ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್. ಈ ದೊಡ್ಡ ರಿಯಾಲಿಟಿ ಶೋಗೆ ಅದೆಷ್ಟೋ ಜನ ಹೋಗಬೇಕು ಎಂದು ಹಂಬಲಿಸುತ್ತಿರುತ್ತಾರೆ. ಅದರಲ್ಲಿ ಕೆಲವೊಬ್ಬರಿಗೆ ಮಾತ್ರ ಈ ಅವಕಾಶ ಒದಗಿ ಬರುತ್ತದೆ. ಬಿಗ್ಬಾಸ್ ಮನೆಯಲ್ಲಿ ಬೇರೆ ಬೇರೆ ವ್ಯಕ್ತಿತ್ವಗಳಿಂದ ಕೂಡಿದ ಹತ್ತಾರು ಸದ್ಯಸರು, ಬಿಗ್ಬಾಸ್ ನೀಡುವ ಟಾಸ್ಕ್ಗಳು, ಕಾಂಪಿಟೇಷನ್, ನಾಮಿನೇಷನ್, ಎಲಿಮಿನೇಷನ್ ಎಲ್ಲವು ಇರುತ್ತವೆ. ಈ ತರಹದ ಅವಕಾಶಗಳು ಒಮ್ಮೆ ಮಾತ್ರ ದಕ್ಕುತ್ತವೆ.
ಬಿಗ್ಬಾಸ್ ಸೀಸನ್ 9ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಎಂಬ ವಿಶೇಷ ಅವಕಾಶವೊಂದನ್ನ ಇಡಲಾಗಿದೆ. ಈಗ ಇದೇ ವಿಷಯ ಆಚೆ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಾರಿ ಯಾರು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ನಮಗೆ ಗೊತ್ತಾಗಿದೆ. ಬಿಗ್ಬಾಸ್ ಒಟಿಟಿ ಸೀಸನ್ 1ರ ಫಿನಾಲೆ ಕಂಟೆಸ್ಟೆಂಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಸೀಸನ್ 9ರ ಎಂಟ್ರಿ ಪಡೆಯಬಹುದು ಎಂಬ ಗುಸು ಗುಸು ಮಾತು ಆಚೆ ಬಾರಿ ಚರ್ಚೆ ನಡೀತಿದೆ.
ಈ ಮಧ್ಯೆ ಸೋನು ಗೌಡ ವೈಲ್ಡ್ ಕಾರ್ಡ್ ಎಂಟ್ರಿಗೆ ಬರ್ತಾರಾ? ಬರೋಲ್ವೋ ? ಅನ್ನೋ ಚರ್ಚೆ ಇವತ್ತಿಗೂ ನಡೀತಿದೆ. ಆ ಚರ್ಚೆ ಮಾಡ್ತಿರೋ ಮಂದಿಗೆ ನಮ್ಮ ಕಡೆಯಿಂದ ಒಂದು ಸುದ್ದಿ ಇದೆ. ಸೋನು ಅಕ್ಕ-ಪಕ್ಕ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬರೋದಿಲ್ಲ. ಇದಂತೂ ಸತ್ಯ.
ಒಂದು ಮೂಲಗಳ ಪ್ರಕಾರ ಸೋನು ಗೌಡಗೆ ವೈಲ್ಡ್ ಕಾರ್ಡ್ ಎಂಟ್ರಿಗೆ ರೆಡಿಯಾಗಿ ಅನ್ನೋ ಮೆಸೇಜ್ ಪಾಸಾಗಿತ್ತಂತೆ. ಆ ಖುಷಿಯಲ್ಲಿ ಸೋನು ಗೌಡ ಬರೋಬ್ಬರಿ 2 ಲಕ್ಷ ರೂಪಾಯಿ ಶಾಪಿಂಗ್ ಮಾಡಿರೋ ಮಾಹಿತಿ ನಮಗೆ ಲಭ್ಯವಾಗಿದೆ. ಓಟಿಟಿ ಸೀಸನ್‌ನಲ್ಲಿ ಹಾಕಿರೋ ಒಂದೇ ಒಂದು ಡ್ರೆಸ್ ಕೂಡ ರಿಪೀಟ್ ಆಗಬಾರದು ಅಂತಾ ಡಿಸೈಡ್ ಮಾಡಿದ್ದ ಸೋನು ಗೌಡ, 2 ಲಕ್ಷ ರೂಪಾಯಿಗೆ ಶಾಪಿಂಗ್ ಮಾಡಿ, ಪ್ಯಾಕ್ ಮಾಡ್ಕೊಂಡು ಕಾಯ್ತಾ ಇದ್ದಾರಂತೆ.
ಆ ಸಮಯದಲ್ಲೇ ಸೋನು ಗೌಡ ಆರೋಗ್ಯ ಕೈಕೊಟ್ಟಿದ್ಯಂತೆ. ಹೀಗಾಗಿ ಯಾವ ಕರೆಯನ್ನೂ ಸ್ವೀಕರಿಸಲು ಆಗಲಿಲ್ವಂತೆ. ಹೀಗಾಗಿ ಸೋನು ಗೌಡ ಬೇಜಾರ್ ಆಗ್ಬಿಟ್ಟಿದ್ದಾರೆ. 2 ಲಕ್ಷ ರೂಪಾಯಿ ಶಾಪಿಂಗ್ ಮಾಡಿದ್ದಕ್ಕಂತೂ ಅಲ್ಲ. ಯಾಕಂದ್ರೆ ಬಟ್ಟೆ ಯಾವಾಗ ಬೇಕಾದ್ರೂ ಹಾಕೋಬಹುದು. ಕೈಗೆ ಬಂದಿದ್ದ ಆಫರ್ ಮನೆಗೆ ಒಳಗೆ ಹೋಗೋವಷ್ಟರಲ್ಲಿ ಮಿಸ್ ಆಯ್ತಲ್ಲ ಅನ್ನೋದಷ್ಟೇ ಸೋನುಗೆ ಬೇಜಾರ್ ಆಗಿದೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post