ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಆ ಎರಡು ಮ್ಯಾಚ್ ವಿನ್ನಿಂಗ್ ಸಿಕ್ಸ್ ಹಿಂದಿನ ಸೀಕ್ರೆಟ್ ಏನು..? ಪಂದ್ಯದ ನಂತರ ಕೊಹ್ಲಿ ಎದುರಾಳಿಗಳಿಗೆ ಕೊಟ್ಟ ಎಚ್ಚರಿಕೆ ಏನು..?
ವಿರಾಟ್ ಕೊಹ್ಲಿ.. ಕ್ರಿಕೆಟ್ ಜಗತ್ತಿನ ಒನ್ ಆ್ಯಂಡ್ ಓನ್ಲಿ ರನ್ಮಷಿನ್. 14 ವರ್ಷಗಳ ಕರಿಯರ್ನಲ್ಲಿ ಕೊಹ್ಲಿ ಗಳಿಸದ ರನ್ಗಳ..? ಬಾರಿಸದ ಶತಕಗಳಾ..? ಬ್ರೇಕ್ ಮಾಡದ ದಾಖಲೆಗಳಾ..? ಮಾಡದ ಸಾಧನೆಗಳಾ..? ಪ್ರತಿ ಬಾರಿ ಕೊಹ್ಲಿ ರನ್ಬೇಟೆಯಾಡಿದಾಗಾ, ತಂಡಕ್ಕೆ ಗೆಲುವು ತಂದುಕೊಟ್ಟಾಗ ಸಿಂಹದಂತೆ ಘರ್ಜಿಸ್ತಿದ್ರು. ವೀರಾವೇಷದಿಂದ ಆರ್ಭಟಿಸ್ತಿದ್ರು.
ಆದ್ರೆ, ಪಾಕಿಸ್ತಾನ ವಿರುದ್ಧ ಪಂದ್ಯ ಗೆದ್ದ ನಂತರ ಕೊಹ್ಲಿ, ಫುಲ್ ಎಮೋಷನಲ್ ಆಗಿದ್ರು. ಇಷ್ಟು ಸಾಕು, ಕೊಹ್ಲಿಗೆ ಈ ಇನ್ನಿಂಗ್ಸ್ ಎಷ್ಟು ಸ್ಪೆಷಲ್ ಆಗಿತ್ತು ಅಂತ ಹೇಳೋದಿಕ್ಕೆ. ಇನ್ನು ಪಂದ್ಯದ ನಂತರ ಕೊಹ್ಲಿ, ತಮ್ಮ GREAT ಇನ್ನಿಂಗ್ಸ್ ಬಗ್ಗೆ ಏನೇಳಿದ್ರು, ಪಂದ್ಯದ ದಿಕ್ಕನೇ ಬದಲಿಸಿದ ಆ ಎರಡು ಸಿಕ್ಸರ್ ಹಿಂದಿನ ಸೀಕ್ರೆಟ್ ಏನು..? ಇದೆಲ್ಲದರ ಬಗ್ಗೆ ಕೊಹ್ಲಿ ಮಾತಾಡಿದ್ದಾರೆ.
ಬ್ಯಾಟ್ ಬದಲಾಯಿಸಿದ್ರು, ಎರಡು ಅದ್ಭುತ ಸಿಕ್ಸರ್ ಸಿಡಿಸಿದ್ರು..!
Light weight ಬ್ಯಾಟ್ನಿಂದ weight ಬ್ಯಾಟ್ಗೆ ಶಿಫ್ಟ್..!
ಯೆಸ್, ಪಾಕಿಸ್ತಾನ ವಿರುದ್ಧ ಭಾರತ ಗೆಲುವಿನ ರಣಕಹಳೆ ಮೊಳಗಿಸೋದಕ್ಕೆ ಕಾರಣವಾಗಿದ್ದೇ, ಈ ಎರಡು ಸಿಕ್ಸ್ಗಳು. ಕೊಹ್ಲಿ ಈ 2 ಸಿಕ್ಸ್ ಸಿಡಿಸದಿದ್ರೆ, ಭಾರತ ಗೆಲ್ತಿರಲಿಲ್ಲ. ಸ್ವತ: ಕೊಹ್ಲಿಗೂ ಇದು ಗೊತ್ತಿತ್ತು.
ನನಗೆ ನನ್ನ ಮೇಲೆ ನಂಬಿಕೆ ಇತ್ತು. ನೀನು ಪಂದ್ಯ ಗೆಲ್ಲಬೇಕಂದ್ರೆ ಈ ಓವರ್ನಲ್ಲಿ ಎರಡು ಸಿಕ್ಸ್ ಸಿಡಿಸಬೇಕಂತ ನನ್ನಲ್ಲಿ ನಾನು ಹೇಳಿಕೊಳ್ತಿದ್ದೆ..
ಇನ್ನು, ರೌಫ್ ಓವರ್ನಲ್ಲಿ ಸಿಕ್ಸರ್ ಸಿಡಿಸಬೇಕೆಂದು ಕೊಹ್ಲಿ ಮೊದಲೇ ಡಿಸೈಡ್ ಮಾಡಿದ್ರು. 18ನೇ ಓವರ್ವರೆಗೂ Light weight ಬ್ಯಾಟ್ ಹಿಡಿದು ಕೊಹ್ಲಿ ಆಡ್ತಿದ್ರು. ಆದ್ರೆ, 19ನೇ ಓವರ್ ಆರಂಭಕ್ಕೂ ಮೊದಲು, ತೂಕದ ಬ್ಯಾಟ್ ತರಿಸಿಕೊಂಡ್ರು.
