ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರನ ಸಾವು ಅಪಘಾತವೋ ಇಲ್ಲಾ ಕೊಲೆಯೋ ಅನ್ನೋದೇ ಬಲುದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಈ ನಿಗೂಢ ಸಾವಿನ ಬಗ್ಗೆ ಮರಣೋತ್ತರ ಪ್ರಾಥಮಿಕ ಪರೀಕ್ಷೆ ವರದಿ ಬಂದಿದೆ. ಆ ವರದಿಯಲ್ಲಿ ಶಾಸಕರು ಹಾಗೂ ಕುಟುಂಬಸ್ಥರು ಆರೋಪಿಸಿದ್ದ ಅಂಶಗಳು ಉಲ್ಲೇಖವಾಗದೆ ವ್ಯತಿರಿಕ್ತ ರಿಪೋರ್ಟ್ ಬಂದಿದೆ.
ಚಂದ್ರಶೇಖರ್ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಶಾಸಕ ರೇಣುಕಾಚಾರ್ಯ ಸಹೋದರ ರಮೇಶ್ರ ಪುತ್ರನ ಸಾವಿನ ಪ್ರಕರಣ. ಸದ್ಯ ಕೇಸ್ಗೆ ಸಂಬಂಧಿಸಿ ಇನ್ನೂ ಕೂಡ ಪೊಲೀಸರು ಕೊಲೆಯೋ, ಅಪಘಾತವೋ ಅನ್ನೋದಕ್ಕೆ ತಾರ್ಕಿಕ ಅಂತ್ಯ ಕಂಡುಕೊಂಡಿಲ್ಲ. ಈ ನಡುವೆ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ಸಾವಿನ ಬಗ್ಗೆ ಉಲ್ಲೇಖಿಸಲಾಗಿದೆ.
ರೇಣುಕಾಚಾರ್ಯ ಕುಟುಂಬ ಆರೋಪಿಸಿದಂತೆ ಹಲ್ಲೆ ಆಗಿಲ್ಲ
ಚಂದ್ರು ದೇಹದ ಮೇಲೆ ಯಾವುದೇ ಆಯುಧಗಳ ಕಲೆಗಳಿಲ್ಲ
ಶಾಸಕ ರೇಣುಕಾಚಾರ್ಯ, ಚಂದ್ರು ತಂದೆ ರಮೇಶ್ ಸೇರಿದಂತೆ ಚಂದ್ರಶೇಖರ್ ಕುಟುಂಬವೇ ಚಂದ್ರುನದ್ದು ಕೊಲೆ ಅಂತ ಆರೋಪಿಸಿದ್ರು. ಆದ್ರೆ ಸದ್ಯ ಚಂದ್ರು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದರ ತದ್ವಿರುದ್ಧ ವರದಿ ಬಂದಿದೆ. ಚಂದ್ರಶೇಖರ್ ದೇಹದ ಮೇಲೆ ಯಾವುದೇ ಹಲ್ಲೆಯ ಕಲೆಗಳಿಲ್ಲ ಅಂತ ರಿಪೋರ್ಟ್ನಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಚಾರ್ಯ ಕುಟುಂಬ ಆರೋಪಿಸಿದಂತೆ ಹಲ್ಲೆ ಆಗಿಲ್ಲ. ಚಂದ್ರು ದೇಹದ ಮೇಲೆ ಯಾವುದೇ ಆಯುಧಗಳ ಕಲೆಗಳಿಲ್ಲ ಅಂತ ವರದಿ ಬಗ್ಗೆ ನ್ಯೂಸ್ ಫಸ್ಟ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಚಂದ್ರು ಸಾವಿಗೆ ಕಾರಣವೇನು?
ಸಿಎಂ ಬೊಮ್ಮಾಯಿ ಸೂಚನೆ ಹಿನ್ನೆಲೆ ಅಪಘಾತವೋ, ಕೊಲೆಯೋ ಅನ್ನೋ 2 ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಚಂದ್ರಶೇಖರ್ ದೇಹದ ಮೇಲೆ ಯಾವುದೇ ಹಲ್ಲೆಯ ಕಲೆಗಳಿಲ್ಲ ಅಂತ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ. ಚಂದ್ರು ಕೈಗೆ ಹಗ್ಗವನ್ನೂ ಕಟ್ಟಿರಲಿಲ್ಲ ಅಂತ ವರದಿಯಲ್ಲಿದೆ. ಇನ್ನು ಚಂದ್ರಶೇಖರ್ ತಲೆಯ ಹಿಂಭಾಗಕ್ಕೂ ಯಾರೂ ಹಲ್ಲೆ ಮಾಡಿರಲಿಲ್ಲ, ದೇಹದ ಮೇಲೆ ಆಯುಧಗಳಿಂದ ಹಲ್ಲೆ ಮಾಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ಗಾಯಗಳು ಆಗಿಲ್ಲ. ಇನ್ನು ಚಂದ್ರಶೇಖರ್ಗೆ ಏನಾದ್ರೂ ಇಂಜೆಕ್ಟ್ ಮಾಡಿದ್ದಾರಾ ಅನ್ನೋ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತಿದೆ.
ಈ ಮೂಲಕ ಪ್ರಾಥಮಿಕ ವರದಿಯಲ್ಲಿ ಹತ್ಯೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. 1 ವಾರದಲ್ಲಿ ಈ ಎಲ್ಲಾ ಮಾಹಿತಿಯನ್ನು ಪೊಲೀಸ್ ಇಲಾಖೆ ಹೊರ ಹಾಕಲಿದೆ. ಒಟ್ಟಾರೆ ರಾಜ್ಯಾದ್ಯಂತ ತೀವ್ರ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿದ ಹೈಪ್ರೊಫೈಲ್ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರನ ಸಾವಿನ ಬಗ್ಗೆ ಇನ್ನೂ ತಾರ್ಕಿಕ ಅಂತ್ಯಕ್ಕ ಬಂದಿಲ್ಲ. ಚಂದ್ರಶೇಖರ್ ದೇಹದ ಮೇಲೆ ಯಾವುದೇ ಹಲ್ಲೆ ಮಾಡಿದ ಗುರುತುಗಳಿಲ್ಲ ಅಂತ ಮರಣೋತ್ತರ ಪರೀಕ್ಷೆಯಲ್ಲಿ ವರದಿ ನೀಡಲಾಗಿದ್ದು ಮತ್ಯಾವ ಬೆಳವಣಿಗೆಗಳಾಗುತ್ತವೋ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post