ಬೆಂಗಳೂರಿನ ಅತಿ ಎತ್ತರದ ಪ್ರತಿಮೆ ಅಂತಾನೇ ಖ್ಯಾತಿ ಪಡೆದಿರೋ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನ ಸಂಕೇತ, ಪ್ರಗತಿಯ ಪ್ರತಿಮೆ ಎಂದು ಸರ್ಕಾರ ನಾಮಕರಣ ಮಾಡಿದೆ. ಈ ಪ್ರತಿಮೆಯು ಕೆಲವು ವಿಶೇಷತೆಗಳನ್ನ ಹೊಂದಿದೆ.
ಗುಜರಾತಿನಲ್ಲಿನ ಸ್ಟ್ಯಾಚು ಆಫ್ ಯೂನಿಟಿ ನಿರ್ಮಾಣ ಮಾಡಿದ ಕಲಾವಿದ ರಾಮ್ ಸುತಾರ್ ಕೆಂಪೇಗೌಡ ಪ್ರತಿಮೆಯನ್ನ ವಿನ್ಯಾಸಗೊಳಿಸಿದ್ದಾರೆ. ಪ್ರತಿಮೆಗೆ ಒಟ್ಟು 84 ಕೋಟಿ ರೂ.ಗಳನ್ನ ವೆಚ್ಚ ಮಾಡಲಾಗಿದೆ. 120 ಟನ್ ಉಕ್ಕು, 98 ಟನ್ ಕಂಚುನ್ನ ಉಪಯೋಗಿಸಲಾಗಿದೆ. ಪ್ರತಿಮೆ ಒಟ್ಟು 218 ಟನ್ ತೂಕ ಇದೆ.
ಕೆಂಪೇಗೌಡರ ಕೈಯಲ್ಲಿರುವ ಖಡ್ಗ 4 ಸಾವಿರ ಕೆ.ಜಿ. ತೂಕ ಇದೆ. ಈ ಪ್ರತಿಮೆ ಬೆಂಗಳೂರಿನಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಸತ್ತಲೂ ಸುಮಾರು 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಯೋಜಿಸಿದೆ.
ಪ್ರತಿಮೆಯೂ ನಾಯಕತ್ವ, ಧೀರ ಮತ್ತು ಆಡಳಿತಗಾರನಿಗೆ ಇರಬೇಕಾದ ಮೌಲ್ಯ, ವ್ಯಕ್ತಿತ್ವವನ್ನ ಬಿಂಬಿಸುತ್ತದೆ. ವಿಶ್ವದಲ್ಲಿ ನಗರವನ್ನು ನಿರ್ಮಾಣ ಮಾಡಿದವರ ಪ್ರತಿಮೆಗಳಲ್ಲಿಯೇ ಕೆಂಪೇಗೌಡ ಪ್ರತಿಮೆ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆ ಪಡೆದಿದೆ.
ಕೆಂಪೇಗೌಡರು ಬೆಂಗಳೂರಿನ ನಿರ್ಮಾಣಕ್ಕೆ ಬದುಕನ್ನೇ ಅರ್ಪಿಸಿದ ಮಹಾನ್ ಚೇತನ. ಅವರ ದೂರದೃಷ್ಟಿ, ಆಶಯಗಳಂತೆಯೇ @narendramodi, @BSBommai ದೇಶ-ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ.
ಕೆಂಪೇಗೌಡರ ಸಾರ್ಥಕ ಬದುಕಿನ ಸಾಧನೆಯನ್ನು ಮುಂದಿನ ಜನಾಂಗಕ್ಕೆ ಸಾಕ್ಷೀಕರಿಸಲು 108 ಅಡಿ ಎತ್ತರದ #ಪ್ರಗತಿಯಪ್ರತಿಮೆ ಸಿದ್ದಗೊಂಡಿದೆ. pic.twitter.com/Twl28PzsKs
— BJP Karnataka (@BJP4Karnataka) November 9, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post