ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಮ್ಮ ತಂಡದಿಂದ ಕಿರನ್ ಪೊಲಾರ್ಡ್ರನ್ನ ರಿಲೀಸ್ ಮಾಡಿದೆ. ಇದರಿಂದ ಬೇಸರಗೊಂಡು ಪೊಲಾರ್ಡ್ ಐಪಿಎಲ್ಗೆ ಗುಡ್ಬೈ ಹೇಳಿದ್ದಾರೆ. ಆದ್ರೆ, ತಂಡದ ಪ್ರಮುಖ ಆಟಗಾರನನ್ನ ಮುಂಬೈ ಕೈ ಬಿಡೋದಕ್ಕೆ ಕಾರಣ ಏನು ಅಂತೀರಾ.?
IPL ಸೀಸನ್ 15ಕ್ಕೂ ಮುನ್ನ ಮಿಸ್ಟರ್ 360 ಎಬಿ ಡಿವಿಲಿಯರ್ಸ್, ಮಿಸ್ಟರ್ IPL ಸುರೇಶ್ ರೈನಾ IPLಗೆ ಗುಡ್ಬೈ ಹೇಳಿ ಶಾಕ್ ನೀಡಿದ್ರು. ಈಗಾಗ್ಲೇ ಫ್ಯಾನ್ಸ್, ಬಿಲಿಯನ್ ಡಾಲರ್ ಲೀಗ್ನಲ್ಲಿ ಇವರಿಬ್ಬರ ಆಟವನ್ನ ಮಿಸ್ ಮಾಡಿಕೊಳ್ತಿದ್ದಾರೆ. ಆದ್ರೀಗ IPL ಸೀಸನ್ 16ಕ್ಕೂ ಮುನ್ನ ಮತ್ತೊಂದು ಶಾಕ್ ಎದುರಾಗಿದೆ. ವಿಂಡೀಸ್ ಆಲ್ರೌಂಡರ್, ಕಿರನ್ ಪೋಲಾರ್ಡ್ IPLಗೆ ನಿವೃತ್ತಿ ಘೋಷಿಸಿದ್ದಾರೆ.
ರಿಟೇನ್ ಮಾಡದೇ, ರಿಲೀಸ್ ಮಾಡಿದ್ದೇ ನಿವೃತ್ತಿಗೆ ಕಾರಣ..
ಇದೇ ಡಿಸೆಂಬರ್ನಲ್ಲಿ IPL ಮಿನಿ ಆಕ್ಷನ್ ನಡೆಯಲಿದೆ. ಹೀಗಾಗಿ ಎಲ್ಲಾ 10 ತಂಡಗಳು ಕೆಲ ಆಟಗಾರರನ್ನ ತಂಡದಿಂದ ರಿಲೀಸ್ ಮಾಡ್ತಿವೆ. ಅದರಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಕಿರನ್ ಪೋಲಾರ್ಡ್ರನ್ನ ರಿಲೀಸ್ ಮಾಡಿದೆ. ಇದರಿಂದ ಬೇಸರಗೊಂಡು ಪೊಲಾರ್ಡ್ IPLಗೆ ಗುಡ್ಬೈ ಹೇಳೋ ನಿರ್ಧಾರ ಮಾಡಿದ್ದಾರೆ.
MI 5 ಬಾರಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರಹಿಸಿದ್ದ ಪೊಲಾರ್ಡ್..
2010ರಲ್ಲಿ IPLಗೆ ಎಂಟ್ರಿ ನೀಡಿದ ಪೋಲಾರ್ಡ್, ಅಲ್ಲಿಂದ ಇಲ್ಲಿವರೆಗೂ ಮುಂಬೈ ಬಿಟ್ಟು ಬೇರೆ ತಂಡಗಳ ಪರ ಆಡೇ ಇಲ್ಲ. ಇನ್ನು ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವಲ್ಲಿ ಪೊಲಾರ್ಡ್ ಪ್ರಮುಖ ಪಾತ್ರವಹಿಸಿದ್ರು. ಅದ್ಭುತ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಅಬ್ಬರಿಸಿದ್ರು. ಹಲವು ಪಂದ್ಯಗಳಲ್ಲಿ ಒಂಟಿಸಲಗದಂತೆ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ರು.
ಫ್ಲಾಪ್ ಶೋ, ವಯಸ್ಸಿನ ಕಾರಣದಿಂದ ಪೊಲಾರ್ಡ್ ರಿಲೀಸ್..
ಯೆಸ್, ಕಳೆದ ಕೆಲ ಸೀಸನ್ಗಳಿಂದ ಪೊಲಾರ್ಡ್ ತಮ್ಮ ರೇಂಜ್ಗೆ ತಕ್ಕಂತೆ ಆಡ್ತಿಲ್ಲ. ಐಪಿಎಲ್ ಸೀಸನ್ 15ರಲ್ಲೂ ಪೊಲಾರ್ಡ್ ಪ್ಲಾಫ್ ಶೋ ನೀಡಿದ್ರು. ಇದಲ್ಲದೇ ಪೊಲಾರ್ಡ್ಗೀಗ 35 ವರ್ಷ. ಇದೆಲ್ಲಾ ಕಾರಣದಿಂದ ಮುಂಬೈ ಫ್ರಾಂಚೈಸಿ, ಪೊಲಾರ್ಡ್ರನ್ನ ರಿಲೀಸ್ ಮಾಡಿದೆ.
