ಚಿಕ್ಕಮಗಳೂರು: ತಾಲೂಕಿನ ಅತ್ತಿಗುಂಡಿ ಗ್ರಾಮದ ಗಾಲ್ಟಿ ಎಸ್ಟೇಟ್ನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಕೂಲಿ ಕಾರ್ಮಿಕರ ಎಸ್ಟೇಟ್ನ ಲೈನ್ ಮನೆಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ.
ಕೆಲ ದಿನಗಳ ಹಿಂದೆ ಕಾಳಿಂಗ ಸರ್ಪ ಮನೆಯಲ್ಲೇ ವಾಸಗಾಗಿತ್ತು. ಹೀಗಾಗಿ ಕಾರ್ಮಿಕರು ಹೆದರಿ ಪಕ್ಕದ ಲೈನ್ ಮನೆಯಲ್ಲಿ ವಾಸವಾಗಿದ್ದರು. ಆದರೆ ಪ್ರತಿ ದಿನ ಮಧ್ಯಾಹ್ನದ ಸಮಯದಲ್ಲಿ ರಸ್ತೆ ಮಧ್ಯೆ ಬಂದು ಕಾರ್ಮಿಕರಿಗೆ ಭಯ ಹುಟ್ಟಿಸುತ್ತಿತ್ತು. 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಂಡು ಜನ ದಂಗಾಗಿದ್ದಾರೆ. ಕೂಡಲೇ ಉರಗ ತಜ್ಞ ನರೇಶ್ ಅವರನನು ಕರೆಯಿಸಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ.
ಇನ್ನು, ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ ವೇಳೆ ಹಲವು ಬಾರಿ ಉರಗ ತಜ್ಞನಿಗೆ ಅಟ್ಯಾಕ್ ಮಾಡಲು ಮುಂದಾಗಿದೆ. ಆದರೂ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಸ್ನೇಕ್ ನರೇಶ್, ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post