ಯಾರು ನಿಜವಾದ ದೇಶಭಕ್ತರು..? ಭಾರತೀಯ ಕ್ರಿಕೆಟಿಗರಾ..? ಇಲ್ಲ ವಿದೇಶಿ ಆಟಗಾರರಾ..? ಪ್ಯಾಟ್ ಕಮ್ಮಿನ್ಸ್, ಮಿಚ್ಚೆಲ್ ಸ್ಟಾರ್ಕ್, ಸ್ಯಾಮ್ ಬಿಲ್ಲಿಂಗ್ಸ್.. ಈ ಮೂವರು ಆಟಗಾರರು ಐಪಿಎಲ್ನಿಂದ ಹಿಂದೆ ಸರಿದ ಬೆನ್ನಲೆ, ಈ ಚರ್ಚೆ ಶುರುವಾಗಿದೆ. ಹಾಗಾದ್ರೆ ಕ್ರಿಕೆಟಿಗರಿಗೆ ದೇಶಭಕ್ತಿ ಇರ್ಬೇಕಾ.. ಇಲ್ಲ ಹಣದ ಮೇಲೆ ವ್ಯಾಮೋಹ ಇರ್ಬೇಕಾ..?
ದೇಶ ಮೊದಲ..? ಐಪಿಎಲ್ ಮೊದಲ..? ಈ ಪ್ರಶ್ನೆ ಸಾಕಷ್ಟು ಬಾರಿ, ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗಿತ್ತು. ಆದ್ರೆ ಉತ್ತರ ಮಾತ್ರ, ಸಿಗಲಿಲ್ಲ. ಹೌದು, ಕೆಲ ಕ್ರಿಕೆಟಿಗರು ದೇಶವನ್ನ ಪ್ರತಿನಿಧಿಸೋ ಕನಸು ಕಾಣ್ತಾರೆ. ಇನ್ನೂ ಕೆಲವರು, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆಡಿದ್ರೆ ಸಾಕಪ್ಪ ಅಂತಾರೆ. ಇದಕ್ಕೆ ಕಾರಣಾನೂ ಇದೆ. ದೇಶವನ್ನ ಪ್ರತಿನಿಧಿಸೋ ಆಟಗಾರನಿಗಿಂತ, ಐಪಿಎಲ್ ಆಡಿದ ಕ್ರಿಕೆಟಿಗನೇ ಶ್ರೀಮಂತನಾಗ್ತಾನೆ.
ನಿಜ, ಕಂಟ್ರಿ ವರ್ಸಸ್ ಕ್ಲಬ್ ಡಿಬೇಟ್ಗೆ, ಇನ್ನೂ ಫುಲ್ ಸ್ಟಾಪ್ ಬಿದ್ದಿಲ್ಲ. ಆಗಲೇ ಮತ್ತೊಂದು ಹೊಸ ಚರ್ಚೆ ಶುರುವಾಗಿದೆ. ನಿಜವಾದ ದೇಶಭಕ್ತರು ಯಾರು..? ಭಾರತೀಯ ಕ್ರಿಕೆಟಿಗರಾ..? ಇಲ್ಲ ವಿದೇಶಿ ಆಟಗಾರರಾ ಅನ್ನೋದು..! ಐಪಿಎಲ್ ಸೀಸನ್-16ರ ಹರಾಜು ಪ್ರಕ್ರಿಯೆಗೂ ಮುನ್ನ, ಈ ಪ್ರಶ್ನೆ ಬಿರುಗಾಳಿಯಂತೆ ಎಲ್ಲೆಡೆ ಬೀಸ್ತಿದೆ.! ವಿದೇಶಿ ಕ್ರಿಕೆಟಿಗರ ದಿಟ್ಟ ನಿರ್ಣಯವೇ, ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ.
ದೇಶ ಸೇವೆ ಮೊದಲು, ಐಪಿಎಲ್ ಆಮೇಲೆ…!
