ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಯಾವುದೇ ಕಾರಣಕ್ಕೂ ಆಲ್ರೌಂಡರ್ ರವೀಂದ್ರ ಜಡೇಜಾರನ್ನ ಬಿಡುಗಡೆ ಮಾಡಬೇಡಿ ಎಂದು ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಟೀಮ್ ಮ್ಯಾನೇಜ್ಮೆಂಟ್ಗೆ ಖಡಕ್ ಸೂಚನೆ ನೀಡಿದ್ದಾರೆ.
ಜಡೇಜಾ ತಂಡದ ಅತ್ಯಂತ ಪ್ರಮುಖ ಆಟಗಾರ. ಜಡೇಜಾ ಸ್ಥಾನವನ್ನ ತುಂಬೋದು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ನೀವು ಜಡೇಜಾರನ್ನು ರಿಲೀವ್ ಮಾಡಿದ್ರೆ, ಆತನ ಸ್ಥಾನಕ್ಕೆ ಯಾರನ್ನು ತರೋಕು ಸಾಧ್ಯವಿಲ್ಲ ಎಂದಿದ್ದಾರೆ ಧೋನಿ.
2022 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೂ ಮುನ್ನ ಡಿಸೆಂಬರ್ನಲ್ಲಿ ಮಿನಿ ಆಕ್ಷನ್ ನೆರವೇರಲಿದೆ. ಅದಕ್ಕೂ ಮುನ್ನ ಸಿಎಸ್ಕೆ ಫ್ರಾಂಚೈಸಿ, ಜಡೇಜಾರನ್ನ ರಿಲೀಸ್ ಮಾಡಲಿದೆ ಅನ್ನೋ ಸುದ್ದಿ ಹರಡಿದೆ. ಈ ಹಿನ್ನೆಲೆಯಲ್ಲಿ ಧೋನಿ ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post