ಐಪಿಎಲ್ 2023ರ ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಮಗೆ ಅಗತ್ಯವಿಲ್ಲದ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟಿದ್ದಾರೆ. ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಮ್ಮ ತಂಡದ ನಾಯಕರನ್ನೇ ತಂಡದಿಂದ ಕೈ ಬಿಟ್ಟಿದ್ದು, ಆರ್ಸಿಬಿ ತಂಡ ತನ್ನ ತಂಡದಲ್ಲಿದ್ದ ಇಬ್ಬರು ಕನ್ನಡದ ಆಟಗಾರರನ್ನು ರಿಲೀಸ್ ಮಾಡಿದೆ.
Everything you need to know after today's announcements, right here. 👀#PlayBold #IPLRetention #IPL2023 pic.twitter.com/r7t7Rgc9P2
— Royal Challengers Bangalore (@RCBTweets) November 15, 2022
ಅಳೆದುತೂಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರನ್ನ ಬಿಡುಗಡೆ ಮಾಡಿದೆ. ಅಲ್ಲದೇ, ಇದ್ದ ಇಬ್ಬರು ಕನ್ನಡಿಗರನ್ನೂ ತಂಡದಿಂದ ಹೊರಹಾಕಿದೆ. ಆ ಮೂಲಕ ಅನೀಶ್ವರ್ ಗೌತಮ್ ಮತ್ತು ಲವ್ನೀತ್ ಸಿಸೋಡಿಯಾಗೂ ಶಾಕ್ ನೀಡಿದೆ.
ಟ್ರೇಡಿಂಗ್ ವಿಧಾನದಡಿ ಜೇಸನ್ ಬೆಹ್ರೆಂಡಾರ್ಫ್ರನ್ನ ಮುಂಬೈ ಇಂಡಿಯನ್ಸ್ಗೆ ಬಿಟ್ಟುಕೊಟ್ಟಿದ್ದ ಆರ್ಸಿಬಿ, ಒಟ್ಟು 5 ಆಟಗಾರರನ್ನ ರಿಲೀಸ್ ಮಾಡಿದೆ. ಆ ಮೂಲಕ ಕಪ್ ಗೆಲ್ಲೋಕೆ ದಿಟ್ಟ ಹೆಜ್ಜೆ ಇಟ್ಟಿದೆ. 5 ಆಟಗಾರರನ್ನ ಕೈಬಿಟ್ಟ ನಂತರ ಆರ್ಸಿಬಿ ಪರ್ಸ್ನಲ್ಲಿ 8 ಕೋಟಿ 75 ಲಕ್ಷ ಉಳಿದಿದೆ.
ಆರ್ಸಿಬಿ ರಿಲೀಸ್ ಮಾಡಿದ ಆಟಗಾರರು: ಶೆರ್ಫಾನ್ ರುದರ್ಫೋರ್ಡ್, ಬೆಹ್ರನ್‌ಡಾರ್ಫ್, ಅನೀಶ್ವರ್ ಗೌತಮ್, ಲವ್ನೀತ್ ಸಿಸೋಡಿಯಾ, ಚಾಮಾ ಮಿಲಿಂದ್..
Believe in the core!
12th Man Army, here are our 𝗿𝗲𝘁𝗮𝗶𝗻𝗲𝗱 𝗥𝗼𝘆𝗮𝗹 𝗖𝗵𝗮𝗹𝗹𝗲𝗻𝗴𝗲𝗿𝘀 who will be a part of RCB’s #Classof2023!#PlayBold #WeAreChallengers pic.twitter.com/aQCnh2K66E
— Royal Challengers Bangalore (@RCBTweets) November 15, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post