ಇಂದಿನಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸೂರ್ಯಕುಮಾರ್ ಯಾದವ್‌ಗೆ ಅದ್ಭುತ ಅವಕಾಶ ಸಿಕ್ಕಿದೆ. 2016ರ ವರ್ಷದಲ್ಲಿ ಕೊಹ್ಲಿ, 31 ಟಿ20 ಪಂದ್ಯಗಳಲ್ಲಿ 1614 ರನ್ ಗಳಿಸಿದ್ರು. ಇದು ಕ್ಯಾಲೆಂಡರ್ ವರ್ಷ ಒಂದರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ರು. ಇದೀಗ ಸೂರ್ಯ 1378 ರನ್ ಗಳಿಸಿದ್ದು, ವಿರಾಟ್ ದಾಖಲೆ ಮುರಿಯಲು ಬರೀ 236 ರನ್ಗಳ ಅಗತ್ಯವಿದೆ.
Preps ✅
Time to hit the ground running 👍 👍#TeamIndia | #NZvIND pic.twitter.com/2Z6te21HpK
— BCCI (@BCCI) November 18, 2022
ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ಸರಣಿಯತ್ತ ಚಿತ್ತ ಹರಿಸಿರುವ ಟೀಂ ಇಂಡಿಯಾ, ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಸರಣಿ ಟೀಂ ಇಂಡಿಯಾ ಯುವ ಆಟಗಾರರಿಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಇಲ್ಲಿ ಉತ್ತಮವಾಗಿ ಪರ್ಫಾಮ್ ಮಾಡೋ ಆಟಗಾರರಿಗೆ ಭವಿಷ್ಯದಲ್ಲಿ ಮನ್ನಣೆ ಹಾಕುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ; ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್/ಸಂಜು ಸ್ಯಾಮ್ಸನ್/ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್/ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಚಹಲ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post