ವಿದೇಶಿ ಆಟಗಾರರು, ಮುಂದಿನ ವರ್ಷ ಐಪಿಎಲ್ ಆಡದಿರಲು ನಿರ್ಧರಿಸಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್, ಮಿಚ್ಚೆಲ್ ಸ್ಟಾರ್ಕ್ ಮತ್ತು ಇಂಗ್ಲೆಂಡ್ನ ಸ್ಯಾಮ್ ಬಿಲ್ಲಿಂಗ್ಸ್, ನಮಗೆ ಐಪಿಎಲ್ಗಿಂತ ದೇಶವೇ ಮುಖ್ಯ ಎಂದಿದ್ದಾರೆ. ಌಷಸ್ ಟೆಸ್ಟ್ ಸರಣಿ ಮತ್ತು ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಈ ಆಟಗಾರರು, ಐಪಿಎಲ್ಗೆ ಟಾಟ ಹೇಳಿದ್ದಾರೆ. ನಮ್ಗೆ ಐಪಿಎಲ್ಗಿಂತ ದೇಶನೇ ಫಸ್ಟ್ ಅಂತ ನೇರ ಸಂದೇಶ ರವಾನಿಸಿದ್ದಾರೆ.
ದೇಶವನ್ನ ಪ್ರತಿನಿಧಿಸೋಕೆ ಸುಸ್ತು..!
ಐಪಿಎಲ್ ಆಡೋದೇ ಮಸ್ತು..!
ವಿದೇಶಿ ಆಟಗಾರರ ಕಥೆ ಒಂಥರ ಆದ್ರೆ, ನಮ್ಮವರ ಕಥೆ ಬೇರೇನೆ. ಇವ್ರು ದೇಶವನ್ನ, ಕಷ್ಟಪಟ್ಟು ಪ್ರತಿನಿಧಿಸ್ತಾರೆ. ಹೆಂಗೋ ಕಂಟ್ರ್ಯಾಕ್ಟ್ ಇದಿಯಲ್ವಾ..? ವರ್ಷಕ್ಕೆ ಏನ್ ಬರ್ಬೇಕೋ ಅದು ಬರುತ್ತೆ. ಆಗಾಗ ಸುಸ್ತು, ಫಿಸಿಕಲ್ ಫೆಟೀಗ್, ಅದು ಇದು ಅಂತ ಬ್ರೇಕ್ ಪಡಿತಾರೆ. ಆದ್ರೆ ಐಪಿಎಲ್ ಬಂದ್ರೆ ಹಾಗಲ್ಲ. ಇವ್ರ ರೋಷ, ಕೆಚ್ಚೆದೆಯ ಹೋರಾಟ ನೋಡ್ಬೇಕು. ಗಾಯವನ್ನೂ ಲೆಕ್ಕಿಸದೇ, ಫ್ರಾಂಚೈಸಿಗಳ ಪರ ಆರ್ಭಟಿಸ್ತಾರೆ. ಯಾಕಂದ್ರೆ ಟೀಮ್ ಇಂಡಿಯಾದಲ್ಲಿ ಆಡ್ಬೇಕಾದ್ರೆ ಇವ್ರಿಗೆ ಅಷ್ಟು ಮಜ ಸಿಗಲ್ಲ. ಐಪಿಎಲ್ನ AFTER PARTY, ಕಲರ್ಫುಲ್ ನೈಟ್ಸೇ, ಇವ್ರಿಗೆ ತುಂಬಾ ಇಷ್ಟಾ ಆಗೋದು.
ದೇಶಿ ಕ್ರಿಕೆಟ್ ಕಡೆಗಣನೆ.. ಐಪಿಎಲ್ಗೆ ಹೆಚ್ಚು ಮನ್ನಣೆ..!
