ಡಾಲಿ ಧನಂಜಯ್ ನಿರ್ಮಾಣ ಮತ್ತು ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರೆಸ್ಮೀಟ್ ಮಾಡಿದ ಚಿತ್ರತಂಡ, ವೀರಗಾಸೆಗೆ ಅವಮಾನ ಮಾಡೋ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಬಸವೇಶ್ವರನಗರ ಕಂಬಿ ಸಂಭಾಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ನಟ ಡಾಲಿ ಧನಂಜಯ್, ಯಾರೋ ನನ್ನ ವಿರುದ್ದ ಕೆಲಸ ಮಾಡುತ್ತಿದ್ದಾರೆ. ನಾನು ಸಿನಿಮಾ ಮಾಡೋಕೆ ಬಂದಿದ್ದೇನೆ. ಸಿನಿಮಾವನ್ನು ಸಿನಿಮಾ ರೀತಿ ನೋಡಬೇಕು ಎಂದಿದ್ದಾರೆ.
ಕಲಾವಿದರಿಗೆ ಮಾಸಾಶನ ಕೊಡಬೇಕು
ಸಿನಿಮಾದಲ್ಲಿ ವೀರಗಾಸೆ ತೋರಿಸಿದ್ದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀರಗಾಸೆ ಎಲ್ಲ ಕಲೆಗಳಂತಹ ಭಿನ್ನವಾದ ಕಲೆ. ನಾನು ವೀರಗಾಸೆ ಕಲಾವಿದರ ಪರ ಇದ್ದೇನೆ, ಇವರಿಗೆ ಮಾಸಾಶನ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ವೀರಗಾಸೆ ವೇಷ ಧರಿಸಿ ಮೋಸ ಮಾಡೋಕೆ ಬಂದವರಿಗೆ ಹೊಡೆದಿದ್ದೇವೆ. ನಿಜವಾದ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿಲ್ಲ ಎಂದರು. ಹೀಗಿದ್ದೂ ಯಾರಿಗಾದ್ರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾಲಿ ಧನಂಜಯ ಜತೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಜಿಲ್ಲಾಧ್ಯಕ್ಷ ಎಸ್.ಗುರುಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ,ಚಕ್ರವರ್ತಿ ಚಂದ್ರಚೂಡ್ ಭಾಗಿಯಾಗಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post