ಬಳ್ಳಾರಿ: ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಎಂಬ ಶಂಕೆಯ ಮೇರೆಗೆ ತಂದೆಯೇ ಮಗಳನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಕುಡುತಿನಿ ಪಟ್ಟಣದಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ.
ಏನಿದು ಪ್ರಕರಣ..?
ಕುಡುತಿನಿ ಪಟ್ಟಣದ ಬುಡ್ಗ ಜಂಗಮ ಕಾಲೋನಿ ನಿವಾಸಿ ಓಂಕಾರ ಗೌಡ ಪುತ್ರಿ ಅನ್ಯ ಕೋಮಿನ ಯುವಕನನ್ನು ಪ್ರೀತಿ ಮಾಡುತ್ತಿದ್ದಳಂತೆ. ಈ ವಿಚಾರ ತಿಳಿದ ಪೋಷಕರು ಯುವಕನಿಂದ ದೂರ ಇರುವಂತೆ ಬುದ್ಧಿ ಮಾತು ಹೇಳಿದ್ದರಂತೆ. ಆದರೆ ಮಗಳು ಮತ್ತೆ ಯುವಕನೊಂದಿಗೆ ಸುತ್ತಾಟ ನಡೆಸಿದ್ದಾಳೆ ಎಂದು ಶಂಕಿಸಿದ ತಂದೆ, ಮಗಳನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ.

ಸಿನಿಮೀಯ ರೀತಿಯಲ್ಲಿ ಪುತ್ರಿಯನ್ನು ಕೊಲೆಗೈದ ತಂದೆ..
ಆರೋಪಿ ಓಂಕಾರ ಗೌಡ ಪುತ್ರಿಯನ್ನು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಅಕ್ಟೋಬರ್ 31ರ ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೊಟೇಲ್‌ಗೆ ಕರೆದೊಯ್ದು ತಿಂಡಿ ಕೂಡ ಕೊಡಿಸಿದ್ದರಂತೆ. ತದನಂತರ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿ, ಒಂದು ಜೊತೆ ಚಿನ್ನದ ಓಲೆ ಉಂಗುರವನ್ನು ಕೊಡಿಸಿದ್ದರಂತೆ. ಆ ವೇಳೆಗೆ ರಾತ್ರಿಯಾಗಿದ್ದು, ಊರಿಗೆ ಹಿಂದಿರುಗುವ ಮಾರ್ಗ ಮಧ್ಯೆ ಸಿದ್ದಮ್ಮನಹಳ್ಳಿ ಬಳಿ ಬರೋ ಹೆಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳನ್ನು ಕರೆತಂದಿದ್ದಾರೆ. ಸ್ವಲ್ಪ ಹೊತ್ತು ಇಲ್ಲೇ ಇರು ಕೆಲಸವಿದೆ ಎಂದು ಹೇಳಿ ಆರೋಪಿ ತಂದೆ ಸ್ಥಳದಿಂದ ಕಣ್ಮರೆಯಾಗಿದ್ದರು ಎನ್ನಲಾಗಿದೆ.
ತಂದೆ ಮಾತನ್ನು ನಂಬಿ ಕಾಲುವೆ ಪಕ್ಕ ನಿಂತಿದ್ದ ಮಗಳನ್ನು ತಂದೆ, ಹಿಂಬದಿಯಿಂದ ಕಾಲುವೆಗೆ ನೂಕಿ ಯಾರಿಗೂ ಅನುಮಾನ ಬಾರದಂತೆ ಅಲ್ಲಿಂದ ತೆರಳಿದ್ದಾರೆ. ಇನ್ನು, ಕೃತ್ಯ ಎಸಗಿದ ಬಳಿಕ ಮನೆಗೆ ತೆರಳದ ಆರೋಪಿ, ತನ್ನ ಬೈಕ್‌ಅನ್ನು ಗೆಳೆಯರೊಬ್ಬರ ಮನೆಯಲ್ಲಿ ಬಿಟ್ಟು, ತಿರುಪತಿಗೆ ರೈಲು ಹತ್ತಿದ್ದಾರೆ. ತಿಮ್ಮಪ್ಪನ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಆರೋಪಿ ತಂದೆ ಓಂಕಾರ ಗೌಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ವೇಳೆ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಘಟನಾ ಸ್ಥಳಕ್ಕೆ ತೋರಣಗಲ್ ಡಿವೈಎಸ್‌ಪಿ ಎಸ್ಎಸ್ ಕಾಶಿಗೌಡ ಅವರು ಭೇಟಿ ನೀಡಿ ಬಾಲಕಿ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post