ರಾಯಚೂರು: ಕಾಂಗ್ರೆಸ್ನ ಭಾರತ್ ಜೋಡೋ ಪಾದಯಾತ್ರೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ದೇಶದಲ್ಲಿ ಸಾಮರಸ್ಯಕ್ಕಾಗಿ ಭಾರತವನ್ನು ಒಗ್ಗೂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಈ ಯಾತ್ರೆ ಸಾವಿರಕ್ಕೂ ಅಧಿಕ ಕಿಲೋ ಮೀಟರ್ ಕ್ರಮಿಸಿದ್ದು, ಕಾಂಗ್ರೆಸ್ಗೆ ಮತ್ತಷ್ಟು ಬಲ ತಂದಿದೆ.
ಇದನ್ನು ಓದಿ: ‘ನನಗೆ ಕೈಗಳಿಲ್ಲ..ಎಲ್ಲಾ ಕಾಲಿನಿಂದಲೇ ಸರ್..’ ಕನ್ನಡತಿಯ ಸ್ಫೂರ್ತಿದಾಯಕ ಕಥೆ ಕೇಳಿ ರಾಹುಲ್ ಏನಂದ್ರು..?
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಶಾಸಕರ ಪತ್ನಿಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಯಾತ್ರೆಯು ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯಿತು.
ಯಾತ್ರೆಯಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ಪತ್ನಿ ಮೀನಾಕ್ಷಿ, ಅಜಯ್ ಸಿಂಗ್ ಪತ್ನಿ ಶ್ವೇತಾ ಹಾಗೂ ಕೆಪಿಸಿಸಿ ಪದಾಧಿಕಾರಿ ರವಿ ಭೋಸರಾಜ್ ಪತ್ನಿ ಕೂಡ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗಿಯಾಗಿ ರಾಹುಲ್ ಜೊತೆ ಹೆಜ್ಜೆ ಹಾಕಿದರು. ಈ ನಡುವೆ ರಾಹುಲ್ ಗಾಂಧಿ ಸುಮಾರು 20ಕ್ಕೂ ರೈತರ ಜೊತೆ ಸಂವಾದ ನಡೆಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post