ದೀಪದ ಹಬ್ಬ ದೀಪಾವಳಿ.. ಕತ್ತಲೆಯಿಂದ ಬೆಳಕಿನಡೆಗೆ, ಕೆಟ್ಟತನವನ್ನು ಹೋಗಲಾಡಿಸುವ ಹಬ್ಬವೇ ದೀಪಾವಳಿ. ಬೆಳಕಿನ ಹಬ್ಬ ದೀಪಾವಳಿ ಎಲ್ಲರಿಗೂ ಖುಷಿ ಕೊಡುತ್ತದೆ. ಇದೀಗ ನಟ ಯಶ್, ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ.
ನಟ ಯಶ್, ನಟಿ ರಾಧಿಕಾ ಪಂಡಿತ್ ಈ ಬಾರಿ ದೀಪಾವಳಿ ಹಬ್ಬವನ್ನು ತಮ್ಮ ಮುದ್ದು ಮಕ್ಕಳೊಂದಿಗೆ ಆಚರಣೆ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಜೊತೆ ಮಗಳು ಐರಾ, ಮಗ ಯಥರ್ವ ಕೂಡ ದೀಪಾವಳಿ ಹಬ್ಬವನ್ನು ಎಂಜಾಯ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಸಿನಿಮಾ ಶೂಟಿಂಗ್ ನಲ್ಲಿ ಯಶ್ ಬ್ಯುಸಿ ಇದ್ದರೂ ಸಹ ತಮ್ಮ ಪ್ರೀತಿಯ ಕುಟುಂಬದ ಜೊತೆ ಸಮಯ ಸಿಕ್ಕಾಗಲೆಲ್ಲಾ ಕಾಲ ಕಳೆಯುತ್ತಾರೆ. ಯಶ್ ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಮೀಸಲಿಡುತ್ತಾರೆ.
ಇನ್ನು, ಯಶ್ ಮುಂದಿನ ಸಿನಿಮಾ ಯಾರ್ ಜೊತೆ ಮಾಡ್ತಾರೆ? ಯಶ್ 19ನೇ ಸಿನಿಮಾದ ಅಪ್ಡೇಟ್ ಏನು ಅನ್ನೋ ಪ್ರಶ್ನೆ ಇಡೀ ಇಂಡಿಯಾನವನ್ನೇ ಕಾಡ್ತಿದೆ. ಯಶ್ ಹೊಸ ಸ್ಕ್ರಿಪ್ಟ್ ಅನ್ನ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದ್ದು, ಅವರ ಮುಂದಿನ ಸಿನಿಮಾವನ್ನ ಕೂಡ ಕೆವಿಎನ್ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ಸದ್ಯದ ಸಮಾಚಾರವಾಗಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post