ಆಸ್ಟ್ರೇಲಿಯಾ ಪಿಚ್ಗಳು ಹೆಚ್ಚು ಪೇಸ್ ಆ್ಯಂಡ್ ಬೌನ್ಸಿ. ವಿಶ್ವದ ಇತರೆ ಬ್ಯಾಟರ್ಸ್ ಇಲ್ಲಿ ರನ್ಗಳಿಸಲು ಪರದಾಡ್ತಾರೆ. ಅಷ್ಟೇ ಯಾಕೆ.. ಆಸಿಸ್ ಬ್ಯಾಟರ್ಗಳೇ ಪರದಾಡ್ತಾರೆ. ಕೊಹ್ಲಿ ಮಾತ್ರ ರಣಬೇಟೆಗಾರನಾಗಿದ್ದಾನೆ. ಅದ್ರಲ್ಲೂ ಈ ಪಿಚ್ ಕೊಹ್ಲಿ ಪಾಲಿಗೆ ಸ್ವರ್ಗವಿದ್ದಂತೆ..
ಆಸ್ಟ್ರೇಲಿಯಾ ಪಿಚ್ಗಳಲ್ಲಿ ಕೊಹ್ಲಿಯದ್ದೇ ಆರ್ಭಟ.. ಕಾಂಗರೂ ನಾಡಿನ ಎಲ್ಲಾ ಪಿಚ್ಗಳಲ್ಲಿ ರನ್ ಬೇಟೆಯಾಡಿದ್ದಾರೆ. ತವರಿಗಿಂತ ಆಸಿಸ್ ಮೈದಾನಗಳಲ್ಲೇ ಹೆಚ್ಚು ಘರ್ಜಿಸಿದ್ದಾರೆ. ಮೆಲ್ಬೋರ್ನ್, ಸಿಡ್ನಿ, ಪರ್ಥ್.. ಹೀಗೆ ಎಲ್ಲಾ ಸ್ಟೇಡಿಯಂಗಳಲ್ಲೂ ರನ್ ಸುನಾಮಿ ಎಬ್ಬಿಸಿದ್ದಾರೆ. ಆದ್ರೆ, ಎಲ್ಲ ಪಿಚ್ಗಳಲ್ಲೂ ಅಬ್ಬರಿಸಿದ್ರೂ, ಕೊಹ್ಲಿ ಪಾಲಿಗೆ ಈ ಪಿಚ್ ಅಂದ್ರೆನೇ ಪಂಚಪ್ರಾಣ.
ಆಸಿಸ್ನ ಎಲ್ಲಾ ಟಫ್ ಪಿಚ್ಗಳಲ್ಲೂ ಕೊಹ್ಲಿ ಖದರ್ ತೋರಿಸಿದ್ದಾರೆ. ಅಡಿಲೇಡ್ ಮೈದಾನ ಅಂದ್ರೆ, ಕೊಹ್ಲಿಗೆ ಪಂಚಪ್ರಾಣ. ಇಲ್ಲಿ ಆಡುವಾಗ ಕೊಹ್ಲಿಗೆ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಆನುಭವವಾಗುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅಡಿಲೇಡ್ ಮೈದಾನದಲ್ಲಿ ಕೊಹ್ಲಿ ಫೇಲ್ ಆಗಿರೋ ಇತಿಹಾಸವೇ ಇಲ್ಲ.
ಅಡಿಲೇಡ್ ಮೈದಾನ ವಿರಾಟ್ ಕೊಹ್ಲಿ ಪಾಲಿಗೆ ಸ್ವರ್ಗ..!
ಅಡಿಲೇಡ್ ಮೈದಾನ ಕೊಹ್ಲಿ ಪಾಲಿಗೆ ಸ್ವರ್ಗ.. ಈ ಮೈದಾನದಲ್ಲಿ ಆಡಿದ ಪ್ರತಿ ಬಾರಿಯೂ ರನ್ ಬಿರುಗಾಳಿ ಎಬ್ಬಿಸಿದ್ದಾರೆ. ಟೆಸ್ಟ್, ಏಕದಿನ, ಟಿ20 ಮೂರು ಫಾರ್ಮೆಟ್ನಲ್ಲೂ ರನ್ ಬೇಟೆಯಾಡಿದ್ದಾರೆ. ತವರಿನ ಪಿಚ್ನಲ್ಲಿ ಆಸಿಸ್ ಆಟಗಾರರೇ, ಕೊಹ್ಲಿಯಷ್ಟು ಆರ್ಭಟಿಸಿಲ್ಲ ಗೊತ್ತಾ?
ಅಡಿಲೇಡ್ನಲ್ಲಿ ಮತ್ತೊಮ್ಮೆ ಸಿಡಿದೆದ್ದ ಕಿಂಗ್ ಕೊಹ್ಲಿ..!
ಮೆಲ್ಬನ್ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್.. ಸಿಡ್ನಿಯಲ್ಲಿ ನೆದರ್ಲೆಂಡ್ ಎದುರು ಅಜೇಯ 62 ರನ್ ಸಿಡಿಸಿ ಘರ್ಜಿಸಿದ್ರು. ತಮ್ಮ ಫೇವರಿಟ್ ಅಡಿಲೇಡ್ನಲ್ಲೂ ಕಿಂಗ್ ಕೊಹ್ಲಿ, ಸಿಡಿದೆದ್ದು, ಬಾಂಗ್ಲಾ ಟೈಗರ್ಸ್ ಸದ್ದಡಿಗಿಸಿದ್ರು. ಬಾಂಗ್ಲಾದೇಶದ ವಿರುದ್ಧ ಅಜೇಯ 64 ರನ್ ಚಚ್ಚಿದ ಕೊಹ್ಲಿ, ಟಿ20 ಕ್ರಿಕೆಟ್ನಲ್ಲಿ 36ನೇ ಅರ್ಧಶತಕ ದಾಖಲಿಸಿದ್ರು.