ಇನ್ನು ಭಾರತೀಯ ಕ್ರಿಕೆಟಿಗರು, ಐಪಿಎಲ್ಗೆ ಹೆಚ್ಚು ಮನ್ನಣೆ ನೀಡೋದಕ್ಕೂ ಕಾರಣ ಇದೆ. ಯಾಕಂದ್ರೆ ಐಪಿಎಲ್ನ ಸ್ಟ್ಯಾಂಡರ್ಡೇ ಬೇರೆ, ದೇಶಿ ಕ್ರಿಕೆಟ್ನ ಸ್ಯಾಂಡರ್ಡೇ ಬೇರೆ. ಐಪಿಎಲ್ನಲ್ಲಿ ಆಡಿ ಮಿಂಚಿದ್ರೆ, ಭಾರತ ಅಷ್ಟೇ ಅಲ್ಲ. ಇಡೀ ವಿಶ್ವವೇ ನೋಡುತ್ತೆ.. ಆದ್ರೆ ದೇಶಿ ಕ್ರಿಕೆಟ್ನಲ್ಲಿ ಟನ್ಗಟ್ಟಲೇ ರನ್, ವಿಕೆಟ್ ಮೇಲೆ ವಿಕೆಟ್ ತೆಗೆದ್ರು, ಸಿಗೋ ಮನ್ನಣೆ ಅಷ್ಟಕಷ್ಟ..! ಇದ್ರಿಂದ ಯುವ ಆಟಗಾರರಿಗೆ, ದೇಶಿ ಕ್ರಿಕೆಟ್ ಮೇಲೆ ಅಷ್ಟೊಂದು ಆಸಕ್ತಿ ಇಲ್ಲ.
ಡೊಮೆಸ್ಟಿಕ್ ಕ್ರಿಕೆಟ್ನ ಮರತೇ ಬಿಟ್ರಾ ಟೀಮ್ ಇಂಡಿಯಾ ಸ್ಟಾರ್..?
ಹಿರಿಯರು ಒಳ್ಳೆ ಮಾರ್ಗದರ್ಶನ ತೋರಿಸಿದ್ರೆ, ಕಿರಿಯರು ಅದನ್ನ ಫಾಲೋ ಮಾಡ್ತಾರೆ. ಆದ್ರೆ ನಮ್ಮ ಹಿರಿಯ ಕ್ರಿಕೆಟಿಗರು, ಬೇರೆಯವರಿಗೆ ದಾರಿ ತೋರೋದು ಇರಲಿ. ಅವ್ರು ಹೋಗೋ ದಾರಿನೇ ಡಿಫರೆಂಟ್. ಟೀಮ್ ಇಂಡಿಯಾದ ಬಿಗ್ಸ್ಟಾರ್ಸ್ಗೆ, ಡೊಮೆಸ್ಟಿಕ್ ಕ್ರಿಕೆಟ್ ಅಂದ್ರೇನೆ ಗೊತ್ತಿಲ್ಲ. ರಹಾನೆ, ಪೂಜಾರ ಬಿಟ್ರೆ, ಉಳಿದವರು ದೇಶಿ ಕ್ರಿಕೆಟ್ನ ಬಹುಶ: ಮರತಂತೆ ಕಾಣ್ತದೆ.
ತಪ್ಪು ಯಾರದ್ದು..? ಆಟಗಾರರದ್ದಾ ಬಿಸಿಸಿಐ ಬಾಸ್ಗಳದ್ದಾ..?
ಬಿಸಿಸಿಐ ಬಿಗ್ಬಾಸ್ಗಳು, ಯುವ ಕ್ರಿಕೆಟಿಗರಿಗೆ ದುಡ್ಡಿನ ರುಚಿ ತೋರಿಸಿ, ಅವ್ರನ್ನ ಹಾಳುಮಾಡಿದ್ದಾರೆ. ಈಗಿರೋ ಯುವ ಕ್ರಿಕೆಟಿಗರನ್ನ ದೇಶ ಫಸ್ಟಾ.. ಐಪಿಎಲ್ ಫಸ್ಟಾ ಅಂತ ಕೇಳಿದ್ರೆ, ಐಪಿಎಲ್ ಆಡಿದ್ರೆ ದುಡ್ ಬರುತ್ತೆ ಗುರು. ಟೀಮ್ ಇಂಡಿಯಾಕ್ಕೆ ಆಡೋರು ಬೇಜಾನ್ ಜನ ಇದ್ದಾರೆ ಅಂತ, ಹೇಳದೇ ಇರೋದಿಲ್ಲ. ಹೀಗಿರುವಾಗ ಆಟಗಾರರನ್ನ ಬೈದರೆ ಪ್ರಯೋಜನ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post