ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಭರದಿಂದ ಸಾಗ್ತಿದೆ. ಇಂದಿನಿಂದ ರಾಯಚೂರಿನಲ್ಲಿ ಯಾತ್ರೆ ಶುರುವಾಗಿದ್ದು, ಬೆಳಗ್ಗೆ 6.30ಕ್ಕೆ ಮಂತ್ರಾಲಯದಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುರಾಯರ ದರ್ಶನ ಪಡೆದಿದ್ದಾರೆ. ಆಂಧ್ರ-ಕರ್ನಾಟಕ ಗಡಿ ತುಂಭದ್ರಾ ಸೇತುವೆಯಿಂದ ರಾಯಚೂರಿಗೆ ಯಾತ್ರೆ ಎಂಟ್ರಿಯಾಗಿದೆ.
ತುಂಗಭದ್ರಾ ಬ್ರಿಡ್ಜ್‌ನಿಂದ ನಾಲ್ಕು ಕಿಲೋಮೀಟರ್ ನಡೆದು ಯಾತ್ರೆ ಗಿಲ್ಲೇಸುಗೂರು ತಲುಪಲಿದೆ. ನಂತ್ರ ಕೆರೆಬೂದೂರಿನಿಂದ ಯರಗೇರಾವರೆಗೂ ಪಾದಯಾತ್ರೆ ಸಾಗಲಿದ್ದು, ಯರಗೇರಾದಲ್ಲಿ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ನಡೆಸಲಿದ್ದಾರೆ. ಮೂರು ದಿನಗಳ ಕಾಲ ಭಾರತ್ ಜೋಡೋ ಯಾತ್ರೆಯಲ್ಲಿ ರಾಜ್ಯದ ನಾಯಕರೆಲ್ಲರೂ ಭಾಗಿಯಾಗುವ ನಿರೀಕ್ಷೆ ಇದ್ದು, ರಾಯಚೂರಿನಿಂದ ಅಕ್ಟೋಬರ್ 23ಕ್ಕೆ ಶಕ್ತಿನಗರದ ಮೂಲಕ ಪಾದಯಾತ್ರೆ ತೆಲಂಗಾಣಕ್ಕೆ ಸಾಗಲಿದೆ.
LIVE: #BharatJodoYatra | Mantralayam temple circle to Yeragera | Kurnool to Raichur | Andhra Pradesh to Karnataka https://t.co/XJiqUyYxCL
— Bharat Jodo (@bharatjodo) October 21, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post