ಮೊದಲ ಟೆಸ್ಟ್ ಸೆಂಚುರಿ ಸಿಡಿಸಿದ್ದೇ ಇದೇ ಮೈದಾನದಲ್ಲಿ
ನಾಯಕನಾದ ಮೊದಲ ಟೆಸ್ಟ್ನಲ್ಲೇ 2 ಇನ್ನಿಂಗ್ಸ್ನಲ್ಲಿ ಶತಕ
ಏಕದಿನ ವಿಶ್ವಕಪ್ನಲ್ಲೂ ನೂರರ ಗಡಿ ದಾಟಿದ್ದ ಕಿಂಗ್!
ಅಡಿಲೇಡ್ ಓವಲ್ ಮೈದಾನ ಕೊಹ್ಲಿಗೆ ಯಾಕೆ ಇಷ್ಟ, ಅನ್ನೋದು ಇದಕ್ಕೆ ನೋಡಿ. 2012ರಲ್ಲಿ ಮೊದಲ ಟೆಸ್ಟ್ ಸೆಂಚುರಿ ಸಿಡಿಸಿದ್ದ ಕೊಹ್ಲಿ, 2014ರಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ಮೊದಲ ಟೆಸ್ಟ್ನ ಎರಡೂ ಇನ್ನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿದ್ರು. ಅಷ್ಟೆ ಅಲ್ಲ, 2015ರ ಏಕದಿನ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ 107ರನ್ ಚಚ್ಚಿದ್ರು.
ಆಸಿಸ್ ವಿರುದ್ಧ ಟಿ20ಯಲ್ಲಿ ಅರ್ಧಶತಕ, ಏಕದಿನದಲ್ಲಿ ಶತಕ
ಪಿಂಕ್ ಬಾಲ್ ಟೆಸ್ಟ್ನಲ್ಲಿ 74 ಚಚ್ಚಿದ್ದ ಕಿಂಗ್
2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಅಜೇಯ 90 ರನ್ ಗಳಿಸಿದ್ರು. 2019ರಲ್ಲಿ ಏಕದಿನದಲ್ಲೂ ಕಾಂಗರೂ ಪಡೆ ಎದುರು ಶತಕ ಸಿಡಿಸಿ ಆರ್ಭಸಿದ್ರು. 2020ರ ಪಿಂಕ್ಬಾಲ್ ಟೆಸ್ಟ್ನಲ್ಲೂ ಕೊಹ್ಲಿ 74 ರನ್ ಕಲೆ ಹಾಕಿದ್ರು. ಇದೀಗ ನಿನ್ನೆ ನಡೆದ ಪಂದ್ಯದಲ್ಲೂ ಅಜೇಯ 64 ರನ್ ಗಳಿಸಿ ಗೆಲುವಿನ ರೂವಾರಿಯಾದ್ರು. ಅಡಿಲೇಡ್ ಪಿಚ್ ಕೊಹ್ಲಿಗೆ ಹೋಮ್ ಗ್ರೌಂಡ್ ಅಂತೆ ಕೊಹ್ಲಿಯೇ ಹೀಗಂತ ಹೇಳಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ ಆಡೋವಾಗ, ಹೋಮ್ಗ್ರೌಂಡ್ನಲ್ಲಿ ಆಡ್ತಿರುವ ಅನುಭವವಾಗುತ್ತೆ ಎಂದಿದ್ದಾರೆ.
‘ಖಂಡಿತವಾಗಿಯೂ ಈ ಪಿಚ್ನಲ್ಲಿ ಆಡೋದಕ್ಕೆ ತುಂಬಾ ಇಷ್ಟಪಡುತ್ತೇನೆ. ಅದೇನೋ ನನಗೆ ಗೊತ್ತಿಲ್ಲ. ಮೈದಾನದ ಹಿಂದೆ ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡಿ, ಮೈದಾನಕ್ಕೆ ಪ್ರವೇಶ ನೀಡಿದ್ರೆ, ತವರಿನ ಮೈದಾನದ ಅನುಭವ ಬರುತ್ತೆ. MCGಯಲ್ಲಿ ಆಡಿದ ಬಳಿಕ ಅಡಿಲೇಡ್ ಬಂದಾಗ ಹೆಚ್ಚು ಆನಂದಿಸುತ್ತೇನೆ. ಮತ್ತು ಅದ್ಭುತವಾಗಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ’
ವಿರಾಟ್ ಕೊಹ್ಲಿ, ಕ್ರಿಕೆಟಿಗ
ಒಟ್ನಲ್ಲಿ ಅಡಿಲೇಡ್ ಓವಲ್ ಗ್ರೌಂಡ್ನಲ್ಲಿ ಕೊಹ್ಲಿಯನ್ನ ಕಟ್ಟಿಹಾಕೋದು ಅಷ್ಟು ಸುಲಭವಲ್ಲ. ಪ್ರಸ್ತುತ T20 ವಿಶ್ವಕಪ್ನಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿರೋ ಕಿಂಗ್, ಮುಂದೆಯೂ ಹೀಗೆ ಅಬ್ಬರಿಸಿ, ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದುಕೊಡಲಿ ಅನ್ನೋದೇ ನಮ್ಮೆಲ್ಲರ ಆಶಯ.
ವಿಶೇಷ ವರದಿ: ಪ್ರಸನ್ನಕುಮಾರ್ PN
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post