ಬೆಂಗಳೂರು: ಶೋಕಿ ಜೀವನಕ್ಕಾಗಿ ಸರಗಳ್ಳತಕ್ಕೆ ಇಳಿದಿದ್ದ ಕೊಪ್ಪಳದ ಯುವಕನನ್ನ ನಗರದ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಮೂಲದ ಸುರೇಶ್ ಬಂಧಿತ ಆರೋಪಿ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈತ, ಮೋಜಿನ ಜೀವನಕ್ಕಾಗಿ ಚೈನ್ಸ್ನ್ಯಾಚ್ ಮಾಡುತ್ತಿದ್ದ. ಆರೋಪಿಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬ ಸಾಥ್ ನೀಡ್ತಿದ್ದ. ಕೃತ್ಯ ಎಸಗಿದ ಬಳಿಕ ಯಾರಿಗೂ ತಿಳಿಯಬಾರದೆಂದು ಕೊಪ್ಪಳಕ್ಕೆ ಹೊಗಿ ತಲೆಮರೆಸಿಕೊಳ್ಳುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಸರಗಳ್ಳತನ ಜೊತೆಗೆ ಮನೆಗಳ್ಳತ
ಪೊಲೀಸರು ಸಿಸಿಟಿವಿ ವೀಕ್ಷಿಸಿದಾಗ ಕಳ್ಳರ ಅಸಲಿ ಕಹಾನಿ ಬಯಲಿಗೆ ಬಂದಿದೆ. ಇದೇ ಮಾದರಿಯಲ್ಲಿ ಹಲವು ಕೃತ್ಯ ಎಸಗಿರೊದು ಬಯಲಿಗೆ ಬಂದಿದೆ. ಸರಗಳ್ಳತನ ಜೊತೆಗೆ ಮನೆಗಳ್ಳತನವನ್ನೂ ಮಾಡಿದ್ದಾನೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಿಬ್ಬರನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post