ಶಿವಮೊಗ್ಗದಲ್ಲಿ ನವ ವಿವಾಹಿತೆ ನೇಣಿಗೆ ಶರಣಾಗಿದ್ದಾರೆ. 23 ವರ್ಷದ ನವ್ಯಶ್ರೀ ನೇಣಿಗೆ ಶರಣಾದ ಮಹಿಳೆ. ಅಶ್ವಥ್ ನಗರದಲ್ಲಿರೋ ಮನೆ ಕಾರ್ ಶೆಡ್ ಆತ್ಮಹತ್ಯೆ ಮಾಡಿಕೊಂಡಿರೋ ನವ್ಯಶ್ರೀ ಖ್ಯಾತ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಸೊಸೆಯಾಗಿದ್ದಾರೆ.
5 ತಿಂಗಳ ಹಿಂದೆಯಷ್ಟೇ ಇವರಿಗೆ ಆಕಾಶ್ ಎಂಬುವರ ಜೊತೆ ವಿವಾಹ ಆಗಿತ್ತು. ನಿನ್ನೆ ರಾತ್ರಿ ತುಳಸಿ ಪೂಜೆ ಮಾಡಿದ್ದರು ಮೃತ ನವ್ಯಶ್ರೀ. ಅರಿಸಿನ ಕುಂಕುಮ ಸ್ವೀಕರಿಸಿ ಬಂದು ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಸಮಸ್ಯೆಯಿಂದ ನವ್ಯಶ್ರೀ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಜತೆಗೆ ಈ ಸಂಬಂಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post