ಮೈಸೂರು: ಬಿಜೆಪಿ ನಡುವೆ ಬಸ್ ನಿಲ್ದಾಣದ ಗುಂಬಜ್ ದಂಗಲ್ ವಿಚಾರಕ್ಕೆ ಸಂಬಂಧಿಸಿ ಶಾಸಕ ರಾಮದಾಸ್ ಅವರಿಗೆ ಕಿರುಕುಳ ಕೊಡಷ್ಟು ದೊಡ್ಡವನಲ್ಲ ಎಂದು ಸಂಸದ ಪ್ರತಾಪ್ ಸಿಂಹ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು.. ವಿನ್ಯಾಸ ಕೊಡಲು ಯಾರಿಗೂ ಅಧಿಕಾರ ಇಲ್ಲ. ಸರ್ಕಾರ ಹೇಳಿದ್ದೇ ಫೈನಲ್. ಇದು ಸಿಎಂ ಬಳಿ ಹೋಗುವಂತಹ ವಿಚಾರ ಅಲ್ಲವೇ ಅಲ್ಲ. ಇದು ಇಂಜಿನೀಯರ್ ಬಳಿಯೇ ತೀರ್ಮಾನ ಆಗಬೇಕು. ರಾಮದಾಸ್ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದವರು. ಗುಂಬಜ್ ಗಲಾಟೆ ಟಿಪ್ಪು ಅಭಿಮಾನಿಗಳಿಗೆ ಕಿರುಕುಳ ಅನಿಸಬೇಕೇ ಹೊರತು ಶಿವಾಜಿ ಅನುಯಾಯಿಗಳಿಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಅವ್ರು ಯಾವ ಅರ್ಥದಲ್ಲಿ ಕಿರುಕಳ ಅಂತ ಹೇಳಿದ್ದಾರೆ ಎಂದು ಗೊತ್ತಿಲ್ಲ. ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ ನಾನು. ಮೈಸೂರಿನಲ್ಲಿರುವ ರಾಜಕಾರಣಿಗಳು ಮಾಡಿರುವ ದುಡ್ಡನಲ್ಲೇ ನನ್ನನ್ನು ಸುಟ್ಟು ಹಾಕುವಷ್ಟು ಶಕ್ತಿ ಅವರಿಗೆ ಇದೆ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹ ತಿವಿದರು. ನಾನು ಕೊಟ್ಟ ಗಡುವು ಮುಗಿದಿದೆ. NHAIನ ಪ್ರಕಾರ ಆ ಕಟ್ಟಡನೇ ಅನಧಿಕೃತ ಎಂದಿದೆ. ಅವರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅಂತ ನಾನು ಕಾಯುತ್ತಿದ್ದೀನಿ. ಕಾನೂನುಗಿಂತ ದೊಡ್ಡವರು ಯಾರೂ ಇಲ್ಲ. ಹೀಗಾಗಿ ನಾನು ನವೆಂಬರ್ 22ರವರೆಗೆ ಕಾಯುತ್ತೀನಿ ಎಂದಿದ್ದಾರೆ.
NOC ಪಡೆಯದೇ ಬಸ್ ನಿಲ್ದಾಣ ನಿರ್ಮಾಣ
ಬಸ್ ಸ್ಟ್ಯಾಂಡ್ನ ಗುಂಬಜ್ ನಿರ್ಮಿಸಿ ಮಸೀದಿ ರೀತಿ ಮಾಡಿದ್ದೀರಿ. ಅದನ್ನ ಮೂರು-ನಾಲ್ಕು ದಿನದಲ್ಲಿ ತೆರವು ಮಾಡಬೇಕು. ಅದು ಮೂಲ ವಿನ್ಯಾಸಕ್ಕೆ ಅನುಗುಣವಾಗಿಲ್ಲ. ಅದಕ್ಕೆ ಯಾವುದೇ ಒಪ್ಪಿಗೆಯಿಲ್ಲ. ಅದನ್ನು ನೀವು ತೆರವು ಮಾಡಿಲ್ಲ ಅಂದರೆ ನಾನೇ ಹೋಗಿ ಗುಂಬಜ್ ತೆರವು ಮಾಡ್ತೀನಿ ಎಂದಿದ್ದು ನಿಜ. ಈ ಮೂರು-ನಾಲ್ಕು ದಿನ ಮುಗಿದಿದೆ. 15ನೇ ತಾರೀಖು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಅವರು ಕೆಆರ್ಐಡಿಎಲ್ ಮತ್ತು ಮೈಸೂರು ಪಾಲಿಕೆಗೆ ನೋಟಿಸ್ ಕೊಟ್ಟಿದ್ದಾರೆ. NHAIನ ಅನುಮತಿ ಪಡೆಯದೇ ಹಾಗೂ NOC ಪಡೆಯದೇ ನೀವು ಯಾವ ರೀತಿ ನಿಲ್ದಾಣ ನಿರ್ಮಿಸಿದ್ದೀರಿ. ಈ ಹಿಂದೆ 2 ಸಾರಿ ಕಾಮಗಾರಿ ತಡೆದ್ರೂ ಕೂಡ ಯಾಕೆ ನೀವು ನಿಲ್ಲಿಸಿಲ್ಲ ಎಂದು ಪ್ರಶ್ನಿಸಿದರು.
ರಾತ್ರಿಯಲ್ಲಿ ಕದ್ದುಮುಚ್ಚಿ ಕೆಲಸ ಮಾಡೋದು ಯಾಕೆ..?
ನೋಟಿಸಿ ನೀಡಿ 7 ದಿನ ಗಡುವು ಕೊಟ್ಟಿದ್ದಾರೆ. ರಾಮನಗರದಲ್ಲಿರೋ NHAIನ ಆಫೀಸ್ಗೆ ಬಂದು ಸ್ಪಷ್ಟನೆ ಕೊಡಬೇಕು ಅಂತನೂ ಹೇಳಿದ್ದಾರೆ. ನಿನ್ನೆ ಅಲ್ಲಿಗೆ ಹೋಗಿ ಹೊಸ ವಿನ್ಯಾಸ ಕೊಡಬೇಕಾದ್ರೆ ಪೊಲೀಸ್ ಠಾಣೆಗೆ ಹೋಗಿ ಅದನ್ನು ತಡೆದಿದ್ದಾರೆ. NHAI ಅಧಿಕಾರಿಗಳು ತಡೆದ್ರೂ ರಾತ್ರಿ ಬಂದು ಗುಂಬಜ್ಗೆ ಬಣ್ಣ ಹಾಕಿ, ಕಳಸ ಇಟ್ಟು, ಕೇಸರಿ ಬಣ್ಣ ಬಳಿದಿದ್ದಾರೆ. ರಾತ್ರಿಯಲ್ಲಿ ಕದ್ದುಮುಚ್ಚಿ ಕೆಲಸ ಮಾಡೋದು ಕಳ್ಳರು. ಇವರು ಯಾಕೆ ರಾತ್ರಿ ಮಾಡಬೇಕು. ಬಸ್ ನಿಲ್ದಾಣಕ್ಕೆ ಯಾರ ಭಾವಚಿತ್ರ ಹಾಕಬಾರದು. ಆದ್ರೆ ಇವರು ಹಾಕಿದ್ದಾರೆ ಎಂದು ಪ್ರತಾಪ್ ಸಿಂಹ ನ್ಯೂಸ್ಫಸ್ಟ್ಗೆ ಹೇಳಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post