ಕಿರುತೆರೆಯಲ್ಲಿ ದಾಖಲೆಗಳನ್ನ ಉಡಾಯಿಸಿದ ಸೀರಿಯಲ್ ಅಂದ್ರೆ ಅಗ್ನಿಸಾಕ್ಷಿ ಧಾರಾವಾಹಿ. 8 ಗಂಟೆ ಆದ್ರೆ ಸಾಕು ಮನೆ ಮಂದಿಯೆಲ್ಲಾ ಕೆಲಸ ಬಿಟ್ಟು ಅಗ್ನಿಸಾಕ್ಷಿ ಧಾರಾವಾಹಿ ನೋಡೋದಕ್ಕೆ ಕುಳಿತುಕೊಳ್ಳುತ್ತಿದ್ದರು. ಅಷ್ಟು ಅಭಿಮಾನಿಗಳನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು ಈ ಧಾರಾವಾಹಿ. ಸನ್ನಿಧಿ ಪಾತ್ರದ ಮೂಲಕ ಎಲ್ಲರ ಮನೆ ಮಗಳಾಗಿದ್ದ ನಟಿ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಸನ್ನಿಧಿ ಪಾತ್ರ ಮಾಡ್ತಾ ನಟಿ ವೈಷ್ಣವಿ ಗೌಡ ಹಲವಾರು ವರ್ಷಗಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಮನೆ ಸೊಸೆ ಅಥವಾ ಮನೆ ಮಗಳು ಇದ್ದರೆ ಸನ್ನಿಧಿ ರೀತಿ ಇರಬೇಕು ಅನ್ನುವಷ್ಟರ ಮಟ್ಟಕ್ಕೆ ತಲುಪ್ಪಿತ್ತು ಆ ಪಾತ್ರ. ಈ ಸೀರಿಯಲ್ ಮುಗಿದ ನಂತರ ನಟಿ ವೈಷ್ಣವಿ ಬಿಗ್ಬಾಸ್ ಸೀಸನ್ 8 ಮನೆಗೆ ಎಂಟ್ರಿ ಕೊಟ್ಟಿದ್ದರು.
ಈಗ ಸೂಪರ್ ಸರ್ಪ್ರೈಸ್ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ ನಟಿ ವೈಷ್ಣವಿ ಗೌಡ. ಕಿರುತೆರೆಯಲ್ಲಿ ಸದ್ಯ ಟಾಪ್ ರೇಟೆಡ್ ಸೀರಿಯಲ್ ಆದ ಲಕ್ಷಣ ಧಾರಾವಾಹಿ ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಎಲ್ಲರ ಮನ ಗೆದಿದ್ದೆ. ಈ ಧಾರಾವಹಿಯಲ್ಲಿ ಈಗಾಗಲೇ ಸಾಕಷ್ಟು ವಿಲನ್ಗಳು ಇದ್ದಾರೆ. ಈ ಧಾರಾವಾಹಿಗೆ ವಿಲನ್ ಶೇಡ್ ನಟಿ ವೈಷ್ಣವಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಭೂಪತಿ ನಕ್ಷತ್ರಾ ಮಧ್ಯೆ ಇರೋ ಸಂಬಂಧ ಬಿರುಕು ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟಿ ವೈಷ್ಣವಿ ಗೌಡ.
ಈ ವಿಲನ್ ರೋಲ್ ನಿಜಕ್ಕೂ ಅವರಿಗೆ ಚಾಲೆಂಜಿಗ್ ಪಾತ್ರವಾಗಿದೆ. ಇದು ಇವ್ರಿಗೆ ಸೂಟ್ ಆಗತ್ತಾ? ಹೇಗೆ ಈ ವಿಲನ್ ಶೇಡ್ ನಿಭಾಯಿಸುತ್ತಾರೆ ಎಂದು ವೀಕ್ಷಕರ ಕುತೂಹಲದಿಂದ ಕಾಯ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post