ಮೈಸೂರು: ಬರ್ತ್ಡೇ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನ ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅಮಾನವೀಯ ಕೃತ್ಯ ಮೈಸೂರಲ್ಲಿ ನಡೆದಿದೆ.
ಮೈಸೂರಿನ ವರುಣದ ಮೆಲ್ಲಹಳ್ಳಿಯ ನಿವಾಸಿಯಾದ ಮನೋಜ್ (24) ಕೊಲೆಯಾದ ಯುವಕ. ಗ್ರಾಮದಲ್ಲಿ ಮನೋಜ್ ಹಾಗೂ ಆತನ ಸ್ನೇಹಿತರ ನಡುವೆ ಹಾಗಾಗ ಗಲಾಟೆ ನಡೆಯುತ್ತಲೇ ಇತ್ತಂತೆ. ಹುಟ್ಟುಹಬ್ಬದ ಆಚರಣೆ ವಿಚಾರವಾಗಿ ಮನೋಜ್ ಮತ್ತು ಸ್ನೇಹಿತರ ನಡುವೆ ವಾಗ್ವಾದ ಶುರುವಾಗಿತ್ತು.
ಇದೇ ವಿಷಯವಾಗಿ ಆತನ ಗೆಳೆಯರು ದ್ವೇಷ ಕಾರುತ್ತಿದ್ದರು. ರಘು, ಸಚಿನ್, ಕಿರಣ್ ಹಾಗೂ ಶಂಕರ್ ಎನ್ನುವರು ಮನೋಜ್ ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post