ಗಾಲ್ವಾನ್ ಸಂಘರ್ಷದ ನಂತರ ಮೊದಲ ಬಾರಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿ ಆದ್ರು. ಕಳೆದ ಸೆಪ್ಟೆಂಬರ್ ಸಮರ್ಖಂಡ್ನಲ್ಲಿ ಭೇಟಿ ಆದ್ರೂ ಚರ್ಚೆ ಆಗಿರಲಿಲ್ಲ. ಇದೀಗ ಉಭಯ ನಾಯಕರ ಪರಸ್ಪರ ಹಸ್ತಲಾಘವದಿಂದ ಎಲ್ಎಸಿಯಲ್ಲಿನ ಉದ್ವಿಗ್ನ ಶಮನಕ್ಕೆ ಸಹಕಾರಿ ಎಂಬ ಮಾತು ಜಾಗತಿಕವಾಗಿ ಕೇಳಿ ಬರ್ತಿದೆ.
ಲಡಾಖ್ ಲಡಾಯಿ, ಗಾಲ್ವಾನ್ ಕಣಿವೆ ಕದನದ ಬಳಿಕ ಚೀನಾ-ಭಾರತ ಮಧ್ಯೆ ವೈಷಮ್ಯ ಹೊಗೆಯಾಡ್ತಿದೆ.. ಗಾಲ್ವಾನ್ ಕಣಿವೆಯಲ್ಲಿ ರಕ್ತಸಿಕ್ತ ಘರ್ಷಣೆ ನಡೆದು, ಕಳೆದ ಎರಡು ವರ್ಷಗಳಲ್ಲಿ ಚೀನಾ – ಭಾರತ ನಡುವೆ ಉನ್ನತ ಮಟ್ಟದಲ್ಲಿ ಯಾವುದೇ ಸಭೆ ನಡೆದಿಲ್ಲ.. ಆದ್ರೆ, ಸೆಪ್ಟೆಂಬರ್‌ನಲ್ಲಿ ಉದ್ವಿಗ್ನತೆ ಶಮನದ ಬಳಿಕ ಮೊದಲ ಬಾರಿಗೆ ಮಹತ್ವದ ಬೆಳವಣಿಗೆಗೆ ನಡೆದಿದೆ.
ಗಾಲ್ವಾನ್ ಸಂಘರ್ಷದ ನಂತರ ಮೊದಲ ಬಾರಿ ಮುಖಾಮುಖಿ!
ಶೃಂಗದ ಹೈಲೆಟ್ಸ್ ಆದ ಪ್ರಧಾನಿ ಮೋದಿ- ಅಧ್ಯಕ್ಷ ಕ್ಸಿ ಹಸ್ತಲಾಘವ
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಐತಿಹಾಸಿಕ ಘಟನೆಗೆ ಸಾಕ್ಷಿ ಆಗಿದೆ. ವಿಶ್ವ ನಾಯಕರ ವಿಶೇಷ ಔತಣಕೂಟದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿ ಆದ್ರು. ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಹಸ್ತಲಾಘವದ ವಿಡಿಯೋ ಹೊರಬಿದ್ದಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.
Watch: Indian PM Modi, Chinese President Xi shake hands at G20 dinner in Bali, Indonesia pic.twitter.com/qTZ1YOBNg3
— Sidhant Sibal (@sidhant) November 15, 2022
- ಮೋದಿ-ಕ್ಸಿ ಮುಖಾಮುಖಿ!
ವಿಶ್ವ ನಾಯಕರಿಗೆ ನಿನ್ನೆ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ಔತಣಕೂಟ ಆಯೋಜಿಸಿದ್ದರು. ಅಲ್ಲಿಗೆ ಬಂದ ಕ್ಸಿ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್, ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಜೊತೆ ಮಾತನಾಡುತ್ತಿದ್ರು. ಈ ವೇಳೆ, ಮೋದಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜೊತೆ ಕುಳಿತು ಸಂವಾದ ನಡೆಸ್ತಿದ್ರು. ಆಗ ತಮ್ಮ ಆಸನದಿಂದ ಎದ್ದ ಮೋದಿ, ನಗುತ್ತಿದ್ದ ಕ್ಸಿ ಜೊತೆ ಹಸ್ತಲಾಘವ ಮಾಡಿದ್ರು. ಮೋದಿ-ಕ್ಸಿ ಜೊತೆ ಕೆಲವು ನಿಮಿಷಗಳ ಕಾಲ ಮಾತನಾಡಿದ್ರು. ದುಭಾಷಿಗಳು ಭಾಷಾಂತರ ಮಾಡಿದ್ರು. ಈ ವೇಳೆ, ವಿದೇಶಾಂಗ ಸಚಿವ ಜೈಶಂಕರ್ ಕೂಡ ಸೇರಿಕೊಂಡರು.
