ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಬಾರೀ ಅವಘಡಗಳು ಸೃಷ್ಟಿಯಾಗಿವೆ. ಈವರೆಗೆ ಪಟಾಕಿ ಸಿಡಿತಕ್ಕೆ ಮಿಂಟೋ ಆಸ್ಪತ್ರೆ ಒಂದರಲ್ಲೇ 11 ಕೇಸ್ ದಾಖಲಾಗಿದೆ.
ಪಟಾಕಿ ಸಿಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಇದೇ 22 ರಿಂದ ಇಲ್ಲಿವರೆಗೆ 11 ಪಟಾಕಿ ಅವಘಡಗಳ ಕೇಸ್ ದಾಖಲಾಗಿವೆ. ಇನ್ನೂ ಇದರಲ್ಲಿ ಬಾಲಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವರಿಗೆ ಕಣ್ಣಿಗೆ ಸಣ್ಣ ಪುಟ್ಟ ಗಾಯಗಳಾಗಿದ್ರೆ, ಇನ್ನು ಕೆಲವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲರಿಗೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ದಿಢೀರ್ ಬೆಂಕಿ.. ಸ್ಥಳದಲ್ಲೇ ಇಬ್ಬರು ಸಾವು
ಕಲಾಸಿಪಾಳ್ಯದ 35 ವರ್ಷದ ಸುರೇಶ್ ಎಂಬವರ ಮುಖಕ್ಕೆ ಪಟಾಕಿ ಸಿಡಿದು ಗಾಯವಾಗಿದೆ. ಜೆಪಿನಗರದ 10 ವರ್ಷದ ಬಾಲಕ ಮನೋಜ್ ಕಣ್ಣಿಗೆ ಪಟಾಕಿ ಸಿಡಿದು ಬಾಲಕನ ಮುಖ ಸುಟ್ಟು ಹೋಗಿದೆ. ಅಲ್ಲದೇ ಆತನ ಕಣ್ಣು ಹಾಗೂ ದೇಹದ ಮೇಲೂ ಸುಟ್ಟ ಗಾಯಗಳಾಗಿದೆ. ಸದ್ಯ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ರಾಕೆಟ್ ಸಿಡಿದು ಥಣಿಸಂಧ್ರದ 7 ವರ್ಷದ ಬಾಲಕ ಸ್ಯಾಮುಯೆಲ್ ಬಲ ಭಾಗದ ಕಣ್ಣಿಗೆ ಗಂಭೀರ ಗಾಯವಾಗಿದೆ. ಫ್ರೇಜರ್ ಟೌನ್ ಮೂಲದ 7 ವರ್ಷದ ಆದಿತ್ಯ ಎಂಬ ಹುಡುಗ ಕೂಡ ಪಟಾಕಿ ಸಿಡಿದು ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾನೆ. ಉಳಿದಂತೆ ಶ್ರೀನಗರದ 18 ವರ್ಷದ ಮದನ್ ಎಂಬಾತನಿಗೆ ಬಿಜಲಿ ಪಟಾಕಿ ಕಣ್ಣಿಗೆ ತಗುಲಿ ಗಾಯವಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 11 ಪ್ರಕರಣ ವರದಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲೂ ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೂ ಮುನ್ನವೇ ದುರಂತ-ಪಟಾಕಿ ಸಿಡಿದು ಇಬ್ಬರ ಕಣ್ಣಿಗೆ ಗಂಭೀರ ಗಾಯ..
ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿತದಿಂದ ಉಂಟಾಗುವ ಕಣ್ಣಿನ ಹಾನಿ ಘಟನೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಿದ್ಧತೆ ಮಾಡಿಕೊಂಡಿತ್ತು. ಮಿಂಟೋ ಆಸ್ಪತ್ರೆಯಲ್ಲಿ 24/07 ತುರ್ತು ಚಿಕಿತ್ಸೆ ಲಭ್ಯವಿರಲಿದ್ದು, ಇದಕ್ಕಾಗಿ ಎರಡು ಸಹಾಯವಾಣಿಗಳನ್ನು ತೆರೆದಿದ್ದು, 94817 40137, 94808 32430 ನಂಬರ್ಗಳನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ದೀಪಾವಳಿ ಸಂಭ್ರಮ; 2 ಗಂಟೆ ಮಾತ್ರ ಪಟಾಕಿ ಹಚ್ಚಲು ಅವಕಾಶ.. ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post