ನೆರೆಯ ರಾಜ್ಯ ತಮಿಳುನಾಡಿನಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸತತವಾಗಿ ಸುರಿಯುತ್ತಿರೋ ಮಳೆಯ ಎಫೆಕ್ಟ್ ದ್ರಾವಿಡ ನಾಡಿನ ರಾಜಧಾನಿಯನ್ನೇ ಮುಳುಗಿಸಿಬಿಟ್ಟಿದೆ.
ದ್ರಾವಿಡ ನಾಡಿನಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಎಡಬಿಡದೇ ಸುರಿಯುತ್ತಿರೋ ಭಾರೀ ಮಳೆಗೆ ಇಡೀ ರಾಜ್ಯವೇ ತೊಯ್ದು ತೊಪ್ಪೆಯಾಗಿದೆ. ರಣಭೀಕರ ಮಳೆಗೆ ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
ತಮಿಳುನಾಡಿನಲ್ಲಿ ಮುಂದುವರಿದ ರಣಮಳೆ ರಂಪಾಟ
5 ಜಿಲ್ಲೆಗಳಿಗೆ ಪ್ರವಾಹ ಭೀತಿ.. ಹಲವೆಡೆ ರೆಡ್ ಅಲರ್ಟ್!
ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಈ ತಿಂಗಳ ಆರಂಭದಿಂದಲೂ ತೀವ್ರ ಮಳೆಯಾಗುತ್ತಿದೆ. ಚೆನ್ನೈನಲ್ಲೂ ಮಳೆರಾಯ ಅವಾಂತರ ನಿಲ್ಲದಾಗಿದೆ. ನವೆಂಬರ್ 1 ರಂದು ಚೆನ್ನೈ ನಗರದಲ್ಲಿ ಸುಮಾರು 8.4 ಸೆಂ.ಮೀ ಮಳೆಯಾಗಿದೆ. ಕಳೆದ 30 ವರ್ಷಗಳಲ್ಲಿ ಕಂಡ ಕೇಳರಿಯದ ಅತ್ಯಧಿಕ ಮಳೆಯಾಗಿದೆ. ತುಂತುರು ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ, ರಸ್ತೆಗಳ ಜಲಾವೃತವಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಮಹಾ ಮಳೆ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಇವತ್ತೂ ಕೂಡ ತಮಿಳುನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇನ್ನೂ ಮಳೆರಾಯ ಜನರಿಗೆ ಕಾಟ ಕೊಡಲಿದ್ದಾನೆ ಅಂತಾ ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಅದರಲ್ಲೂ ಥೇಣಿ, ದಿಂಡಿಗಲ್, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು, ಹೀಗಾಗಿ ಈ ಐದು ಜಿಲ್ಲೆಗಳಲ್ಲಿ ಪ್ರವಾಹದ ಮುನ್ನೆಚ್ಚರಿಕೆಯನ್ನ ನೀಡಲಾಗಿದೆ.
ಇತ್ತ ಮಧುರೈ, ಕಾಂಚೀಪುರಂ ಮತ್ತು ತಿರುವಳ್ಳೂರು, ಶಿವಗಂಗಾ ಜಿಲ್ಲೆಗಳಲ್ಲಿ ರಣಮಳೆಯ ರಂಪಾಟ ಮುಂದುವರಿದೆ. ಹೀಗಾಗಿ ಈ ಪ್ರದೇಶದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ತಮಿಳುನಾಡಿನ ದಕ್ಷಿಣದಲ್ಲಿರೋ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಮಳೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭೇಟಿ ನೀಡಿದ್ರು. ಮಳೆಯಿಂದಾಗಿರೋ ಹಾನಿಯ ಬಗ್ಗೆ ಸ್ಟಾಲಿನ್ ಪರಿಶೀಲನೆಯನ್ನೂ ನಡೆಸಿದ್ರು. ಉತ್ತರ ತಮಿಳುನಾಡು, ಪುದುಚೇರಿ ಕರಾವಳಿಯಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಹೀಗಾಗಿ ಕರಾವಳಿ ತೀರದ ಜನರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 2 ದಿನಗಳ ಕಾಲ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ, ತಮಿಳುನಾಡಿನಲ್ಲಿ ರಣಮಳೆಯ ಅಬ್ಬರ ಮುಂದುವರಿದಿದ್ದು, ಜಲಪ್ರಳಯವೇ ಸೃಷ್ಟಿಯಾಗಿದೆ. ಸಾಕು ನಿಲ್ಲಿಸು ವರುಣಾ ಅಂತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
Heavy rain in Kayathar Thoothukudi dt#kayathar #thoothukudi @praddy06 @ChennaiRains pic.twitter.com/N01i6Cos53
— Tamilnadu Weather Blog (@BlogTamilnadu) November 12, 2022
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post