ಕಳೆದ ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನ್‌ನ ಸಮರ್ಖಂಡ್ನ ಶಾಂಘೈ ಸಹಕಾರ ಶೃಂಗಸಭೆ ನಡೆದಿತ್ತು. ಸಭೆಯಲ್ಲಿ ಉಭಯ ನಾಯಕರು ಮುಖಾಮುಖಿ ಆಗಿದ್ದರು. ಆದ್ರೆ, ಇಬ್ಬರ ಮಧ್ಯೆ ಯಾವುದೇ ಶುಭಾಶಯ ವಿನಿಮಯ ಆಗಿರಲಿಲ್ಲ. 2020ರ ಏಪ್ರಿಲ್‌ನಲ್ಲಿ ಲಡಾಖ್‌ನ ಬಿಕ್ಕಟ್ಟಿನ ನಂತರ ಸದ್ಯ ಉಭಯ ನಾಯಕರ ನಡುವೆ ಮೊದಲ ಭೇಟಿ ಇದಾಗಿದೆ. ಈ ಭೇಟಿ ಮೂಲಕ ಎರಡು ದೇಶಗಳ ಉದ್ವಿಗ್ನ ಶಮನಕ್ಕೆ ಸಹಾಯವಾಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ.
ಇನ್ನು, ಜಿ-20 ಶೃಂಗಸಭೆಯಲ್ಲಿ ಉಭಯ ನಾಯಕರೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂಬ ಊಹಾಪೋಹಗಳಿವೆ. ಆದ್ರೆ, ಉಭಯ ದೇಶಗಳ ಅಜೆಂಡಾಗಳಲ್ಲಿ ಭೇಟಿಯ ವೇಳಾಪಟ್ಟಿಯಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಸದ್ಯ, ಇಬ್ಬರೂ ನಾಯಕರ ಭೇಟಿಯಿಂದ ದ್ವೀಪಕ್ಷಿಯ ಮಾತುಕತೆ ನಡೆಯಲಿದೆಯಾ ಪ್ರಶ್ನೆಗಳಿವೆ. ಇದೇ ಔತಣಕೂಟದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ರನ್ನ ಪ್ರಧಾನಿ ಮೋದಿ ಭೇಟಿಯಾದ್ರು.
ಇಂದು ಬಾಲಿ ಶೃಂಗಸಭೆ ಕೊನೆ ದಿನವಾಗಿದ್ದು, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ಜೊತೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಸಂಜೆ ಸಮಾರೋಪ ಸಮಾರಂಭ ಇರಲಿದ್ದು, ಭಾರತಕ್ಕೆ ಮುಂದಿನ ಜಿ-20 ರಾಷ್ಟ್ರಗಳ ಅಧ್ಯಕ್ಷತೆಯ ಸ್ಥಾನ ಸಿಗಲಿದೆ. ಇಂಡೋನೇಷ್ಯಾ ಅಧ್ಯಕ್ಷರಿಂದ ಸಾಂಕೇತಿಕವಾಗಿ ಮೋದಿಗೆ ಹಸ್ತಾಂತರಿಸಲಿದ್ದಾರೆ. ಮುಂದಿನ ವರ್ಷ ಡಿಸೆಂಬರ್ ವೇಳೆ, ಭಾರತಕ್ಕೆ ವಿಶ್ವ ದಿಗ್ಗಜ ನಾಯಕರ ಆಗಮನವಾಗಲಿದೆ.
ಅಂದಹಾಗೇ, ಜಿ20 ಸಮೂಹದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳಿದ್ದು, ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟು ಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಈ ದೇಶಗಳಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟು ಈ ದೇಶಗಳಲ್ಲೇ ನಡೆಯುತ್ತದೆ. ಹೀಗಾಗಿ ಜಿ20 ಶೃಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವುದು 17ನೇ ಜಿ20 ಶೃಂಗವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post