ಕಲರ್ಸ್ ಕನ್ನಡದ ನಂ.1 ಧಾರಾವಾಹಿಯಾದ ರಾಮಾಚಾರಿ ಇದೀಗ ವೀಕ್ಷಕರಿಗೆ ಫೇವರೈಟ್ ಸೀರಿಯಲ್ ಆಗಿದೆ. ರಾಮಾಚಾರಿ – ಚಾರು ಕಿತ್ತಾಟ ವೀಕ್ಷಕರಿಗೆ ತುಂಬಾನೆ ಇಷ್ಟವಾಗಿದೆ. ಧಾರಾವಾಹಿಯಲ್ಲಿ ಸಖತ್ ಸ್ಕ್ರೀನ್ ಪ್ಲೇ, ಟ್ವಿಸ್ಟ ಌಂಡ್ ಟರ್ನ್ ಮೂಲಕ ವೀಕ್ಷಕರ ಹೃದಯದಲ್ಲಿ ಸ್ಥಾನಗಳಿಸಿಕೊಂಡಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ಬರುವ ಒಂದೊಂದು ಸೀನ್ಸ್ನ್ನು ನಮ್ಮ ಮನೆಯಲ್ಲೇ ನೆಡೆಯುತ್ತದೆಯೋ ಅನ್ನೋ ಹಾಗೆ ವೀಕ್ಷಕರು ಭಾವನಾತ್ಮಕವಾಗಿ ಅಟ್ಯಾಚ್ ಆಗಿದ್ದಾರೆ. ಸದ್ಯ ರಾಮಾಚಾರಿ ಧಾರಾವಾಹಿಯಲ್ಲಿ ನಡೆಯಬಾರದ ಒಂದು ಘಟನೆ ನಡೆದು ಹೋಗಿದೆ. ರಾಮಾಚಾರಿ ಅತ್ತಿಗೆ ಅಪರ್ಣ ತೀರಿಕೊಂಡಿದ್ದಾರೆ.
ಸದ್ಯ ಧಾರಾವಾಹಿಯಲ್ಲಿ ಇವಾಗ ಅಪರ್ಣ ತೀರಿ ಹೋಗಿರುವ ದೃಶ್ಯಾವಳಿಗಳೂ ಬರ್ತಿವೆ. ಅಪರ್ಣ ರಾಮಾಚಾರಿಯ ಪ್ರೀತಿಯ ಅಮ್ಮನ ರೂಪದಲ್ಲಿರುವ ಅತ್ತಿಗೆ. ಅತ್ತಿಗೆ ತೀರಿಕೊಂಡರೋ ಅನ್ನೋ ವಿಷಯ ಕೇಳಿ ರಾಮಾಚಾರಿ ಶಾಕ್ನಲ್ಲಿ ಇದ್ದಾನೆ. ಇದು ಒಂದು ಧಾರಾವಾಹಿಯ ಕಥೆಗೆ ಬೇಕಾಗಿರೋ ದೃಶ್ಯಾವಳಿ. ಆದರೆ ಈ ರೀತಿಯ ಎಮೋಷನಲ್ ಸೀನ್ಸ್ಗಳನ್ನ ಹೇಗೆ ಚಿತ್ರೀಕರಣ ಮಾಡಲಾಗುತ್ತೆ ಅನ್ನೋದು ಎಲ್ಲರಿಗೂ ಇರೋ ಕೂತುಹಲ.
ರಾಮಾಚಾರಿಯ ಸೆಟ್ನಲ್ಲಿ ಈ ದೃಶ್ಯಗಳ ಚಿತ್ರೀಕರಣ ಹೇಗಾಯ್ತು ಅನ್ನೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಕಲಾವಿದರು ಸಂದರ್ಭಕ್ಕೆ ತಕ್ಕ ಹಾಗೆ, ಪಾತ್ರಕ್ಕೆ ಹೇಗೆ ಪರಕಾಯ ಪ್ರವೇಶ ಮಾಡಿ ನಟಿಸುತ್ತಾರೆ. ಅನ್ನೋದು ಈ ಚಿತ್ರೀಕರಣ ಮಾಡುವುದರಲ್ಲೇ ಗೊತ್ತಾಗುತ್ತೆ. ರಾಮಾಚಾರಿಯ ಪ್ರೀತಿಯ ಅತ್ತಿಗೆ ಇನ್ನಿಲ್ಲ. ಆದ್ರೆ ಇದು ಕಥೆಗಷ್ಟೆಯಾಗಿದ್ದು, ರಾಮಾಚಾರಿ ಕಥೆಯಲ್ಲಿ ಸದ್ಯದಲ್ಲೇ ಮತ್ತೊಂದು ಟ್ವಿಸ್ಟ್ ಗಳು ಬರಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post