ಶಿವಮೊಗ್ಗ: ಕಾಡಿಗೆ ಸೌದೆ ತರಲು ಹೋದಾಗ ಎಚ್ಚರತಪ್ಪಿ ಬಿದ್ದ ವ್ಯಕ್ತಿಯನ್ನ ತಮ್ಮ ಮನೆ ನಾಯಿಯೇ ಪತ್ತೆ ಹಚ್ಚಿದ ಘಟನೆ ಜಿಲ್ಲೆಯ ಸೂಡೂರು ಗ್ರಾಮದಲ್ಲಿ ನಡೆದಿದೆ.
50 ವರ್ಷದ ಶೇಖರಪ್ಪ ಸೂಡೂರು ಗ್ರಾಮದ ನಿವಾಸಿ. ಜೀವನಕ್ಕಾಗಿ ಆಯನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ. ನಿನ್ನೆ ಬೆಳಗ್ಗೆ 6 ಗಂಟೆಗೆ ಊರಿನ ಸಮೀಪದ ಕಾಡಿಗೆ ಸೌದೆ ತರಲು ಹೋಗಿ, ಅಲ್ಲಿಯೇ ಎಚ್ಚರ ತಪ್ಪಿ ಬಿದ್ದಿದ್ದ. ಎಂದಿನಂತೆ ಶೇಖರಪ್ಪ ಕಾಡಿಗೆ ಹೋದಾಗ 10 ಗಂಟೆಯೊಳಗೆ ಮನೆಗೆ ವಾಪಸ್ ಆಗುತ್ತಿದ್ದರು. ಆದರೆ 11 ಗಂಟೆಯಾದ್ರೂ ಮನೆಗೆ ವಾಪಸ್ ಆಗದಿದ್ದಾಗ ಮನೆಯವ್ರು ಅನುಮಾನಗೊಂಡು ಗ್ರಾಮದ ಕೆಲವ್ರಿಗೆ ವಿಷಯ ತಿಳಿಸಿದ್ದಾರೆ.
ಮಾಲೀಕನನ್ನ ಪತ್ತೆ ಹಚ್ಚಿ ಗ್ರಾಮಸ್ಥರನ್ನ ಕರೆತಂದ ನಾಯಿ
ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಜನರು ಶೇಖರಪ್ಪರನ್ನ ಕಾಡಿಗೆ ತೆರಳಿ, ಹುಡುಕಾಟ ನಡೆಸಿದ್ದಾರೆ. ಇವರ ಜೊತೆ ಶೇಖರಪ್ಪ ಸಾಕಿದ್ದ ನಾಯಿ ಕೂಡ ಕಾಡಿಗೆ ಹೋಗಿದೆ. ಗ್ರಾಮಸ್ಥರು ಎಷ್ಟೂ ಹುಡುಕಿದ್ರೂ ಶೇಖರಪ್ಪ ಕಾಣಿಸಿಲ್ಲ. ಇದರಿಂದ ಗಾಬರಿಯಾಗಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ತನ್ನ ಮಾಲೀಕನನ್ನ ಪತ್ತೆ ಹಚ್ಚಿದ ನಾಯಿ ಅದೇ ಸ್ಥಳಕ್ಕೆ ಗ್ರಾಮಸ್ಥರನ್ನ ಕರೆತಂದಿದೆ. ಶೇಖರಪ್ಪ ಮರದ ಕೆಳಗೆ ಎಚ್ಚರ ತಪ್ಪಿ ಬಿದ್ದಿದ್ದು, ಕಾಣಿಸಿದೆ. ತಕ್ಷಣವೇ ಗ್ರಾಮಸ್ಥರು ಕಾಡಿನಿಂದ ಶೇಖರಪ್ಪನ್ನ ತಂದು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾಯಿಯು ಪ್ರತಿದಿನವೂ ಶೇಖರಪ್ಪರ ಜೊತೆ ಓಡಾಡಿಕೊಂಡೇ ಇರುತ್ತದೆ. ಅವರು ಕಾಡಿಗೆ ಹೋದಾಗಲೂ ನಾಯಿ ಜೊತೆಯಲ್ಲಿರುತ್ತಿತ್ತು. ಹೀಗಾಗಿ ಸಹಜವಾಗಿಯೇ ಶೇಖರಪ್ಪರನ್ನು ನಾಯಿ ಪತ್ತೆ ಹಚ್ಚಿದೆ ಅಂತ ಸೂಡೂರು ಗ್ರಾಮದ ಶಿವಣ್ಣ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post