ಶಿವಮೊಗ್ಗ: ವಿವಾಹಿತ ಹಿಂದೂ ಮಹಿಳೆಗೆ ಡಿವೋರ್ಸ್ ಕೊಡಿಸಿ, ನಂತರ ಆಕೆಯನ್ನ ಮದುವೆಯಾಗಿ ಇದೀಗ ಮತಾಂತರ ಆಗುವಂತೆ ಟಾರ್ಚರ್ ನೀಡಿದ ಆರೋಪ ಕೇಳಿಬಂದಿದೆ. ತೀರ್ಥಹಳ್ಳಿ ನಿವಾಸಿ ಅಬ್ದುಲ್ ಖಾದರ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಆರೋಪ ಪ್ರಕರಣ..?
ತೀರ್ಥಹಳ್ಳಿ ಮೂಲದ ಮಹಿಳೆ ಒಬ್ಬರಿಗೆ ಮತಾಂತರಕ್ಕೆ ಒತ್ತಾಯಿಸಿದ ಆರೋಪ ಕೇಳಿಬಂದಿದೆ. ಹತ್ತು ವರ್ಷಗಳ ಹಿಂದೆಯೇ ಸಂತ್ರಸ್ತ ಮಹಿಳೆ ಶ್ರೀನಿವಾಸ್ ಎಂಬುವವರನ್ನ ಮದುವೆಯಾಗಿದ್ದರು. ಹೊಟ್ಟೆಪಾಡಿಗಾಗಿ ತೀರ್ಥಹಳ್ಳಿಯಲ್ಲಿರುವ ಡಯಾಲಿಸಿಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡ್ತಿದ್ದಳು.
ಈ ವೇಳೆ ಅದೇ ಸೆಂಟರ್ನಲ್ಲಿ ಅಬ್ದುಲ್ ಖಾದರ್ ಕೂಡ ಕೆಲಸ ಮಾಡುತ್ತಿದ್ದ. ಇಬ್ಬರು ಒಂದೇ ಕಡೆ ಇದ್ದರಿಂದ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು. ಆ ಸ್ನೇಹ ಮುಂದೊಂದು ದಿನ ಪ್ರೀತಿಯಾಗಿ ಇಬ್ಬರೂ ಸಂಪರ್ಕದಲ್ಲಿದ್ದರು. ಇಬ್ಬರ ನಡುವಿನ ಪ್ರೀತಿ-ಪ್ರೇಮ ಜಾಸ್ತಿಯಾದ ನಂತರ, ಶ್ರೀನಿವಾಸ್ಗೆ ಡಿವೋರ್ಸ್ ನೀಡುವಂತೆ ಅಬ್ದುಲ್ ಒತ್ತಡ ಹೇರಿದ್ದನಂತೆ. ಅದರಂತೆ 2020ರಲ್ಲಿ ಸಂತ್ರಸ್ತ ಮಹಿಳೆ ಗಂಡನಿಗೆ ಡಿವೋರ್ಸ್ ಕೊಟ್ಟು ಬಂದಿದ್ದಳು.
ನಂತರ ಅಬ್ದುಲ್ ಖಾದರ್ ಜೊತೆ ಮಹಿಳೆ ರಿಜಿಸ್ಟರ್ ಮದುವೆ ಆಗಿದ್ದಳು. ಮದುವೆ ಬಳಿಕ ಇಬ್ಬರೂ ಚಿತ್ರದುರ್ಗಕ್ಕೆ ಶಿಫ್ಟ್ ಆಗಿದ್ದರು. ಅದಾದ ನಂತರ ಇವರಿಬ್ಬರಿಗೂ ಒಂದು ಮಗು ಕೂಡ ಆಗುತ್ತದೆ. ಡೆಲಿವರಿ ನಂತರ ಆ ಮಹಿಳೆಗೆ ಖಾದರ್ ಟಾರ್ಚರ್ ನೀಡಲು ಶುರುಮಾಡಿದ್ದಾನೆ. ನಿತ್ಯವೂ ಕುಡಿದು ಬಂದು ಧರ್ಮ ಹಾಗೂ ಜಾತಿ ನಿಂದನೆ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನ ಶುರುಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post