ಜಿಂಬಾಬ್ವೆ ತಂಡದ ಓಪನರ್ ವೆಸ್ಲೇ ಮಾಧವರೆ ಕ್ಯಾಚನ್ನ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ, ವಿನೂತನ ದಾಖಲೆ ಬರೆದಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ 50 ಕ್ಯಾಚ್ಗಳ ಕ್ಲಬ್ ಸೇರ್ಪಡೆಗೊಂಡ 2ನೇ ಆಟಗಾರ ಎನಿಸಿದ್ದಾರೆ.
ಹಾಗೇ ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟ್ನಲ್ಲಿ 9ನೇ ಆಟಗಾರ ಕೂಡ ಆಗಿದ್ದಾರೆ. ಭಾರತದ ಪರ 58 ಕ್ಯಾಚ್ ಹಿಡಿದಿರುವ ರೋಹಿತ್ ಅಗ್ರಸ್ಥಾನದಲ್ಲಿದ್ದಾರೆ.
ಸತತ ಸೋಲುಗಳ ಬಳಿಕ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಬಂದಿದ್ದಾರೆ. ಈ ಮೂಲಕ ಫಾರ್ಮ್ ಈಸ್ ಟೆಂಪರರಿ, ಕ್ಲಾಸ್ ಈಸ್ ಪರ್ಮನೆಂಟ್ ಎಂದು ಸಾಬೀತು ಮಾಡಿದ್ದಾರೆ. 2022 ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅತ್ಯದ್ಭುತ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ತನ್ನ ಫಾರ್ಮನ್ನು ಟಿ20 ವಿಶ್ವಕಪ್ನಲ್ಲೂ ಮುಂದುವರಿಸಿದ್ದಾರೆ. ಕೇವಲ 2 ಪಂದ್ಯದಲ್ಲಿ ಮಾತ್ರ ಔಟಾದ ಕೊಹ್ಲಿ ಇನ್ನೂ ಮೂರು ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಇತ್ತೀಚೆಗಷ್ಟೇ ಎಷ್ಟೋ ವರ್ಷಗಳ ಬಳಿಕ ಕೊಹ್ಲಿ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಕೊಹ್ಲಿಯೊಂದಿಗೆ ಡೇವಿಡ್ ಮಿಲ್ಲರ್, ಸಿಖಂದರ್ ರಾಜಾ ಕೂಡ ರೇಸ್ನಲ್ಲಿದ್ದರು. ಈಗ ಇಬ್ಬರೊಂದಿಗೆ ಸ್ಪರ್ಧಿಸಿ ಕೊಹ್ಲಿಗೆ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಅಕ್ಟೋಬರ್ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post