ನಾನು ಮುಂಬೈ ಬಿಟ್ಟು ಬೇರೆ ತಂಡಗಳ ಪರ ಆಡಲ್ಲ..
ಯೆಸ್, ಮುಂಬೈ ಇಂಡಿಯನ್ಸ್ ತಮ್ಮನ್ನ ತಂಡದಿಂದ ರಿಲೀಸ್ ಮಾಡಿದ್ರೂ, ಪೊಲಾರ್ಡ್ಗೆ ಮಿನಿ ಆಕ್ಷನ್ಗೆ ಹೋಗಬಹುದಿತ್ತು. ಆಕ್ಷನ್ನಲ್ಲಿ ಬೇರೆ ತಂಡಗಳು ಪೊಲಾರ್ಡ್ರನ್ನ ಖರೀದಿಸೋ ಅವಕಾಶವಿತ್ತು. ಆದ್ರೆ, ಪೊಲಾರ್ಡ್ ನಾನು ಐಪಿಎಲ್ ಆಡಿದ್ರೆ, ಅದು ಮುಂಬೈ ಇಂಡಿಯನ್ಸ್ ಪರ ಮಾತ್ರ ಅಂತ ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಇನ್ನು ಕೆಲ ವರ್ಷ ಐಪಿಎಲ್ ಆಡೋ ಮನಸಿದ್ದರೂ, ಮುಂಬೈ ಇಂಡಿಯನ್ಸ್ ಪರ ಆಡೋ ಅವಕಾಶ ಇಲ್ಲದ್ದಕ್ಕೆ ನಿವೃತ್ತಿ ನಿರ್ಧಾರ ಕೈಗೊಂಡಿರೋದಾಗಿ ಪೊಲಾರ್ಡ್, ಟ್ವಿಟರ್ ಮೂಲಕ ತಿಳಿಸಿದ್ದಾರೆ.
💙 #OneFamily @mipaltan pic.twitter.com/4mDVKT3eu6
— Kieron Pollard (@KieronPollard55) November 15, 2022
ಪೊಲಾರ್ಡ್ ನಿರ್ಧಾರದಿಂದ ಮುಂಬೈ ಫ್ರಾಂಚೈಸಿಗೂ ಬೇಸರ..
ವಿಂಡೀಸ್ ದೈತ್ಯನಿಗೆ ಮುಂಬೈ ಬ್ಯಾಟಿಂಗ್ ಕೋಚ್ ಹುದ್ದೆ..
ಯೆಸ್, ಪೊಲಾರ್ಡ್ ಐಪಿಎಲ್ಗೆ ಗುಡ್ಬೈ ಹೇಳಿದ್ದರಿಂದ ಮುಂಬೈ ಫ್ರಾಂಚೈಸಿಗೂ ಬೇಸರವಾಗಿದೆ. ಇದೇ ಕಾರಣಕ್ಕಾಗಿ, ಆಟಗಾರನಾಗಿಲ್ಲದಿದ್ದರೂ ಕೋಚ್ ರೂಪದಲ್ಲಿ ಪೊಲಾರ್ಡ್ರನ್ನ ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ.ಇದೇ ಕಾರಣಕ್ಕೆ, ಪೊಲಾರ್ಡ್ಗೆ ತಂಡದ ನೂತನ ಬ್ಯಾಟಿಂಗ್ ಕೋಚ್ ಹುದ್ದೆ ನೀಡಿದೆ. ಮುಂದಿನ ಐಪಿಎಲ್ ಸೀಸನ್ನಿಂದ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಪೊಲಾರ್ಡ್ ನಿವೃತ್ತಯಿಂದ ಐಪಿಎಲ್ಗೆ ಬಿಗ್ ಲಾಸ್..
ಯೆಸ್, ಪೊಲಾರ್ಡ್ ಪಕ್ಕಾ ಟಿ20 ಪ್ಲೇಯರ್. ಅದರಲ್ಲೂ ಬ್ಯಾಟಿಂಗ್ನಲ್ಲಿ ಪೊಲಾರ್ಡ್ ನಿಜಕ್ಕೂ ರಾಕ್ಷಸ. ಪೊಲಾರ್ಡ್ ಕ್ರೀಸ್ನಲ್ಲಿದ್ರೆ, ಮುಂಬೈ ಫ್ಯಾನ್ಸ್ಗೆ ಸೋಲಿನ ಭಯ ಅನ್ನೋದೆ ಇರ್ತಿರಲಿಲ್ಲ. ಇನ್ನು ಚಾಣಾಕ್ಷ ಬೌಲಿಂಗ್ ಮೂಲಕವೂ ಪೊಲಾರ್ಡ್ ಮಿಂಚುತ್ತಿದ್ರು. ಆದ್ರೆ, ಇನ್ಮುಂದೆ ಐಪಿಎಲ್ನಲ್ಲಿ ಪೊಲಾರ್ಡ್ ಆಟ ನಡೆಯಲ್ಲ. ಇದರಿಂದ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಸೇರಿದಂತೆ, ಐಪಿಎಲ್ ಫ್ಯಾನ್ಸ್ ಪೊಲಾರ್ಡ್ ಆಟವನ್ನ ಮಿಸ್ ಮಾಡಿಕೊಳ್ಳಲಿಂತೂ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post