ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ರಥೋತ್ಸವದ ವೇಳೆ ಮಲೆ ಮಹಾದೇಶ್ವರನಿಗೆ ಅಪಾರ ಪ್ರಮಾಣದ ಆದಾಯ ಹರಿದುಬಂದಿದೆ.
ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಗ್ರಹವಾಗಿದೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ರಥೋತ್ಸವದಲ್ಲಿ ಪ್ರಸಾದದ ಲಾಡು ವಿತರಣೆ ಹಾಗೂ ಚಿನ್ನದ ತೇರು ಎಳೆಸುವ ಹರಕೆಯಿಂದ ಒಂದು ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. 2 ವರ್ಷದ ಬಳಿಕ ಅದ್ಧೂರಿಯಾಗಿ ನೆರವೇರಿದ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ರು.
ಮಾದಪ್ಪನ ದರ್ಶನಕ್ಕೆ ಬಂದವರು ಪ್ರಸಾದ ಖರೀದಿ, ಹರಕೆ ತೀರಿಸಲು ಚಿನ್ನದ ತೇರು ಎಳೆಸುವ ಕಾರ್ಯ ಮಾಡುತ್ತಾರೆ. ಈ ಬಾರಿ 2.44 ಲಕ್ಷ ಪ್ರಸಾದದ ಲಾಡು ಮಾರಾಟವಾಗಿದ್ದು ಇತಿಹಾಸ ಸೃಷ್ಟಿಸಿದೆ. ಲಾಡು ಮಾರಾಟದಿಂದ 61 ಲಕ್ಷ ಹಾಗೂ ಚಿನ್ನದ ತೇರು ಎಳೆಸುವ ಹರಕೆಯಿಂದ 50 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಇಷ್ಟು ಮಾತ್ರವಲ್ಲದೆ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಇತರ ಸೇವೆಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯ ಮಾದಪ್ಪನಿಗೆ ಸಂದಾಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post