂದ ಕಂಪ್ಯೂಟರ್ಗಳು, ಮೊಬೈಲ್, ಹಾರ್ಡ್ ಡಿಸ್ಕ್ ಮತ್ತು ಬ್ಯಾಂಕ್ ಖಾತೆಯಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನ ಸೀಜ್ ಮಾಡಲಾಗಿದೆ. ಮಹಾರಾಷ್ಟ್ರಾದ್ಯಂತ ಒಟ್ಟು 35 ಪಿಎಫ್‌ಐ ಜಿಹಾದಿಗಳನ್ನ ಬಂಧಿಸಲಾಗಿದೆ. ಪಿಎಫ್‌ಐ ವಿರುದ್ಧ ದೇಶಾದ್ಯಂತ ಕೂಂಬಿಂಗ್ ನಡೆದಿತ್ತು. ಭಾರತ ಸರ್ಕಾರ ಸೆಪ್ಟೆಂಬರ್ 27 ರಂದು ದೇಶದಲ್ಲಿ ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿ ಸುತ್ತೋಲೆ ಹೊರಡಿಸಿದೆ.
ಮೋದಿ ಭೇಟಿ ಸಂದರ್ಭದಲ್ಲಿ ಸಂಚು ಬಯಲು..
ಪ್ರಧಾನಿ ಮೋದಿ ಅಯೋಧ್ಯೆಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಅಕ್ಟೋಬರ್ 23 ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಈ ವೇಳೆ ಪಿಎಫ್‌ಐ ಸಂಚು ರೂಪಿಸಿತ್ತು. ಈ ಹಿಂದೆ ಮೋದಿ ಬಿಹಾರಕ್ಕೆ ಬಂದಿದ್ದಾಗಲೂ ಇದೇ ರೀತಿಯ ಸಂಚು ರೂಪಿತಗೊಂಡಿರೋದು ಬೆಳಕಿಗೆ ಬಂದಿತ್ತು. ಜುಲೈ 11 ರಂದು ಮೋದಿ ಬಿಹಾರಕ್ಕೆ ಭೇಟಿ ಕೊಟ್ಟಾಗ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಕೆಲವು ಅನುಮಾನಾಸ್ಪದ ಜನರು ಜಮಾಯಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post