ಚಾಮರಾಜನಗರ: ಸಮಸ್ಯೆ ಹೇಳಲು ಬಂದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 3.30ಕ್ಕೆ ಹಂಗಳ ಗ್ರಾಮದ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು, ಆದ್ರೆ ಸಚಿವರು ಮಾತ್ರ ಸಂಜೆ 6.30ಕ್ಕೆ ತೆರಳಿದ್ರು. ಈ ವೇಳೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯೊಬ್ಬರು ಸಚಿವರ ಬಳಿ ಬಂದಾಗ ಅವರ ಸಮಸ್ಯೆಯನ್ನ ಕೇಳದೆ ಸಚಿವರು ಆಕೆ ಕಪಾಳಕ್ಕೆ ಹೊಡೆದಿದ್ದರು.
ಈ ಕುರಿತಂತೆ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿರೋ ಮಹಿಳೆ ಕೆಂಪಮ್ಮ, ಸಚಿವ ಸೋಮಣ್ಣನವರು ನನಗೆ ಹೊಡೆಯಲಿಲ್ಲ ಎಂದು ಹೇಳಿದ್ದಾರೆ. ನನಗೂ ಸೈಟ್ ಕೊಡಿ ಅಂತ ಅವರ ಕಾಲಿಗೆ ಬಿದ್ದಿದ್ದಾಗ, ಸಚಿವರು ನನ್ನನ್ನ ಎತ್ತಿ ಕ್ಷಮೆ ಕೇಳಿ ಸಮಾಧಾನಪಡಿಸಿದರು . ಇಷ್ಟೇ ಹೊರತಾಗಿ, ಅವರು ನನಗೆ ಹೊಡೆದಿಲ್ಲ, ಅವರ ಮೇಲೆ ತಪ್ಪು ಅಪವಾದ ಹೊರಿಸಿದ್ದಾರೆ. ಸೈಟಿಗೆಂದು ಕೊಟ್ಟಿದ್ದ 4 ಸಾವಿರ ಕೂಡ ವಾಪಾಸ್ ಕೊಡಿಸಿದ್ದಾರೆ. ನಾನು ಅವರ ಫೋಟೋ ಇಟ್ಕೊಂಡು ಪೂಜೆ ಮಾಡ್ತೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post