ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ ಆಸ್ಟ್ರೇಲಿಯಾದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಟೆಸ್ಟ್ ಹಾಗೂ ಒನ್ಡೇ ಫಾರ್ಮೆಟ್ನಲ್ಲಿ ಮಿಂಚಿದ್ದಾರೆ. ಗಾಬಾ ಟೆಸ್ಟ್ ಪಂದ್ಯವೇ, ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್. ಇನ್ನು ಆಸ್ಟ್ರೇಲಿಯಾದ ಪೇಸ್ ಆ್ಯಂಡ್ ಬೌನ್ಸಿ ಟ್ರ್ಯಾಕ್ಗಳು, ರಿಷಭ್ ಪಂತ್ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿವೆ.
ಅಬ್ಬರದ ಬ್ಯಾಟಿಂಗ್ಗೆ ಹೆಸರಾಗಿರೋ ರಿಷಭ್ ಪಂತ್ರನ್ನ ಆರಂಭಿಕರಾಗಿ ಆಡಿಸ್ಬೇಕು. ಪವರ್ ಪ್ಲೇನಲ್ಲಿ ಪಂತ್ ಘರ್ಜಿಸಿದ್ರೆ, ತಂಡಕ್ಕೆ ಅದ್ಭುತ ಆರಂಭ ಸಿಗಲಿದೆ. ಇದ್ರಿಂದ, ಕಳಪೆ ಫಾರ್ಮ್ನಲ್ಲಿರೋ ಕೆ.ಎಲ್ ರಾಹುಲ್ ಬದಲು, ಪಂತ್ರನ್ನ ಕಣಕ್ಕಿಳಿಸಬೇಕು ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ. ಇದು ಬೆಸ್ಟ್ ಟೈಮ್ ಕೂಡ ಆಗಿದೆ.
ಮತ್ತೊಂದೆಡೆ ಟೀಂ ಇಂಡಿಯಾದ ಒಂದೇ ಒಂದು ಸೋಲಿನಿಂದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ದಿನೇಶ್ ಕಾರ್ತಿಕ್ಗೆ ಚಾನ್ಸ್ ನೀಡ್ತಿರೋದ್ರ ಬಗ್ಗೆ, ಚರ್ಚೆ ಶುರುವಾಗಿದೆ. DK ಬದಲಿಗೆ ರಿಷಭ್ ಪಂತ್ಗೆ, ಅವಕಾಶ ನೀಡ್ಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post