ಕೊನೆಯಲ್ಲಿ ನಾವು ಬಿಗ್ ಶಾಟ್ಗಳನ್ನ ಬಾರಿಸಲೇಬೇಕಾಗಿತ್ತು. ನಾನು ನನ್ನ ಬ್ಯಾಟನ್ನ ಚೇಂಜ್ ಮಾಡ್ದೆ, ಅಲ್ಲಿವರೆಗೂ ನಾನು Light weight ಬ್ಯಾಟ್ನಿಂದ ಬ್ಯಾಟಿಂಗ್ ಮಾಡ್ತಿದ್ದೆ.
ಒತ್ತಡದಲ್ಲಿದ್ದ ಕೊಹ್ಲಿಗೆ ಗೆಲ್ಲೋ ವಿಶ್ವಾಸ ತುಂಬಿದ್ದೇ ಪಾಂಡ್ಯ..!
ಯೆಸ್, ಟೀಮ್ ಇಂಡಿಯಾ ಒಂದು ಹಂತದಲ್ಲಿ 31 ರನ್ಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದ್ರಿಂದ ಕೊಹ್ಲಿಯು ಒತ್ತಡಕ್ಕೆ ಸಿಲುಕಿದ್ರು. ಆದ್ರೆ, ಪಾಂಡ್ಯ ಕೊಹ್ಲಿಯಲ್ಲಿ ಗೆಲುವಿನ ಆತ್ಮವಿಶ್ವಾಸ ತುಂಬಿದ್ರು.
ಹಾರ್ದಿಕ ಪಾಂಡ್ಯ ಆರಂಭದಿಂದಲೇ ಪಾಸಿಟಿವ್ ಆಗಿದ್ರು, ನಾವು ಆಡ್ತಾ ಹೋಗೋಣ, ಗ್ಯಾಪ್ ನೋಡಿ ರನ್ಗಳಿಸೋಣ, ನಮ್ಮಿಂದು ಇದು ಸಾಧ್ಯ ಅಂತ ಹೇಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ರು. ಪ್ರಾಮಾಣಿಕವಾಗಿ ಹೇಳಬೇಕಂದ್ರೆ ನಾನು ತುಂಬಾ ಒತ್ತಡದಲ್ಲಿದ್ದೆ.
ನಾನು ಒಮ್ಮೆ ಸೆಟ್ ಆದ್ರೆ, ಯಾರನ್ನೂ ಬಿಡಲ್ಲ..!
ಟಿ20 ಫಾರ್ಮೆಟ್ನಲ್ಲಿ ಡೆತ್ ಓವರ್ಗಳಲ್ಲಿ ಕೊಹ್ಲಿ ಎಂತ ಡೇಂಜರಸ್ ಬ್ಯಾಟ್ಸ್ಮನ್ ಅಂತ ಈಗಾಗ್ಲೇ ಪ್ರೂವ್ ಆಗಿದೆ. ಆರಂಭದಲ್ಲಿ ಕೂಲ್ ಆಗಿ ಆಡೋ ಕೊಹ್ಲಿ, ಕೊನೆಯ 4 ಓವರ್ಗಳಲ್ಲಿ ಅಕ್ಷರಶ: ಅಬ್ಬರಿಸ್ತಾರೆ. ಈ ಹಂತದಲ್ಲಿ ಕೊಹ್ಲಿಯನ್ನ ಕಟ್ಟಿಹಾಕೋದು ಅಷ್ಟು ಸುಲಭವಲ್ಲ. PRESSURE COMPLETE ಬೌಲರ್ಗಳ ಮೇಲೆ ಇದ್ರೆ, ಕೊಹ್ಲಿ Confidence NEXT LEVELನಲ್ಲಿರುತ್ತೆ.
ಬಹಳಷ್ಟು ಜನ ಚೇಸಿಂಗ್ ಮಾಡಬೇಕಂದ್ರೆ, ಒತ್ತಡ ಇರುತ್ತೆ ಅಂತ ಹೇಳ್ತಾರೆ. ಆದ್ರೆ, ನನಗದು ಕ್ಲಾರಿಟಿ, ನಿಮಗೆ ನಿಮ್ಮ ಗುರಿ ಏನು ಅಂತ ಚೆನ್ನಾಗಿ ತಿಳಿದಿರುತ್ತೆ. 16, 17ನೇ ಓವರ್ನಲ್ಲಿ ನಾನು ಪವರ್ ಹಿಟ್ಟಿಂಗ್ ಮಾಡಬಲ್ಲೆ ಅಂತ ನನಗೆ ಚೆನ್ನಾಗಿ ಗೊತ್ತು ಮತ್ತು ಅದೇ ನನ್ನ ಶಕ್ತಿ. ನಾನು 250 ರಿಂದ 300 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಬಲ್ಲೆ. ನಾನು ಆತ್ಮವಿಶ್ವಾಸದಲ್ಲಿದ್ದಾಗ ಒಬ್ಬನೇ ಒಬ್ಬ ವ್ಯಕ್ತಿ ಒತ್ತಡದಲ್ಲಿರುತ್ತಾನೆ ಅದು ಬೌಲರ್.!
ಒಟ್ಟಿನಲ್ಲಿ ಕೊಹ್ಲಿ ವಿಶ್ವಕಪ್ ಸಮರದ ಮೊದಲ ಪಂದ್ಯದಲ್ಲೇ, ಜಬರ್ದಸ್ತ್ ಇನ್ನಿಂಗ್ಸ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿರೋದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post